ಒಂದು ದಿನ CBI, ED ನಿಯಂತ್ರಣ ನನಗೆ ಕೊಡಿ, ಅರ್ಧದಷ್ಟು ಬಿಜೆಪಿಗರು ಜೈಲು ಪಾಲಾಗುತ್ತಾರೆ : ಅರವಿಂದ್ ಕೇಜ್ರಿವಾಲ್

New Delhi : ನನಗೆ ಒಂದು ದಿನ ಸಿಬಿಐ(CBI) ಮತ್ತು ಇಡಿ(ED) ನಿಯಂತ್ರಣದ ಅಧಿಕಾರ ನೀಡಿ, ಅರ್ಧದಷ್ಟು ಬಿಜೆಪಿ ನಾಯಕರು ಜೈಲು ಪಾಲಾಗುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Give that Power To Me) ಬಿಜೆಪಿ ವಿರುದ್ದ   ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆಪ್ ಸದಸ್ಯರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆರೋಪಿಸಿ ಬಿಜೆಪಿಯ(Give that Power To Me) ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು,

“ಬಿಜೆಪಿಯು ನಮ್ಮ ಪಕ್ಷದ ನಾಯಕರು ವಿರುದ್ಧ 167 ಪ್ರಕರಣಗಳನ್ನು ದಾಖಲಿಸಲಾಗಿದ್ದರೂ, ಯಾವುದೇ ತನಿಖಾ ಸಂಸ್ಥೆಯು ಎಎಪಿ ಸದಸ್ಯರಿಂದ ಯಾವುದೇ ತಪ್ಪನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. 

ಕಳೆದ ಏಳು ವರ್ಷಗಳಲ್ಲಿ, ಬಿಜೆಪಿಯು, ಎಎಪಿ ನಾಯಕರ ವಿರುದ್ಧ 167 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಒಂದೂ  ಪ್ರಕರಣ ಕೂಡಾ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ.

ಎಎಪಿ ನಾಯಕರನ್ನು 150 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ತೆರವುಗೊಳಿಸಲಾಗಿದೆ ಮತ್ತು ಉಳಿದವು ಬಾಕಿ ಉಳಿದಿವೆ.  

ಇದನ್ನೂ ಓದಿ : https://vijayatimes.com/finland-education-system/

800ಕ್ಕೂ ಹೆಚ್ಚು ಅಧಿಕಾರಿಗಳು ಎಎಪಿ ನಾಯಕರ ತಪ್ಪುಗಳನ್ನು ಕಂಡುಹಿಡಿಯಲು ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ. ಆದರೆ ಅವರು ಏನನ್ನೂ ಕಂಡುಕೊಂಡಿಲ್ಲ.

ಸುಳ್ಳು ಪ್ರಕರಣಗಳನ್ನು ದಾಖಲಿಸಿದ ಕಾರಣ ಏಜೆನ್ಸಿಗಳು ನ್ಯಾಯಾಲಯದ ಮೆಟ್ಟಿಲೇರುತ್ತಿವೆ ಎಂದು ಆರೋಪಿಸಿದ್ದಾರೆ.

https://youtu.be/9ouiEo3FiBs DIRTY FOOD SECRET | ನೋ….ನೋ…..ನೂಡಲ್ಸ್!

ಇನ್ನು ಇಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಚಿವ ಸತ್ಯೇಂದ್ರ ಜೈನ್ ಕಳೆದ ಆರು ತಿಂಗಳಿನಿಂದ ಜೈಲಿನಲ್ಲಿದ್ದಾರೆ.

ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಹಗರಣದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ಅವರನ್ನು ಸಿಬಿಐ ಎಫ್‌ಐಆರ್‌ನಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ.

ಪಕ್ಷದ ಸಂವಹನ ಉಸ್ತುವಾರಿ ವಿಜಯ್ ನಾಯರ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕಸ್ಟಡಿಯಲ್ಲಿದ್ದಾರೆ. ಆದರೆ ಇದೆಲ್ಲವೂ ರಾಜಕೀಯ ಪ್ರೇರಿತ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಇದೇ ವೇಳೆ, ಮುಂಬರುವ ಎಂಸಿಡಿ ಚುನಾವಣೆಯಲ್ಲಿ ಎಎಪಿ ಭರ್ಜರಿ ಬಹುಮತದೊಂದಿಗೆ ಗೆಲ್ಲಲಿದೆ.

ಇದನ್ನೂ ಓದಿ : https://vijayatimes.com/kantara-ott-fans/

ಎಎಪಿ ಎಂಸಿಡಿಯಲ್ಲಿ 250 ರಲ್ಲಿ 230 ಪ್ಲಸ್ ಸೀಟುಗಳನ್ನು ಪಡೆಯುತ್ತದೆ. ಬಿಜೆಪಿ 20ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದೆ. ಗುಜರಾತ್‌ನಲ್ಲಿಯೂ ಎಎಪಿ ಚುನಾವಣೆ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

Exit mobile version