ಗಂಗೂಲಿ ಅವರಿಗೆ ಬೇಸರವಾಗಿದೆ ; ಸೌರವ್ ಗಂಗೂಲಿ ಪರ ಮತ್ತೊಮ್ಮೆ ಬ್ಯಾಟ್ ಬೀಸಿದ ಮಮತಾ ಬ್ಯಾನರ್ಜಿ

West Bengal : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಬಿಸಿಸಿಐ ನಿರ್ಣಯ ಕುರಿತು ಮತ್ತೊಮ್ಮೆ ಸೌರವ್ ಗಂಗೂಲಿ (Ganguly Felt Sad) ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಬಿಸಿಸಿಐ ಮುಖ್ಯಸ್ಥರಾಗಿ ಗಂಗೂಲಿ ಅವರ ಅಧಿಕಾರಾವಧಿಯನ್ನು ವಿಸ್ತರಿಸದೇ, ಅವರ ಸ್ಥಾನವನ್ನು ರೋಜರ್ ಬಿನ್ನಿ ಅವರಿಗೆ ಕೊಟ್ಟಿರುವುದು, ಗಂಗೂಲಿ ಅವರಿಗೆ ವಂಚನೆ ಮಾಡಿದಂತೆ. ಇದರಿಂದ ಗಂಗೂಲಿ ಅವರಿಗೆ ಬೇಸರವಾಗಿದೆ ಎಂದು ಹೇಳಿದ್ದಾರೆ.

ಸೌರವ್ ಗಂಗೂಲಿ ಅವರನ್ನು ನವೆಂಬರ್ 19, 2019 ರಂದು BCCI ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಹಿಂದೆ ದೆಹಲಿಯಲ್ಲಿ ನಡೆದ BCCI ಪ್ರಮುಖರ ಸಭೆಯ ನಂತರ, ಗಂಗೂಲಿ ಇನ್ನು ಮುಂದೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಖಚಿತಪಡಿಸಲಾಯಿತು.

https://youtu.be/WhSPAcOglq4 ಶಾಲೆಯ ಅವ್ಯವಸ್ಥೆ. ಇಲ್ಲಿ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ .

ಇದರ ಬೆನ್ನಲ್ಲೇ ಸೌರವ್ ಗಂಗೂಲಿ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಕಳುಹಿಸುವಂತೆ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಮನವಿ ಮಾಡಿದ್ದರು.

https://youtu.be/3XAyDVUUqiI

ಗುರುವಾರ, ಗಂಗೂಲಿ ಅವರು ಬಿಸಿಸಿಐ ಮುಖ್ಯಸ್ಥರಾಗಿ ಎರಡನೇ ಅವಧಿಯಿಂದ ವಂಚಿತರಾಗಿದ್ದಾರೆ ಎಂದು ಮತ್ತೊಮ್ಮೆ ಹೇಳುವ ಮೂಲಕ ನರೇಂದ್ರ ಮೋದಿ ಹಾಗೂ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಏಕೆ ಅವಕಾಶ ನೀಡಲಿಲ್ಲ? ಯಾರಾದರೂ ಸ್ಪರ್ಧಿಸಬಹುದು ಎಂದು ಅವರು ಸ್ಥಾನವನ್ನು ಖಾಲಿ ಇರಿಸಿದ್ದಾರೆಯೇ?

ಇದರಿಂದ ಸೌರವ್‌ ಗಂಗೂಲಿ (Ganguly Felt Sad) ಅವರಿಗೆ ತುಂಬಾ ಅನ್ಯಾಯವಾಗಿದೆ. ಗಂಗೂಲಿ ಅವರು ಪ್ರಪಂಚದಾದ್ಯಂತ ಹೆಸರುವಾಸಿಯಾದ ವ್ಯಕ್ತಿ.

ಇದನ್ನೂ ಓದಿ : https://vijayatimes.com/deadbody-on-shoulder/

ಸೌರವ್ ಅವರಿಗೆ ಹೆಚ್ಚು ಅರ್ಹತೆ ಇದೆ. ಅವರು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರನ್ನು ವಂಚಿಸಲು ಕಾರಣವೇನು? ಅವರ ಸ್ಥಾನವನ್ನು ಬೇರೆಯವರಿಗೆ ಇಡಲಾಗಿದೆ ಯಾಕೆ? ನಾನು ಇದಕ್ಕೆಲ್ಲಾ ಸರಿಯಾದ ಕಾರಣವನ್ನು ತಿಳಿದುಕೊಳ್ಳಲು ಬಯಸುತ್ತಿದ್ದೇನೆ.

ಗಂಗೂಲಿ ಅವರು ಸಭ್ಯ ವ್ಯಕ್ತಿಯಾದ ಕಾರಣಕ್ಕೆ ಅವರು ಏನನ್ನೂ ಹೇಳಿಕೊಂಡಿಲ್ಲ, ಆದರೆ ಅವರು ಬೇಸರಗೊಂಡಿದ್ದಾರೆ ಎಂದು ನನಗೆ ಖಾತ್ರಿಯಿದೆ.

ಇದು ನಿರ್ದಿಷ್ಟ ವ್ಯಕ್ತಿಗೆ ಆದ್ಯತೆ ನೀಡಲು ನಾಚಿಕೆಯಿಲ್ಲದ ರಾಜಕೀಯ ಸೇಡುತನವಾಗಿದೆ ಎಂದು ಹೇಳುವ ಮೂಲಕ ಮಮತಾ ಬ್ಯಾನರ್ಜಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : https://vijayatimes.com/kantara-hits-in-bollywood/

ಗಂಗೂಲಿ ಬಿಜೆಪಿ ಪಕ್ಷವನ್ನು ಸೇರಲು ನಿರಾಕರಿಸಿದ್ದರಿಂದ ಬಿಜೆಪಿಯು ರಾಜಕೀಯ ಸೇಡು ತೀರಿಸಿಕೊಂಡಿದೆ ಎಂದು ಟಿಎಂಸಿ ಆರೋಪಿಸಿದೆ. ಈ ಆರೋಪಕ್ಕೆ ಉತ್ತರಿಸಿದ ಬಿಜೆಪಿ, ಟಿಎಂಸಿ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿದೆ.

ಈ ಮಾತುಗಳನ್ನು ಹೇಳುವ ಮೊದಲು ಬಂಗಾಳದಲ್ಲಿ ಕ್ರೀಡೆಗಳನ್ನು ಪುನರುಜ್ಜೀವನಗೊಳಿಸುವ ಕೆಲಸ ಮಾಡಲು ಮುಂದಾಗಿ ಎಂದು ಬಂಗಾಳ ಸರ್ಕಾರವನ್ನು ಉದ್ದೇಶಿಸಿ ಹೇಳಿದೆ.
Exit mobile version