ಕೊರೋನಾದ ಮೂರನೇ ಅಲೆಗೆ ಇಂದೇ ಸಿದ್ದರಾಗಿ: ಕೇಂದ್ರಕ್ಕೆ ಸುಪ್ರೀಮ್ ಸಲಹೆ

ನವದೆಹಲಿ, ಮೇ. 06: ದೆಹಲಿಗೆ ಆಮ್ಲಜನಕ ಪೂರೈಕೆ ಪ್ರಕರಣದ ವಿಚಾರವಾಗಿ ಸುಪ್ರೀಂಕೋರ್ಟ್ ಗುರುವಾರ ವಿಚಾರವಣೆ ನಡೆಸಿತು. ಈ ವೇಳೆ, ದೇಶಾದ್ಯಾಂತ ಆಮ್ಲಜನಕ ವಿತರಣೆ ನೀತಿವನ್ನು ಕೇಂದ್ರ ಸರ್ಕಾರ ನವೀಕರಿಸಬೇಕು. ಜೊತೆಗೆ ಮೂರನೇ ಹಂತದ ಅಲೆಯ ಕೊರೋನಾ ವೈರಸ್ ಎದುರಿಸಲು ಕೇಂದ್ರ ಸರ್ಕಾರ ಪ್ಯಾನ್ ಇಂಡಿಯಾ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸಲಹೆ ನೀಡಿದೆ. “ನಾವು ಇಂದು ತಯಾರಿ ನಡೆಸಿದರೆ ಮಾತ್ರ 3 ನೇ ಹಂತವನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಬಫರ್ ಸ್ಟಾಕ್ ರಚಿಸಬೇಕಾಗಿದೆ ”ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಕೇಂದ್ರಕ್ಕೆ ಸಲಹೆ ನೀಡಿದರು.

ದೇಶವ್ಯಾಪಿ ಆಮ್ಲಜನಕ ಬಿಕ್ಕಟ್ಟಿನ ನಡುವೆ, ದೆಹಲಿಯ COVID-19 ರೋಗಿಗಳಿಗೆ ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ಪ್ರತಿದಿನ 700 ಮೆ.ಟನ್ ಗೆ ಹೇಗೆ ಹೆಚ್ಚಿಸಲು ಸಾಧ್ಯ ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ ಮುಂದೆ ಹೇಳಿದರು. 700 ಮೆಟ್ರಿಕ್ ಟನ್ ಆಮ್ಲಜನಕದ ಬದಲು, COVID-19 ರೋಗಿಗಳಿಗೆ ಚಿಕಿತ್ಸೆ ನೀಡಲು ದೆಹಲಿಗೆ 730 ಮೆಟ್ರಿಕ್ ಟನ್ ಪೂರೈಕೆ ಮಾಡಲಿದೆ ಎಂದು ಉನ್ನತ ನ್ಯಾಯಾಲಯಕ್ಕೆ ತಿಳಿಸಿದರು. ಈಗಾಗಲೇ ಆಸ್ಪತ್ರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಸ್ಟಾಕ್ ಇದೆ. ನಿನ್ನೆ ದೆಹಲಿಗೆ ದೊಡ್ಡ ಪ್ರಮಾಣದ ಆಮ್ಲಜನಕ ವಿತರಿಸಲಾಗಿದೆ. ಆದರೆ ವಿತರಿಸಲಾಗಿಲ್ಲ,” ಎಂದು ಅವರು ಹೇಳಿದರು.

Exit mobile version