ಬಳೆ ಬಾಕ್ಸ್‌ಗಳಲ್ಲಿ 27.5 ಲಕ್ಷ ರೂ. ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡ ದೆಹಲಿ ಏರ್ಪೋರ್ಟ್ ಅಧಿಕಾರಿಗಳು!

India

ದೆಹಲಿ : ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ(IndiraGandhi International Airport) ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು 27.5 ಲಕ್ಷ ರೂ. ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡ ನಂತರ ಇಬ್ಬರು ಭಾರತೀಯರನ್ನು ಬಂಧಿಸಲಾಗಿದೆ. ಇವರಿಬ್ಬರು ಮುಂಬೈ(Mumbai) ಮೂಲಕ ಬ್ಯಾಂಕಾಕ್‌ಗೆ ತೆರಳಲು ನಿರ್ಧರಿಸಿದ್ದು, ಅಕ್ರಮವಾಗಿ ನಗದು ಹೊಂದಿರುವುದು ಪತ್ತೆಯಾಗಿದೆ.

19,200 ಮೌಲ್ಯದ ಯು.ಎಸ್ ಡಾಲರ್ ಮತ್ತು 15,700 ಮೌಲ್ಯದ ಯುರೋಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನೋಟುಗಳನ್ನು ಬಳೆ ಪೆಟ್ಟಿಗೆಗಳಲ್ಲಿ ತುಂಬಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಸುದ್ದಿ ಸಂಸ್ಥೆ ANI ಹಂಚಿಕೊಂಡ ಎರಡು ನಿಮಿಷಗಳ ವೀಡಿಯೊದಲ್ಲಿ, ಬಳೆ ಪೆಟ್ಟಿಗೆಯಲ್ಲಿ ಎಚ್ಚರಿಕೆಯಿಂದ ಪ್ಯಾಕ್ ಮಾಡಿದ ಬಳೆಗಳ ಪೆಟ್ಟಿಗೆಗಳನ್ನು ತೋರಿಸಿದ್ದಾರೆ.

ಒಂದು ಪೆಟ್ಟಿಗೆಯನ್ನು ತೆರೆದಾಗ ಒಳಗೆ ಕೆಂಪು ಮತ್ತು ಚಿನ್ನದ ಬಳೆಗಳಿವೆ ಆದರೆ, ಇವುಗಳನ್ನು ತೆಗೆದಾಗ, ಪೆಟ್ಟಿಗೆಯ ಕೆಳಭಾಗದಲ್ಲಿ ತುಂಬಿದ ಕರೆನ್ಸಿ ನೋಟುಗಳು ಕಂಡುಬಂದಿವೆ. ಆ ಬಳಿಕ ಹಲವಾರು ಪೆಟ್ಟಿಗೆಗಳನ್ನು ತೆರೆಯಲಾಗುತ್ತದೆ ಮತ್ತು ಪ್ರತಿಯೊಂದಕ್ಕೂ ಡಾಲರ್ ಅಥವಾ ಯೂರೋಗಳನ್ನು ಬಳೆಗಳ ಕೆಳಗೆ ಮುಚ್ಚಿಡಲಾಗಿದೆ.

ಈ ತಿಂಗಳ ಆರಂಭದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಿಂದ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದ್ದರು. ದುಬೈಗೆ ತೆರಳುತ್ತಿದ್ದ 40 ಲಕ್ಷಕ್ಕೂ ಅಧಿಕ ಮೌಲ್ಯದ ವಿದೇಶಿ ಕರೆನ್ಸಿ ಜಪ್ತಿ ಮಾಡಲಾಗಿದೆ. ಆ ಪ್ರಕರಣದಲ್ಲಿ, 1962ರ ಕಸ್ಟಮ್ಸ್ ಆಕ್ಟ್ ಅಡಿಯಲ್ಲಿ ಒಟ್ಟು $ 52,900 ಅನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಶಂಕಿತನನ್ನು ಶೀಘ್ರವೇ ಬಂಧಿಸಲಾಯಿತು.

Exit mobile version