ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣ : ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲು

New Delhi : ಭಾರತದ (India) ಕುಸ್ತಿ ಒಕ್ಕೂಟದ (WFI) ಮುಖ್ಯಸ್ಥ ಹಾಗೂ ಬಿಜೆಪಿ (BJP) ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ ಆರೋಪದ ವಿಷಯಕ್ಕೆ (FIR registered against BrijBhushan) ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.

ಬ್ರಿಜ್ ಭೂಷಣ್ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸರು ವಿಳಂಬ ಮಾಡಿದ ಕಾರಣದಿಂದ ದೇಶದ ಅಗ್ರ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ಮಾಡಿದ ಒಂದು ವಾರ ಬಳಿಕ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಅಪ್ರಾಪ್ತ ವಯಸ್ಸಿನ ಕುಸ್ತಿಪಟ್ಟು ಸೇರಿದಂತೆ ಒಟ್ಟು ಏಳು ಮಂದಿ ಮಹಿಳಾ ಕುಸ್ತಿಪಟುಗಳು ಸೇರಿ ಬ್ರಿಜ್

ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ (Sexual harassment) ಹಾಗೂ ಕ್ರಿಮಿನಲ್ ಕೇಸ್ ವಿರುದ್ಧ ದೂರು ನೀಡಿದ್ದರು.


ಮೊದಲನೇ ಎಫ್ಐಆರ್ :


ಅಪ್ರಾಪ್ತ ವಯಸ್ಸಿನ ಕುಸ್ತಿಪಟು ಮಾಡಿರುವ ಆರೋಪಕ್ಕೆ ಸಂಭಂದಿಸಿದಂತೆ ಪೋಕ್ಸೋ ಕಾಯ್ದೆಯಡಿ (POCSO Act)

ಹಾಗೂ ಭಾರತೀಯ ದಂಡ ಸಂಹಿತೆಯ ಸೂಕ್ತ ಸೆಕ್ಷನ್ಗಳಡಿ ಈ ಪ್ರಕರಣವನ್ನು ಮೊದಲನೇ ಎಫ್ಐಆರ್ (FIR) ನಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ :https://vijayatimes.com/more-expensive-mushroom/


ಎರಡನೇ ಎಫ್ಐಆರ್ :

ಎರಡನೇ ಎಫ್ಐಆರ್ ನಲ್ಲಿ ಮಹಿಳಾ ಕುಸ್ತಿಪಟುಗಳು ಮಾಡಿರುವ ಆರೋಪದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ.

ಶುಕ್ರವಾರ ದೆಹಲಿ ಪೊಲೀಸರು ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಿ ಎಫ್ಐಆರ್ ದಾಖಲಿಸುವ ಭರವಸೆ ನೀಡಿದ್ದರು. ವಿಶ್ವ ಚಾಂಪಿಯನ್ಶಿಪ್ (World Championship) ಪದಕ ವಿಜೇತೆ ವಿನೇಶ್ ಪೋಗತ್,

ಟೋಕಿಯೋ ಒಲಂಪಿಕ್ಸ್ 2018 ಪದಕ ವಿಜೇತೆ ಬಜರಂಗ್ ಪುನಿಯಾ ಹಾಗೂ ರಿಯೊ 2016 ರ ಪದಕ ವಿಜೇತೆ ಸಾಕ್ಷಿ ಮಲಿಕ್ ಸೇರಿದಂತೆ ಹಲವು

ಮಂದಿ ಕುಸ್ತಿಪಟುಗಳು (Wrestlers) ಕಳೆದ ಭಾನುವಾರದಿಂದ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.


ಜನವರಿಯಲ್ಲಿ ಕ್ರೀಡಾ ಸಚಿವಾಲಯದ ಮುಂದೆ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಇಂಡಿಯನ್ ಒಲಂಪಿಕ್ ಅಸೋಸಿಯೇಷನ್ (Indian Olympic Association) ಕುಸ್ತಿಪಟುಗಳಿಗೆ

ಈ ವಿಚಾರವಾಗಿ ನ್ಯಾಯ ಸಿಗಲಿದೆ ಎಂದು ಭರವಸೆ ನೀಡಿ ಮೇಲ್ವಿಚಾರಣಾ ಸಮಿತಿ ನೇಮಕ ಮಾಡಿತ್ತು.

ಮೂರು ತಿಂಗಳು ಕಳೆದರೂ ಈ ಸಮಿತಿಯ ನೇಮಕವನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಭಾನುವಾರದಿಂದ ಪ್ರತಿಭಟನೆ (FIR registered against BrijBhushan) ಮುಂದುವರೆಯಲಿದೆ ಎಂದು ಕುಸ್ತಿಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : https://vijayatimes.com/business-without-investment/


ಪಿ.ಟಿ ಉಪಾ ಹೇಳಿಕೆಗೆ ತೀವ್ರ ಆಕ್ರೋಶ :

ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷೆಯಾಗಿರುವ ಪಿ.ಟಿ ಉಷಾ (Indian Olympic Association President PT Usha)

ಅವರು ‘ಕುಸ್ತಿಪಟುಗಳು ಮಾಡುತ್ತಿರುವ ಪ್ರತಿಭಟನೆಯಿಂದ ದೇಶಕ್ಕೆ ಅವಮಾನವಾಗಿದೆ’ ಅನ್ನೋ ಹೇಳಿಕೆ ನೀಡಿದ್ದರು.

ಈ ಹೇಳಿಕೆಯ ವಿರುದ್ಧ ಸಾಮಾಜಿಕ ಜಾಣತಾಣದಲ್ಲಿ (Social media) ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಅಲ್ಲದೆ ಪಿ.ಟಿ ಉಷಾ ಒಬ್ಬ ಮಹಿಳೆಯಾಗಿ ಇಂಥಾ ಹೇಳಿಕೆ ನೀಡಬಾರದಿತ್ತು. ಪಿ.ಟಿ ಉಪಾ ಅವರಿಂದ ಇಂಥಾ ಹೇಳಿಕೆ ನಿರೀಕ್ಷಿಸಿರಲಿಲ್ಲ. ಪಿ.ಟಿ ಉಷಾ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಅಂತ ವಿರೋಧ ವ್ಯಕ್ತಪಡಿಸಿದ್ದಾರೆ.

Exit mobile version