ಗುಂಡಿನ ದಾಳಿ: ಅಮೇರಿಕಾದ ಚಿಕಾಗೋದಲ್ಲಿ 2 ಮನೆಗಳ ಮೇಲೆ ಗುಂಡಿನ ದಾಳಿ, 8 ಮಂದಿ ಸಾವು

America: ಅಮೆರಿಕದ ಚಿಕಾಗೋದಲ್ಲಿರುವ ಎರಡು ಮನೆಗಳಲ್ಲಿ ಅಪರಿಚಿತರು (firing in USA – Chicago) ನಡೆಸಿದ ಗುಂಡಿನ ದಾಳಿಯಲ್ಲಿ 8 ಮಂದಿ ಪ್ರಾಣ ಕಳೆದುಕೊಂಡಿದ್ದು, ಚಿಕಾಗೋ

ನಗರದಿಂದ ದೂರದಲ್ಲಿರುವ ಉಪನಗರಗಳಲ್ಲಿ ಗುಂಡಿನ ದಾಳಿ ನಡೆದಿದೆ (firing in USA – Chicago) ಎಂದು ಇಲಿನಾಯ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿನ ದಾಳಿಯ ಉದ್ದೇಶ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ಕೊಲೆಯ ಹಿಂದಿನ ಕಾರಣವನ್ನು ಕಂಡುಹಿಡಿಯಲು ಇನ್ನೂ ಪ್ರಯತ್ನಿಸಲಾಗುತ್ತಿದೆ

ಎಂದು ಪೊಲೀಸರು ತಿಳಿಸಿದ್ದಾರೆ. ಶೂಟರ್‌ಗೆ ಮೃತರ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂದು ಪೊಲೀಸರು (Police) ಹೇಳಿದ್ದಾರೆ. ಸ್ಥಳೀಯ ಪೊಲೀಸರು ಎಫ್‌ಬಿಐ ಕಾರ್ಯಪಡೆಯ ನೆರವಿನೊಂದಿಗೆ

ಆರೋಪಿಗಾಗಿ ವ್ಯಾಪಕ ಶೋಧ (Extensive search for the accused) ನಡೆಸುತ್ತಿದ್ದಾರೆ.

ಚಿಕಾಗೋ ಪೊಲೀಸರು, ಭಾನುವಾರ ಮತ್ತು ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ಆತನ ಮನೆಯಿಂದ ವ್ಯಕ್ತಿಯ

ಶವ ಪತ್ತೆಯಾಗಿದ್ದು, ಉಳಿದ ಏಳು ಮಂದಿಯ ಶವಗಳು ಸೋಮವಾರ ಪತ್ತೆಯಾಗಿವೆ. ಸೋಮವಾರ ಎರಡು ಮನೆಗಳಲ್ಲಿ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆಯ ಕುರಿತು ಪೊಲೀಸ್​ ಅಧಿಕಾರಿಯೊಬ್ಬರು ಮಾತನಾಡಿದ್ದು, ನಾನು 29 ವರ್ಷಗಳಿಂದ ಪೊಲೀಸ್​ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ, ಆದರೆ ಇಂತಹ ಅಪರಾಧವನ್ನು ನೋಡಿರಲಿಲ್ಲ

ಎಂದಿದ್ದಾರೆ. ಜನರು ಯಾವ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ, ಮರಣೋತ್ತರ ಪರೀಕ್ಷೆಗಳು ಬಾಕಿ ಇವೆ ಎಂದು ಹೇಳಿದ್ದಾರೆ.

ಸೋಮವಾರ (ಜ.೨೨) ಮನೆಗಳಲ್ಲಿ ಕಂಡುಬಂದಿರುವ ಶವಗಳು ಒಂದೇ ಕುಟುಂಬದವರದ್ದು ಎನ್ನಲಾಗಿದ್ದು, ಜೋಲಿಯೆಟ್ ಪೋಲೀಸ್ ಸೋಮವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಲವುಜನರು ಸತ್ತಿರುವ

ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ವ್ಯಕ್ತಿಯ ಫೋಟೋ ಮತ್ತು ವಾಹನದ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಅಧಿಕಾರಿಗಳು ವಾಹನವನ್ನು ಕೆಂಪು ಟೊಯೊಟಾ ಎಂದು ಗುರುತಿಸಿದ್ದಾರೆ.

ಫೇಸ್‌ಬುಕ್ ಮೂಲಕ ವಿಲ್ ಕೌಂಟಿ ಶೆರಿಫ್ ಕಚೇರಿಯು ಒಂದು ಕಾರಿನ ಚಿತ್ರವನ್ನು ಹಂಚಿಕೊಂಡಿದೆ. ಕಳೆದ ಅಕ್ಟೋಬರ್​ನಲ್ಲಿ ಅಮೆರಿಕದಲ್ಲಿ ಗುಂಡಿನ ದಾಳಿ ನಡೆದಿದ್ದು, 22ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.

ತನ್ನ ಭುಜದ ಮೇಲೆ ಬಂದೂಕುಧಾರಿಯು ಆಯುಧವನ್ನು ತೂಗುಹಾಕಿಕೊಂಡು ಪ್ರವೇಶಿಸುತ್ತಿರುವುದು ಕಂಡುಬಂದಿತ್ತು, ಬಳಿಕ ಆತ ತಲೆಮರೆಸಿಕೊಂಡಿದ್ದ.

Exit mobile version