ಸಲಿಂಗಿ ಜೋಡಿಗೆ ಬ್ರಿಟನ್‌ನ ಮೆಥೋಡಿಸ್ಟ್ ಚರ್ಚ್ ನಲ್ಲಿ ವಿವಾಹವಾಗಲು ಅವಕಾಶ

ಲಂಡನ್.ಜು.02: ಸಲಿಂಗಿ ಜೋಡಿಗೆ ತನ್ನ ಆವರಣದಲ್ಲಿ ಮದುವೆಯಾಗಲು ಅವಕಾಶ ನೀಡಲಾಗುವುದು ಎಂದು ಬ್ರಿಟನ್‌ನ ಮೆಥೋಡಿಸ್ಟ್ ಚರ್ಚ್ ಘೋಷಿಸಿದೆ.
ಈ ಸಂಬಂಧ ನಡೆಸಲಾದ ಮೆಥೋಡಿಸ್ಟ್ ಸಭೆಯಲ್ಲಿ 254 ಮಂದಿ ಪರವಾಗಿ ಮತ್ತು 46 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು. ಈ ಚರ್ಚ್‌ 164,000 ಸದಸ್ಯರನ್ನು ಒಳಗೊಂಡಿದ್ದು, ಇದು ಬ್ರಿಟನ್‌ನ ನಾಲ್ಕನೇ ಅತಿ ದೊಡ್ಡ ಚರ್ಚ್‌ ಆಗಿದೆ.
ಇದೊಂದು ಮಹತ್ವದ ಹೆಜ್ಜೆಯಾಗಿದೆ. ಹಲವು ವರ್ಷಗಳ ಹೋರಾಟದ ಬಳಿಕ ಈ ಅವಕಾಶ ಸಿಕ್ಕಿದೆ ಎಂದು ಮೆಥೋಡಿಸ್ಟ್‌ ಚರ್ಚ್‌ನ ಪ್ರಚಾರ ಗುಂಪು ಹೇಳಿದೆ.

Exit mobile version