ಬೇಸಿಗೆಯಲ್ಲಿ ಯಾವೆಲ್ಲಾ ಹಣ್ಣುಗಳನ್ನು ತಿಂದ್ರೆ ಒಳ್ಳೆಯದು: ಇದರಿಂದಾಗೋ ಪ್ರಯೋಜನಗಳೇನು?

Health : ಬಿಸಿಲಿನ ಬೇಗೆ ಹಂತ ಹಂತವಾಗಿ ಏರುತ್ತಿದೆ. ಚಳಿಗಾಲ (winter) ಮತ್ತು ಬೇಸಿಗೆ ಕಾಲದ (summer time) ಸಮ್ಮಿಶ್ರಣವಾಗಿರುವ ಈ ಋತುಮಾನವು ವಾತಾವರಣವನ್ನು ಹೈರಾಣಾಗುವಂತೆ ಮಾಡಿದೆ. ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ. ಚಳಿಗಾಲಕ್ಕೆ ಹೋಲಿಸಿದರೆ (Fruits to eat in summer) ಬೇಸಿಗೆ ಕಾಲದಲ್ಲಿ ಕಡಿಮೆ ತಿನ್ನುತ್ತೇವೆ.

ಈ ಸಮಯದಲ್ಲಿ ಹೆಚ್ಚಾಗಿ ನೀರು ಹೊಂದಿರುವ ಹಣ್ಣು, ತರಕಾರಿಗಳು ಸೇವನೆ ಮಾಡುವುದು ಒಳ್ಳೆಯದು. ಹೆಚ್ಚೆಚ್ಚು ಆಹಾರಗಳ ಸೇವನೆ ಬೇಡವೇ ಬೇಡ ಎಂಬ ಭಾವನೆಯನ್ನು ಬೇಸಿಗೆ ಕಾಲ ಸೃಷ್ಟಿಸುತ್ತದೆ.

ಹಾಗಾದರೆ ಬೇಸಿಗೆ ಕಾಲದ ದಿನಚರಿಯಲ್ಲಿ ಎಂತಹ ಆಹಾರ ಸೇವನೆ ಮಾಡುವುದು ಬಹಳ ಒಳ್ಳೆಯದು ಎಂಬುದನ್ನು ತಿಳಿಯೋಣ.

ಮುಖ್ಯವಾಗಿ ಆರೋಗ್ಯದ ದೃಷ್ಟಿಯಿಂದ ಋತುಮಾನಕ್ಕೆ ತಕ್ಕಂತೆ ಹಣ್ಣುಗಳನ್ನು ಸೇವನೆ ಮಾಡುವುದು ಬಹಳ ಮುಖ್ಯ ಇನ್ನು ಬೇಸಿಗೆಯಲ್ಲಿ ಹಣ್ಣುಗಳು ಹೇರಳವಾಗಿ (Fruits to eat in summer) ದೊರೆಯುತ್ತದೆ.

ಇವುಗಳಲ್ಲಿ ವಿಟಮಿನ್‌ಗಳು (Vitamin), ಖನಿಜಗಳು (mineral) ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಶ್ರೀಮಂತವಾಗಿರುತ್ತದೆ.

ಇದನ್ನೂ ಓದಿ : https://vijayatimes.com/buying-mangoes-on-emi/

ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣು ಎಷ್ಟು ಸೂಕ್ತ : ಕಲ್ಲಂಗಡಿ ಹಣ್ಣಿನಲ್ಲಿ (Watermelon) ಸರಿಸುಮಾರು 90 ಪ್ರತಿಶತದಷ್ಟು ನೀರು ಹೊಂದಿರುತ್ತದೆ. ಇದು ನಿಮ್ಮನ್ನು ಹೈಡ್ರೀಕರಿಸುತ್ತದೆ.

ಅಲ್ಲದೆ, ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಹೊಟ್ಟೆ ತಂಪಾಗಿರಿಸಲು ಸಹಾಯ ಮಾಡುತ್ತದೆ ಹಾಗೆಯೇ ಇದು ನಮ್ಮ ಆರೋಗ್ಯಕ್ಕೆ ಬಹಳಷ್ಟು ಸೂಕ್ತವೆನಿಸಿದ ಹಣ್ಣಾಗಿದೆ.

ಸುಡುವ ಬಿಸಿಲಿನಲ್ಲಿ ಎಳನೀರು ನಮ್ಮ ಆರೋಗ್ಯಕ್ಕೆ ಬಹಳ ಉಪಕಾರಿ : ಬೇಸಿಗೆ ಸಮಯದಲ್ಲಿ ಎಳನೀರು ನೈಸರ್ಗಿಕ ಪಾನೀಯವೆಂದರೆ ಅದು ಎಳನೀರು ಇದುಬಾಯಿಗೆ ರುಚಿಯನ್ನು ನೀಡುವುದರ ಜೊತೆಗೆ ದೇಹಕ್ಕೆ ಪೋಷಕಾಂಶಗಳು (nutrient) ಖನಿಜಗಳನ್ನು ಹೊದಗಿಸುತ್ತದೆ

ಹಾಗೆಯೆ ರಕ್ತದ ಒತ್ತಡವನ್ನು ಖಡಿಮೆ ಮಾಡುತ್ತದೆ ದಣಿದ ದೇಹಕ್ಕೆ ತಂಪನ್ನು ಉಂಟುಮಾಡುತ್ತದೆ ಆದ್ದರಿಂದ ಬೇಸಿಗೆಯಲ್ಲಿ ಎಳನೀರು ಬಹಳಷ್ಟು ಸೂಕ್ತ..

ಬೇಸಿಗೆಗೆ ಕಿತ್ತಳೆ ಹಣ್ಣು ಸೂಕ್ತ: ಕಿತ್ತಳೆ ಹಣ್ಣು (Orange fruit) ತೂಕ ನಷ್ಟಕ್ಕೆ ಬಹಳಷ್ಟು ಪ್ರಯೋಜನವಾಗಿದ್ದು ಇದರಲ್ಲಿ ವಿಟಮಿನ್ ಸಿ ಎ ಕಾಲ್ಸಿಯಂನ್ನು (Calcium) ಈ ಹಣ್ಣು ಹೊಂದಿದೆ ಹಾಗೆಯೆ ಚರ್ಮದ ಹೊಳಪಿಗೆ ಕಿತ್ತಳೆ ಹಣ್ಣು ಸೂಕ್ತ ಪ್ರತಿನಿತ್ಯ ಬೇಸಿಗೆ ಕಾಲದಲ್ಲಿ ಕಿತ್ತಳೆ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳಷ್ಟು ಅನುಕೂಲವನ್ನು ಉಂಟು ಮಾಡುತ್ತದೆ.

ರಂಜಿತಾ ಬಿ ಆರ್

Exit mobile version