ಕೇಂದ್ರದ ಮಾಜಿ ಸಚಿವ ಚೌಧರಿ ಅಜಿತ್​ ಸಿಂಗ್ ಕೊರೋನಾದಿಂದ ನಿಧನ

ನವದೆಹಲಿ, ಮೇ. 06: ರಾಷ್ಟ್ರೀಯ ಲೋಕಾ ದಳದ (ಆರ್​ಡಿಎಲ್​) ಮುಖ್ಯಸ್ಥ ಹಾಗೂ ಮಾಜಿ ಕೇಂದ್ರ ಸಚಿವ ಚೌಧರಿ ಅಜಿತ್​ ಸಿಂಗ್​ ಅವರು ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ. 82 ವರ್ಷದ ಉತ್ತರಪ್ರದೇಶದ ಆರ್‌.ಎಲ್.ಡಿ‌ ಪಕ್ಷದ ಮುಖ್ಯಸ್ಥ ಅಜಿತ್ ಸಿಂಗ್ ಅವರು ಕೊವಿಡ್​ ಪಾಸಿಟಿವ್​ ವರದಿಯ ಬಳಿಕ ಗುರುಗ್ರಾಮದ ವೇದಾಂತ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು.

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಪುತ್ರ ಅಜಿತ್​ ಸಿಂಗ್​ ಅವರು ದೇಶಕ್ಕೆ ಹಿಂದಿರುಗುವ ಮೊದಲು ಅಮೆರಿಕಾದಲ್ಲಿ ಕಂಪ್ಯೂಟರ್​ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು 15 ವರ್ಷಗಳ ಕಾಲ ಈ ಉದ್ಯಮದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅಜಿತ್ ಸಿಂಗ್ ಅವರು ಬಾಗ್​ಪತ್​ನಿಂದ ಏಳು ಬಾರಿ ಸಂಸದರಾಗಿದ್ದರು. ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

Exit mobile version