ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕಳೆದ ವರ್ಷದಿಂದ ಅಷ್ಟಾಗಿ ಬೆಲೆಯಲ್ಲಿ ಏನು ಕಡಿತವಾಗಿರಲಿಲ್ಲ. ಜನಸಾಮಾನ್ಯರಿಗೆ ಇದೊಂದು ಹೊರೆಯಾಗಿ ಕಾಡತೊಡಗಿದ್ದಂತು ಸತ್ಯ(Gas cylinder price drops).
ಧಾನ್ಯಗಳು, ಪೆಟ್ರೋಲ್ ಸೇರಿದಂತೆ ಗ್ಯಾಸ್ ಬೆಲೆ ಕೂಡ ಸರ್ಕಾರ ಏರಿಸಿತ್ತು.
ಈ ಬಗ್ಗೆ ಜನಸಾಮಾನ್ಯರು ಸರ್ಕಾರಕ್ಕೆ ತೀವ್ರವಾಗಿ ಖಂಡಿಸಿ, ಬೆಲೆ ಏರಿಸುವ ಬದಲು ಬೆಲೆಯನ್ನು ಇಳಿಕೆ ಮಾಡುವ ಕೆಲಸ ಮಾಡುವುದು ಒಳಿತು ಎಂದು ತಿಳಿಸಿದ್ದರು.
ಆದರೆ, ಈಗ ಕೇಂದ್ರ ಬಜೆಟ್ ಮಂಡನೆಗೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗುವಷ್ಟರಲ್ಲಿ ಜನರಿಗೆ ಸಿಹಿ ಸುದ್ದಿಯನ್ನು ನೀಡಿದೆ.
ಯಾವ ಗ್ಯಾಸ್ ಬೆಲೆ ಕಡಿಮೆಯಾಗಿದೆ ಮತ್ತು ಯಾರಿಗೆ ಇದರ ಪ್ರಯೋಜನವಾಗಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.
https://vijayatimes.com/culprit-arrested-for-sexual-harrasment/

ಎಲ್ಪಿಜಿ ಸಿಲಿಂಡರ್ಗಳ ನವೀಕೃತ ಬೆಲೆಯನ್ನು ತೈಲು ಮಾರುಕಟ್ಟೆ ಕಂಪನಿಗಳು (OMCs)ಬಿಡುಗಡೆ ಮಾಡಿದ್ದು, 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು 91.50 ರೂಪಾಯಿ ಇಳಿಸಲಾಗಿದೆ(Gas cylinder price drops).
https://www.youtube.com/watch?v=64AzpWJCMqw
ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,907 ರೂಪಾಯಿ ಆಗಿದೆ.
ಡಿಸೆಂಬರ್ವರೆಗೂ ಒಂದೇ ಸಮನೆ ಏರಿಕೆಯಾಗುತ್ತಿದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆ ಜನವರಿಯಲ್ಲಿ 102 ರೂಪಾಯಿ ಇಳಿಕೆಯಾಗಿತ್ತು.
ಇದೀಗ ಫೆಬ್ರವರಿಯಲ್ಲಿ ಕೂಡ ಕಡಿತಗೊಂಡಿದ್ದು ಗ್ರಾಹಕರು ಅಂದರೆ ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ನಿರಾಳತೆ ಮೂಡಿಸಿದೆ.