Visit Channel

ಅಣಬೆ ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ? ಇಲ್ಲಿದೆ ಮಾಹಿತಿ ಓದಿ

mushroom

ಮಳೆಗಾಲ ಪ್ರಾರಂಭವಾಯಿತೆಂದರೆ ನೈಸರ್ಗಿಕವಾಗಿ(Naturally) ಅರಣ್ಯದಲ್ಲಿ(Forest) ಮತ್ತು ಹೊಲ, ಗದ್ದೆಗಳಲ್ಲಿ ತನ್ನಷ್ಟಕ್ಕೆ ತಾನೆ ಬೆಳೆಯುವ ಸಸ್ಯವೆಂದರೆ ಅದು ಅಣಬೆ(Mushroom).

ಅರಣ್ಯದಲ್ಲಿ ಅಣಬೆಯ ಪಾತ್ರ ಬಹಳ ಮಹತ್ವ. ಅಣಬೆಯಲ್ಲಿ ಹೇರಳವಾಗಿ ಪೋಷಕಾಂಶಗಳು ಮತ್ತು ಅನೇಕ ಸತ್ವಗಳನ್ನು ಒಳಗೊಂಡಿದೆ. ಪೊಟ್ಯಾಸಿಯಂ, ಕ್ಯಾಲ್ಸಿಯಂ, ವಿಟಮಿನ್, ಖನಿಜಾಂಶಗಳನ್ನು ಹೊಂದಿದೆ.

ಇದರ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಮಾರಕ ರೋಗಗಳಾದ ಕ್ಯಾನ್ಸರ್ ಮತ್ತು ಹೃದಯಕ್ಕೆ ಸಂಬಂಧಿಸಿದ ಅನೇಕ ರೋಗಗಳಿಂದ ದೂರವಿಡುವುದರ ಜೊತೆಗೆ ಮುಕ್ತಿ ನೀಡುತ್ತದೆ.

Food

ಎರಡು ವಿಧದ ಅಣಬೆಗಳು ಸಿಗುತ್ತವೆ. ಖಾದ್ಯವಾದ ಅಣಬೆ ಮತ್ತು ವಿಷಪೂರಿತವಾದ ಅಣಬೆ. ಖಾದ್ಯ ಅಣಬೆಯಿಂದ ತಯಾರಿಸಿದ ತಿಂಡಿಗಳು ರುಚಿಕರ ಮಾತ್ರವಲ್ಲದೆ ಆರೋಗ್ಯಕರವೂ ಹೌದು.

ಅಣಬೆಯಿಂದ ಹಲವು ಬಗೆಯ ಪದಾರ್ಥಗಳನ್ನು ಮಾಡಬಹುದು. ಇದರ ರುಚಿ ಮೊಟ್ಟೆ, ಮಾಂಸದ ರುಚಿಯನ್ನು ಮಿರಿಸಬಲ್ಲದು. ಅಷ್ಟು ಸ್ವಾದಕರವಾಗಿರುತ್ತದೆ. ಖಾದ್ಯ ಅಣಬೆಯಲ್ಲಿ ಸಾಕಷ್ಟು ಪ್ರೋಟಿನ್ಗಳು, ಅಮೈನೋ ಅಮ್ಲಗಳು (ಅಲಾನಿನ್,ಲೈಸಿನ್ , ಲೂಸಿನ್, ವೇಲಿನ್, ಮಿಥಿಯಾನಿನ್, ಗ್ಲೈಸಿನ್ ,ಆಸ್ಪಾರ್ಟಿಕ ಆಮ್ಲ ಗ್ಲುಟಾಮಿಕ ಆಮ್ಲ ) ಜೀವಸತ್ವಗಳಾದ ರೈಬೋ, ಪ್ಲೆವಿನ್, ನಿಯಾಸಿನ್,

 • ಥೈಯಾಮಿನ್ ಬಯೋಟಿನ್ ಹಾಗೂ ಖನಿಜಾಂಶಗಳಾದ ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸೊಡಿಯಂ, ಪೊಟ್ಯಾಸಿಯಂ ಹೇರಳವಾಗಿದೆ. ಅಣಬೆಯನ್ನು ಔಷಧಕ್ಕೆ ಸಹ ಬಳಕೆ ಮಾಡುತ್ತಾರೆ, ಇದರಲ್ಲಿ ಔಷಧಿ ಗುಣಧರ್ಮ ಸಹಿತ ಇದೆ.
 • ಇತ್ತಿಚೀನ ದಿನಗಳಲ್ಲಿ ನೈಸರ್ಗಿಕವಾಗಿಯು ಮಳೆಗಾಲದಲ್ಲಿ ಅಣಬೆ ಸಿಗುತ್ತದೆ ಮತ್ತು ಕೃತಕವಾಗಿ ಅನೇಕ ತಂತ್ರಜ್ಞಾನ ಬಳಸಿ, ಅಣಬೆಯನ್ನು ಕೃತಕವಾಗಿ ಬೆಳೆಯುತ್ತಿದ್ದಾರೆ. ಮೊದಲು ಮಳೆಗಾಲದಲ್ಲಿ ಮಾತ್ರ ನೈಸರ್ಗಿಕವಾಗಿ ಅಣಬೆ ಸಿಗುತ್ತಿತ್ತು.
 • ತದನಂತರ ಕೃತಕವಾಗಿ ಬೆಳೆಯಲಾರಂಭಿಸಿದ್ದರಿಂದ ಈಗ ವರ್ಷವಿಡಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಅಣಬೆ ತಿಂದರೆ ಆರೋಗ್ಯಕ್ಕೆ 9 ಲಾಭಗಳು.
Mushroom
 • ರೋಗ ನಿರೋಧಕ ಶಕ್ತಿ ವರ್ಧಿಸುತ್ತದೆ : ಎರ್ಗೊಥಿಯಾನೈನ ಎಂಬ ಅತಿ ಶಕ್ತಿಯುತ ಆಂಟಿಯಾಕ್ಸಿಡೆಂಟ್ ಇರುವುದರಿಂದ ರೋಗಗಳಿಂದ ದೂರವಿಡುಸುತ್ತದೆ. ಇದರಲ್ಲಿರುವ ಆಂಟಿ ಬಯಾಟಿಕ್ ಅಂಶ ದೇಹದ ಇನ್ನಿತರ ಸೊಂಕುಗಳಿಗೆ ತುತ್ತಾಗುವುದನ್ನು ತಡೆಯುತ್ತದೆ.

 • ಸ್ತನ ಕ್ಯಾನ್ಸರ್ ತಡೆಯುತ್ತದೆ : ಒಂದು ಅಧ್ಯಯನದ ಪ್ರಕಾರ ಪ್ರತಿ ದಿನ ಅಣಬೆ ಸೇವಿಸುತ್ತಾ ಬಂದರೆ, ಸ್ತನ ಕ್ಯಾನ್ಸರ್ ಬರುವುದನ್ನು ತಡೆಯಬಹುದು. ಪ್ರಾರಂಭ ಹಂತದಲ್ಲಿರುವಾಗ ನಿಯಮಿತವಾಗಿ ಸೇವಿಸುತ್ತಾ ಬಂದರೆ ಸ್ತನ ಕ್ಯಾನ್ಸರ ದೂರಮಾಡಬಹುದು.
mushroom
 • ರಕ್ತಹಿನತೆ ಕಡಿಮೆಯಾಗುತ್ತದೆ : ಅಣಬೆಯು ದೇಹಕ್ಕೆ ಕಬ್ಬಿನಾಂಶ ದೊರೆತು ಹಿಮೋಗ್ಲೋಬಿನ್ ನಲ್ಲಿ ಕೆಂಪು ರಕ್ತ ಕಣಗಳ ಪ್ರಮಾಣ ಹೆಚ್ಚಿಸುವುದರ ಜೊತೆ ರಕ್ತಹೀನತೆ ನಿಯಂತ್ರಣದಲ್ಲಿಟ್ಟು ತಡೆಯುತ್ತದೆ.

 • ಕೊಲೆಸ್ಟ್ರಾಲ್ ಕಡಿಮೆಮಾಡುತ್ತದೆ : ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಕಡಿಮೆ ಕಾರ್ಬೋಹೈಡ್ರೆಟ್ ಹೊಂದಿದ್ದು, ನಾರಿನಾಂಶ ಹೆಚ್ಚಿರುವುದರಿಂದ ಬೊಜ್ಜು ಕರಗಿಸುವುದು ಸುಲಭ. ಇದರಲ್ಲಿರುವ ಕೆಲವು ಎಂಜೈಂಗಳು ಕೆಟ್ಟ ಕೊಲೆಸ್ಟ್ರಾಲನ್ನು ಕರಗಿಸಲು ಸಹಾಯಕವಾಗಿದೆ.
healthy
 • ಮಧುಮೇಹ ರೋಗಕ್ಕೆ ರಾಮಬಾಣ : ಅಣಬೆಯು ನಮ್ಮ ದೇಹದಲ್ಲಿರುವ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತಾ ಬರುತ್ತದೆ. ಮಧುಮೇಹ ರೋಗವನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತಾ ಬರುತ್ತದೆ. ಅದರಿಂದ ಮಧುಮೇಹಿ ರೋಗಿಗಳು ಸೇವಿಸುವುದು ಉತ್ತಮ.

 • ಮೂಳೆಗೆ ಸಂಬಂಧಿಸಿದ ಖಾಯಿಲೆಗೆ ಉತ್ತಮ : ಇದರಲ್ಲಿ ಕ್ಯಾಲ್ಸಿಯಂ ಮತ್ತು ಖನಿಜಾಂಶಗಳು ಹೆಚ್ಚಿಗೆ ಇರುವುದರಿಂದ ಮೂಳೆಗಳ ಸವೆತ ಮತ್ತು ಮೂಳೆಗಳಲ್ಲಿ ಬರುವ ನೋವು, ಸಂದುಗಳ ನೋವು ಕಡಿಮೆ ಮಾಡುವುದರ ಜೊತೆ ಮೂಳೆಗಳನ್ನು ಬಲಿಷ್ಟ ಮಾಡುತ್ತದೆ. ಮೂಳೆಗೆ ಸಂಬಂಧಿಸಿದ ಆಸ್ಟಿಯೊಪೊರೋಸಿಸ್ ರೋಗವನ್ನು ತಡೆಯುತ್ತದೆ.
Mushroom
 • ಲೈಂಗಿಕ ಆರೋಗ್ಯ ವೃದ್ಧಿ : ಅಣಬೆಯಲ್ಲಿ ಸಮೃದ್ದವಾದ ಸತ್ವವನ್ನು ಒಳಗೊಂಡಿದೆ. ದಣಿದ ಜೀವಕ್ಕೆ ಶಕ್ತಿಯನ್ನು ನೀಡುತ್ತದೆ. ಮಹಿಳೆಯರಿಗೆ, ಪುರುಷರಿಗೆ ಉತ್ತಮ ಶಕ್ತಿ ಹಾಗೂ ಲೈಂಗಿಕ ಆರೋಗ್ಯ ವೃದ್ದಿಸುತ್ತದೆ ಹಾಗೂ ವೀರ್ಯದ ಗುಣಮಟ್ಟ ಮತ್ತು ಸಂಖ್ಯೆಯಲ್ಲಿ ವೃದ್ದಿಸುತ್ತದೆ.

 • ತೂಕ ಇಳಿಕೆ : ಅಣಬೆಯು ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಯನ್ನು ಒಳಗೊಂಡಿದೆ. ಇದು ದೇಹದ ಆರೋಗ್ಯ ಸುಧಾರಣೆ ಮಾಡುವುದರ ಜೊತೆಗೆ ನಮ್ಮ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಅಣಬೆಯಲ್ಲಿ ಅಧಿಕ ಪ್ರಮಾಣದ ಪ್ರೋಟಿನ್, ಕ್ಯಾಲ್ಸಿಯಂ ಇದ್ದು ಇದು ದೇಹದ ಕೊಬ್ಬನ್ನು ಕರಗಿಸುತ್ತದೆ.
Mushrooms
 • ಮೊಡವೆ ನಿವಾರಣೆ : ಅಣಬೆಯಲ್ಲಿ ಅಧಿಕವಾಗಿ ವಿಟಮಿನ್ ಡಿ ಇರುವುದರಿಂದ, ಇದು ಮುಖದ ಮೊಡವೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಅಣಬೆಯು ಹೈಲುರಾನಿಕ್ ಆಮ್ಲದ ಕ್ರಿಯೆಯನ್ನು ಅನುಸರಿಸುತ್ತದೆ.
 • ಇದರಲ್ಲಿರುವ ಪಾಲಿಸ್ಯಾಕರೈಡ್ಗಳು ಚರ್ಮವನ್ನು ಹೈಡ್ರೇಟ್ ಮಾಡುವುದರ ಜೊತೆ ಮುಖದ ಸೌಂದರ್ಯವನ್ನು ಸದಾ ಹೆಚ್ಚಿಸುತ್ತಿರುತ್ತದೆ ಮತ್ತು ವಯಸ್ಸಿಗೂ ಮುನ್ನ ಚರ್ಮ ಸುಕ್ಕು ಕಟ್ಟುವುದನ್ನ ತಡೆಯುತ್ತದೆ.

ಕೆಲವು ಅಣಬೆಗಳು ಆರೋಗ್ಯಕ್ಕೆ ಸೂಕ್ತವಲ್ಲ. ಕೆಲವೊಂದು ವಿಷಪೂರಿತ ಅಣಬೆಗಳಿವೆ ( ಅಮಾನಿಟ ಫೆಲ್ಲಾಯ್ ಡಿಸ್, ಅಮಾನಿಟ ಮ್ಯಾಕ್ಸೆರಿಯಾ ಎಂಬ ವಿಷಪೂರಿತ ಅಣಬೆಗಳಿವೆ ) ಸೇವಿಸುವ ಮುನ್ನ ಬಹಳ ಕಾಳಜಿ ವಹಿಸಬೇಕು.

ವಿಷಪೂರಿತ ಅಣಬೆ ಸೇವಿಸಿದ ನಂತರ ಬಹಳ ಅಪಾಯಕಾರಿ ಲಕ್ಷಣಗಳು ಕಂಡುಬರುತ್ತವೆ. ವಾಂತಿ, ಬೇದಿ, ಹೊಟ್ಟೆನೋವು, ವಿಪರೀತ ಬಾಯಾರಿಕೆ ಕಾಣುತ್ತವೆ. ಕೆಲವೊಂದು ಸಮಯದಲ್ಲಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯು ಇದೆ. ಖರೀದಿಸುವ ಮುನ್ನ ಹಾಗೂ ಸೇವಿಸುವ ಮುನ್ನ ಬಹಳ ಗಮನ ಹರಿಸುವುದು ಒಳಿತು.
 • ರಾಘವೇಂದ್ರ ಬೆಂಡ್ಲಗಟ್ಟಿ, ಮುಂಡಗೋಡ (ಉ.ಕ)

Latest News

atm
ಮಾಹಿತಿ

ATM ಬಳಕೆದಾರರು ಓದಲೇಬೇಕಾದ ಸುದ್ದಿ ; RBI ನಿಯಮಗಳ ಬಗ್ಗೆ ಸರಳವಾಗಿ ತಿಳಿಯಿರಿ

ಇನ್ನು ನಿಮ್ಮ ಬ್ಯಾಂಕ್ ಹೊರತುಪಡಿಸಿ, ಬೇರೆ ಬ್ಯಾಂಕ್ ನ ಎಟಿಎಂಗಳಲ್ಲಿ ಮೆಟ್ರೋ ಸಿಟಿಗಳಲ್ಲಿ ಮೂರು ಬಾರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಐದು ಬಾರಿ ಉಚಿತ ಟ್ರಾನ್ಸಾಕ್ಷನ್ ಮಾಡಬಹುದು.

BJP
ರಾಜಕೀಯ

ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಬಾರದಿತ್ತು ಎನ್ನಲು ಸಿದ್ದರಾಮಯ್ಯ ಯಾರು? : ಬಿಜೆಪಿ

ಮತ್ತೊಮ್ಮೆ ದೇಶ ವಿಭಜಿಸುವ ಕಾಂಗ್ರೆಸ್ ಪಕ್ಷದ(Congress Party) ಹಿಡನ್ ಅಜೆಂಡಾ ಸಿದ್ದರಾಮಯ್ಯ ಬಾಯಿಂದ ಬಹಿರಂಗವಾಗಿದೆ ಎಂದಿದೆ.

Fruit
ಮಾಹಿತಿ

ಬಿಪಿ, ಮದುಮೇಹ ಸೇರಿದಂತೆ ಅನೇಕ ಖಾಯಿಲೆಗಳಿಗೆ ರಾಮಬಾಣ ನೇರಳೆ ಹಣ್ಣು ; ಓದಿ ಈ ಉಪಯುಕ್ತ ಮಾಹಿತಿ

ಮಧುಮೇಹ, ಹೃದಯದ ಕಾಯಿಲೆ, ಸಂಧಿವಾತ, ಹೊಟ್ಟೆಯ ಖಾಯಿಲೆಗಳ ನಿಯಂತ್ರಣ ಮತ್ತು ನಿವಾರಣೆಗೂ ಇದು ರಾಮಬಾಣ ಎನ್ನುತ್ತದೆ ಆಯುರ್ವೇದ(Ayurveda).