Mumbai : ಗೌತಮ್ ಅದಾನಿ (Gautham Adani) ಈಗ ವಿಶ್ವದ 3ನೇ ಶ್ರೀಮಂತ ವ್ಯಕ್ತಿ ಮತ್ತು ಅಗ್ರ 3 ರಲ್ಲಿ ಸ್ಥಾನ ಪಡೆದ ಮೊದಲ ಏಷ್ಯನ್ ವ್ಯಕ್ತಿಯಾಗಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ (Bloomberg Billionaires) ಇಂಡೆಕ್ಸ್‌ನ ಪ್ರಕಾರ ಏಷ್ಯಾದ ವ್ಯಕ್ತಿಯೊಬ್ಬರು ಮೊದಲ ಮೂರು ಸ್ಥಾನಗಳಿಗೆ ಪ್ರವೇಶಿಸಿದ್ದು ಇದೇ ಮೊದಲ ಬಾರಿಗೆ ಎನ್ನಲಾಗಿದೆ.
https://vijayatimes.com/most-expensive-house-in-dubai/
ಭಾರತದ ಮುಖೇಶ್ ಅಂಬಾನಿ (Mukhesh Ambani) ಮತ್ತು ಚೀನಾದ ಜಾಕ್ ಮಾ ಅವರು ಕೂಡಾ ಇದನ್ನು ಸಾಧಿಸಿರಲಿಲ್ಲ.
ಇನ್ನು 137.4 ಬಿಲಿಯನ್ ಸಂಪತ್ತನ್ನು ಹೊಂದಿರುವ ಗೌತಮ್ ಅದಾನಿ ಅವರು ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿದ್ದಾರೆ.
ಆದರೆ ಅಮೇರಿಕಾದ ಎಲಾನ್ ಮಸ್ಕ್ (Elon musk) ಮತ್ತು ಜೆಫ್ ಬೆಜೋಸ್ ಅವರು ಮೊದಲ ಎರಡು ಸ್ಥಾನಗಳನ್ನು ಹೊಂದಿದ್ದಾರೆ. ಗೌತಮ್ ಅದಾನಿ ಅವರು ಕಳೆದ ಕೆಲವು ವರ್ಷಗಳಿಂದ ಕಲ್ಲಿದ್ದಲು-ಬಂದರುಗಳ ಸಮೂಹವನ್ನು ವಿಸ್ತರಿಸುತ್ತಿದ್ದಾರೆ.
ಡೇಟಾ ಕೇಂದ್ರಗಳಿಂದ ಹಿಡಿದು ಸಿಮೆಂಟ್, ಮಾಧ್ಯಮ ಮತ್ತು ಅಲ್ಯೂಮಿನಾಗಳವರೆಗೆ ಎಲ್ಲ ಉದ್ಯಮಗಳಲ್ಲೂ ತೊಡಗಿಸಿಕೊಂಡಿದ್ದಾರೆ.
https://vijayatimes.com/most-expensive-house-in-dubai/
ಇನ್ನು ಅದಾನಿ ಗ್ರೂಪ್ ಭಾರತದ ಅತಿದೊಡ್ಡ ಖಾಸಗಿ ವಲಯದ ಬಂದರು ಮತ್ತು ವಿಮಾನ ನಿಲ್ದಾಣ ನಿರ್ವಾಹಕರು, ನಗರ-ಅನಿಲ ವಿತರಕರು ಮತ್ತು ಕಲ್ಲಿದ್ದಲು ಗಣಿಗಾರರಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿರುವ ಅವರ ಕಾರ್ಮೈಕಲ್ ಗಣಿ ಪರಿಸರವಾದಿಗಳಿಂದ ಟೀಕಿಸಲ್ಪಟ್ಟಿದ್ದರೂ, ಇದು ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಶಕ್ತಿ ಉತ್ಪಾದನಾ ಕೇಂದ್ರವಾಗಿದೆ.
ಇನ್ನು ಗೌತಮ್ ಅದಾನಿ ಅವರು ತಮ್ಮ ಸಂಪತ್ತಿನೊಂದಿಗೆ ದಾನವನ್ನು ಹೆಚ್ಚಿಸಿದ್ದಾರೆ. ಅವರು ತಮ್ಮ 60ನೇ ಹುಟ್ಟುಹಬ್ಬದ (Birthday) ಸಂದರ್ಭದಲ್ಲಿ ಸಾಮಾಜಿಕ ಸೇವೆಗಾಗಿ 7.7 ಬಿಲಿಯನ್ ಡಾಲರ್‌ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.
ಇನ್ನು ಅದಾನಿ 3 ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ. ಇದರಲ್ಲಿ ಎಂಬ್ರೇರ್ ಲೆಗಸಿ 650, ಬೊಂಬಾರ್ಡಿಯರ್ ಚಾಲೆಂಜರ್ 605 ಮತ್ತು ಹಾಕರ್ ಬೀಚ್‌ಕ್ರಾಫ್ಟ್ 850XP ಸೇರಿವೆ.
ಇವುಗಳ ಜೊತೆಗೆ, ಅದಾನಿ 3 ಹೆಲಿಕಾಪ್ಟರ್‌ಗಳನ್ನು ಹೊಂದಿದ್ದಾರೆ ಮತ್ತು ಅವುಗಳಲ್ಲಿ ಒಂದು ಅಗಸ್ಟಾ ವೆಸ್ಟ್‌ಲ್ಯಾಂಡ್ AW139 ಹೆಲಿಕಾಪ್ಟರ್ ಆಗಿದೆ.