ಮೊಧೇರಾ ಗ್ರಾಮ ದೇಶದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ!

Gujarat

Gujarat : ಗುಜರಾತ್‌ನ (First Solar Powered Village) ಮೆಹ್ಸಾನಾ ಜಿಲ್ಲೆಯ ಮೊಧೇರಾ ಗ್ರಾಮವನ್ನು ಭಾರತದ ಮೊದಲ ಸೌರಶಕ್ತಿ ಚಾಲಿತ ಗ್ರಾಮವೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

ಹೌದು, ಗುಜರಾತ್ ರಾಜ್ಯದ ಮೊಧೇರಾ, ದೇಶದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಮೊಧೇರಾದಲ್ಲಿ ಪ್ರಸಿದ್ದ ಸೂರ್ಯ ದೇವಾಲಯವಿದೆ, ಜಗತ್ತಿನಲ್ಲಿ ಸೌರಶಕ್ತಿಯ ಬಗ್ಗೆ (First Solar Powered Village) ಜನರು ಚರ್ಚಿಸಿದಾಗಲೆಲ್ಲಾ ಮೊಧೇರಾ ಗ್ರಾಮದ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತದೆ.

ಈ ಗ್ರಾಮದ ಬಗ್ಗೆ ನರೇಂದ್ರ ಮೋದಿಯವರ ಅಭಿಪ್ರಾಯ ಹೀಗಿದೆ, “ಸರ್ಕಾರವು ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಜನರು ಅದನ್ನು ಖರೀದಿಸುತ್ತಾರೆ. ಆದರೆ ಜನರು ಶಕ್ತಿಯ ಉತ್ಪಾದಕರಾಗಬೇಕೆಂದು ನಾವು ಬಯಸುತ್ತೇವೆ.

https://youtu.be/aol6QOijSSQ

ವಿದ್ಯುತ್ ಗಾಗಿ ಹಣ ಪಾವತಿಸಬೇಡಿ, ಅದನ್ನು ಮಾರಿ ಅದರಿಂದ ಸಂಪಾದಿಸಬೇಕು”. ಹೌದು, ಮೊಧೇರಾದ ಜನರು ವಿದ್ಯುತ್ ಗ್ರಾಹಕರು ಮತ್ತು ಉತ್ಪಾದಕರು.

ಇಲ್ಲಿ ಹೆಚ್ಚುವರಿಯಾಗಿ ಉತ್ಪಾದಿಸಿದ ವಿದ್ಯುತ್ ಅನ್ನು ಸರ್ಕಾರ ಖರೀದಿಸುತ್ತಿದೆ. ಇಂತಹ ಯಶಸ್ವಿ ಪ್ರಯತ್ನಗಳು ದೇಶದಾದ್ಯಂತ ಪುನರಾವರ್ತನೆಯಾಗಬೇಕು ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ : https://vijayatimes.com/kantara-massive-collection/

ಮೊಧೇರಾ ಸೂರ್ಯ ದೇವಾಲಯ ಮತ್ತು ಪಟ್ಟಣದ ಸೌರ ವಿದ್ಯುತೀಕರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯಿಂದ ಆಗಿದೆ.

ಸೂರ್ಯ ದೇವಾಲಯದಿಂದ ಸುಮಾರು 6 ಕಿಮೀ ದೂರದಲ್ಲಿರುವ ಮೆಹ್ಸಾನಾದ ಸುಜ್ಜನಪುರದಲ್ಲಿ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯೊಂದಿಗೆ (ಬಿಇಎಸ್ ಎಸ್) ಗ್ರಾಮವನ್ನು ಸಂಯೋಜಿಸಿದೆ ಎಂದರು.


ಈ ಗ್ರಾಮದಲ್ಲಿ, ವಿದ್ಯುತ್ ಉತ್ಪಾದನೆಗಾಗಿ ಮನೆಗಳ ಮೇಲೆ 1,300 ಕ್ಕೂ ಹೆಚ್ಚು ಛಾವಣಿಯ ಸೌರ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಹಗಲು ಹೊತ್ತು ಸೌರ ಫಲಕಗಳಿಂದ ವಿದ್ಯುತ್ ಬಂದರೆ, ರಾತ್ರಿಯಲ್ಲಿ ಬಿಇಎಸ್‌ಎಸ್‌ನಿಂದ ವಿದ್ಯುತ್ ನ ಪೂರೈಕೆಯಾಗುತ್ತದೆ. ಮೊಧೇರಾ ಸೌರ ಆಧಾರಿತ ಆಧುನಿಕ ವಿದ್ಯುತ್ ವಾಹನ ಚಾರ್ಜಿಂಗ್ ಸ್ಟೇಷನ್ ಹೊಂದಿರುವ ಮೊದಲ ಆಧುನಿಕ ಗ್ರಾಮವಾಗಿದೆ.


ಭಾರತದಲ್ಲಿ ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಹೆಚ್ಚಿಸುವ ಪ್ರಧಾನ ಮಂತ್ರಿಯವರ ಗುರಿಯನ್ನು ಗಮನದಲ್ಲಿಟ್ಟುಕೊಂಡು ಗುಜರಾತ್‌ನಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಸುಸ್ಥಿರ ಅನುಷ್ಠಾನವನ್ನು ಖಚಿತಪಡಿಸಿದೆ ಎಂದು ಗುಜರಾತ್ ಸರ್ಕಾರ(Gujarat Government) ಹೇಳಿದೆ.

Exit mobile version