ಭಾರತ್​ ಗೌರವ್ ರೈಲಿನ 90 ಪ್ರಯಾಣಿಕರು ಅಸ್ವಸ್ಥ: ವಿಷಪೂರಿತ ಆಹಾರ ಸೇವನೆ

ಕಳೆದ ರಾತ್ರಿ ಪುಣೆ (Pune) ರೈಲ್ವೆ ನಿಲ್ದಾಣಕ್ಕೆ ತಲುಪುವುದಕ್ಕೂ ಮುನ್ನ ಭಾರತ್ ಗೌರವ್ (Food Poisoning in Train) ವಿಶೇಷ ರೈಲಿನಲ್ಲಿ ಚೆನ್ನೈನಿಂದ ಪ್ರಯಾಣಿಸುತ್ತಿದ್ದ ಸುಮಾರು 90 ಪ್ರಯಾಣಿಕರು

ಹೊಟ್ಟೆ ನೋವು ಹಾಗೂ ಇನ್ನಿತರೆ ಸಮಸ್ಯೆಗಳನ್ನು ಅನುಭವಿಸಿದ್ದು, ಭಾರತ್ ಗೌರವ್ ರೈಲಿನಲ್ಲಿ (Bharath Gaurav Train) ವಿಷಪೂರಿತ ಆಹಾರ ಸೇವಿಸಿ ಪ್ರಯಾಣಿಕರು ಆಸ್ಪತ್ರೆಗೆ ದಾಖಲಾಗಿರುವ

ಮಾಹಿತಿ ಲಭ್ಯವಾಗಿದೆ.

ಚೆನ್ನೈನಿಂದ (Chennai) ಗುಜರಾತ್‌ನ ಪಾಲಿಟಾನಾಗೆ ಪ್ರಯಾಣಿಸುತ್ತಿದ್ದ ಭಾರತ್ ಗೌರವ್ ಯಾತ್ರಾ ವಿಶೇಷ ಪ್ಯಾಕೇಜ್ ರೈಲಿನಲ್ಲಿ ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ

ಕಾರ್ಪೊರೇಷನ್ (IRCTC) ಅಡುಗೆ ಗುತ್ತಿಗೆದಾರರು ನೀಡಿದ ಭೋಜನವನ್ನು ಸೇವಿಸಿದ ನಂತರ 90 ಮಂದಿಗೆ ಅನಾರೋಗ್ಯ ಕಾಡಿತ್ತು. ಅನೇಕ ಪ್ರಯಾಣಿಕರು ವಾಂತಿ ಮತ್ತು ಭೇದಿಯಿಂದ

ಬಳಲುತ್ತಿದ್ದರು, ಗುಜರಾತ್‌ನ (Gujarat) ಪಾಲಿಟಾನಾಗೆ ಹೋಗುವ ರೈಲು (Food Poisoning in Train) ಪುಣೆ ರೈಲು ನಿಲ್ದಾಣದಲ್ಲಿ ತುರ್ತು ನಿಲುಗಡೆ ಮಾಡಲಾಯಿತು.

ರೈಲಿನ ಸ್ನಾನಗೃಹಗಳನ್ನು ಸ್ವಚ್ಛಗೊಳಿಸಲಾಯಿತು. ಕಲ್ಯಾಣ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಬೇಕು ಎಂಬ ಸೂಚನೆಯೊಂದಿಗೆ ರೈಲು ಹೊರಟಿತು. ರೂಬಿ ಹಾಲ್

ಕ್ಲಿನಿಕ್ ರೈಲ್ವೆ ಆಸ್ಪತ್ರೆ ಮತ್ತು ಸಾಸೂನ್ ಜನರಲ್ ಆಸ್ಪತ್ರೆಯ ವೈದ್ಯರು ಒಟ್ಟು 99 ರೋಗಿಗಳನ್ನು ಪರೀಕ್ಷಿಸಿದರು ಮತ್ತು ಎಲ್ಲಾ ರೋಗಿಗಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

50 ನಿಮಿಷಗಳ ನಂತರ ರೈಲು ತನ್ನ ಪ್ರಯಾಣ ಮುಂದುವರೆಸಿತು. ಪ್ರಯಾಣಿಕರು ತಾವೇ ಆಹಾರ ತಂದಿದ್ದರು, ರೈಲ್ವೆ ಸಿಬ್ಬಂದಿ ಪೂರೈಸಿಲ್ಲ ಎಂದು ಹೇಳಲಾಗಿದೆ. ಎಲ್ಲಾ ಪ್ರಯಾಣಿಕರಿಗೆ ಚಿಕಿತ್ಸೆ

ನೀಡಲಾಗಿದ್ದು, ಚಿಕಿತ್ಸೆ ನಂತರ ಸಹಜ ಸ್ಥಿತಿಯಲ್ಲಿದ್ದಾರೆ. ಯಾವುದೇ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ, ಅವರೆಲ್ಲರೂ ಅದೇ ರೈಲಿನಲ್ಲಿ ತಮ್ಮ ಪ್ರಯಾಣವನ್ನು ಮುಂದುವರೆಸಿದರು,

ಎಂದು ಸೆಂಟ್ರಲ್ ರೈಲ್ವೆ ಸಿಪಿಆರ್‌ಒ (Central Railway CPRO) ಹೇಳಿಕೆ ತಿಳಿಸಿದೆ.

ಇದನ್ನು ಓದಿ: ಮಕ್ಕಳ ಮಾರಾಟ ಪ್ರಕರಣ: ವಿಚಾರಣೆ ವೇಳೆ ಬಯಲಾಯ್ತು 250ಕ್ಕೂ ಹೆಚ್ಚು ಮಕ್ಕಳ ಮಾರಾಟ

Exit mobile version