ಗುಜರಾತ್ ಗೋಧ್ರಾ ರೈಲು ದಹನ ಪ್ರಕರಣ: ಸಾಕ್ಷಿಗಳ ಭದ್ರತೆ ವಾಪಸ್ ಪಡೆದ ಎಸ್.ಐ.ಟಿ

Gujarat: ಗುಜರಾತ್‌ನಲ್ಲಿ @Gujarat ನಡೆದಿದ್ದ ಗೋಧ್ರಾ ರೈಲು ದಹನ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ 131 ಸಾಕ್ಷಿಗಳಿಗೆ ನೀಡಿದ್ದ ಭದ್ರತೆಯನ್ನು ವಿಶೇಷ ತನಿಖಾ ತಂಡ ಹಿಂತೆಗೆದುಕೊಂಡಿದ್ದು, ಸಾಕ್ಷಿಗಳಿಗೆ ಯಾವುದೇ ಬೆದರಿಕೆಗಳು ಸುದೀರ್ಘ ಅವಧಿಯಲ್ಲಿ ಬಂದಿಲ್ಲ ಎಂದು ಹೇಳಿಕೊಂಡಿದೆ.

ಸಾಕ್ಷಿಗಳ ಜೊತೆಗೆ ಸಂತ್ರಸ್ತರಿಗೆ ಕಾನೂನು ಹೋರಾಟದಲ್ಲಿ ಸಹಾಯ ಮಾಡಿದ ಇಬ್ಬರು ವಕೀಲರಾದ ಎಂ.ಎಂ ತಿರ್ಮಿಜಿ ಮತ್ತು ಎಸ್ ಎಂ ವೋಹ್ರಾ (MM Tirmiji and SM Vohra) ಮತ್ತು ಪ್ರಕರಣದಲ್ಲಿ ತೀರ್ಪನ್ನು ನೀಡಿದ್ದ ನ್ಯಾಯಾದೀಶರ ತಂಡದಲ್ಲಿದ್ದ ಜಡ್ಜ್‌ ಜ್ಯೋತ್ಸ್ನಾ ಯಾಗ್ನಿಕ್‌ ಅವರ ಭದ್ರತೆಯನ್ನು ಕೂಡ ಹಿಂಪಡೆಯಲಾಗಿದೆ.

ಭದ್ರತೆಯನ್ನು ಡಿ.13ರಂದು ಬೆದರಿಕೆ ಬಗ್ಗೆ ಪರಿಶೀಲನೆ ಮಾಡಿದ ನಂತರ ಹಿಂಪಡೆಯಲಾಗಿದ್ದು, ಬಹುಪಾಲು ಸಾಕ್ಷಿಗಳಿಗೆ 2003ರಿಂದ ರಾಜ್ಯ ಸರ್ಕಾರದಿಂದ ರಕ್ಷಣೆ ನೀಡಲಾಗಿತ್ತು. ನ್ಯಾಯಾಲಯದ ಮುಂದೆ ಸಾಕ್ಷಿ ಹೇಳುವ ವಿಚಾರದಲ್ಲಿ ಯಾವುದೇ ಸಾಕ್ಷಿಗಳಿಗೆ (Witnesses) ಬೆದರಿಕೆ ಅಥವಾ ಒತ್ತಡವನ್ನು ಹಾಕಲಾಗಿಲ್ಲ ಎಂದು ಕಂಡುಕೊಂಡ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಎಸ್‌ಐಟಿ (SIT) ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.

ಎಸ್‌ಐಟಿ ತಂಡದ ಸದಸ್ಯ ಎ ಕೆ ಮಲ್ಹೋತ್ರಾ ಅವರು, ಇವರಲ್ಲಿ ಯಾರೂ ಬೆದರಿಕೆ ಅಥವಾ ಹಲ್ಲೆಯನ್ನು ಎದುರಿಸಿಲ್ಲ ಎಂದು ತಿಳಿಸಿದ್ದು, ಈ ಹಿಂದೆ ಆ.2021ರಲ್ಲಿ ಎಸ್‌ಐಟಿ 25 ಸಾಕ್ಷಿಗಳಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಉಲ್ಲೇಖಿಸಿ ಅವರಿಗೆ ನೀಡಿದ್ದ ಭದ್ರತೆಯನ್ನ #GodhraTrainBurningCase ಹಿಂತೆಗೆದುಕೊಂಡಿತ್ತು. ಇವರಿಗೆ ಸಿಐಎಸ್ಎಫ್ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಭದ್ರತೆ ನೀಡುತ್ತಿದ್ದರು.

ಸಾಕ್ಷಿಗಳ ರಕ್ಷಣೆಗಾಗಿ ಒಟ್ಟು 156 ಪೊಲೀಸರು ಮತ್ತು 98 ಸಿಐಎಸ್ಎಫ್ (CISF) ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ನರೋಡಾ ಪಾಟಿಯಾ ಹತ್ಯಾಕಾಂಡದ ತೀರ್ಪು ನೀಡಿ 12 ವರ್ಷಗಳು ಕಳೆದಿವೆ ಎಂಬ ಕಾರಣಕ್ಕಾಗಿ ನ್ಯಾಯಾಧೀಶೆ ಯಾಗ್ನಿಕ್ ಅವರ ಭದ್ರತೆಯನ್ನು ತೆಗೆದುಹಾಕಲಾಗಿದೆ ಎಂದು ಎಸ್‌ಐಟಿ ಹೇಳಿದೆ.

ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡ್ನಾನಿ ಮತ್ತು ವಿಎಚ್‌ಪಿ ನಾಯಕ ಬಾಬು ಬಜರಂಗಿ (Babu Bajarangi) ಸೇರಿದಂತೆ 32 ಆರೋಪಿಗಳನ್ನು ಅವರು ತಪ್ಪಿತಸ್ಥರೆಂದು ಘೋಷಿಸಿದ್ದರು. 2018ರಲ್ಲಿ ಕೊಡ್ನಾನಿ ಸೇರಿದಂತೆ 18 ಮಂದಿಯನ್ನು ಹೈಕೋರ್ಟ್ ಖುಲಾಸೆಗೊಳಿಸಿತ್ತು. ಗಲಭೆ ಪ್ರಕರಣಗಳ ತೀರ್ಪು ನೀಡಿದ್ದ 9 ನ್ಯಾಯಾಧೀಶರ ಪೈಕಿ ರಕ್ಷಣೆ ಕೋರಿದ ನ್ಯಾಯಾಧೀಶರಲ್ಲಿ ಯಾಗ್ನಿಕ್ ಒಬ್ಬರೇ ಆಗಿದ್ದರು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ತನಗೆ ಹಲವಾರು ಬೆದರಿಕೆ ಪತ್ರಗಳು ಮತ್ತು ಫೋನ್ ಕರೆಗಳು ಬಂದಿವೆ ಎಂದು ಯಾಗ್ನಿಕ್ ರಕ್ಷಣೆ ಕೋರಿದ್ದರು.

ಏನಿದು ಪ್ರಕರಣ:
2002ರ ಫೆ.27ರಂದು ಅಯೋಧ್ಯೆಯಿಂದ (Ayodhya) ಕರಸೇವಕರು ಮತ್ತು ಯಾತ್ರಿಗಳು ಹಿಂದಿರುಗುತ್ತಿದ್ದಾಗ ಸಬರಮತಿ ಎಕ್ಸ್‌ಪ್ರೆಸ್ ರೈಲು (Sabarmati Express Train) ಗುಜರಾತ್‌ನ ಗೋಧ್ರಾ ರೈಲ್ವೆ ನಿಲ್ದಾಣದ ಬಳಿ ಬಂದು ನಿಂತಿತ್ತು. ಆಗ ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ತಗುಲಿ 59 ಮಂದಿ ಮೃತಪಟ್ಟಿದ್ದರು. ಅವರಲ್ಲಿ 29 ಮಂದಿ ಪುರುಷರು, 22 ಮಂದಿ ಮಹಿಳೆಯರು ಹಾಗೂ 8 ಮಕ್ಕಳು ಸಾವನ್ನಪ್ಪಿದ್ದರು.

ಈ ದುರಂತದ ನಂತರ ವಿಶ್ವ ಹಿಂದೂ ಪರಿಷತ್ ಮತ್ತಿತರ ಬಲಪಂಥೀಯ ಸಂಘಟನೆಗಳು ಬಲವಾಗಿ ಖಂಡಿಸಿದ್ದವು. ಗುಜರಾತ್ ಬಂದ್‌ಗೆ (Bandh) ಕರೆಕೊಡಲಾಯಿತು. ಫೆ.28ರಂದು ಗುಜರಾತ್‌ನಾದ್ಯಂತ ಕೋಮುಗಲಭೆಗಳು ನಡೆದವು. ಅಂದು ಸಂಜೆ 27 ನಗರ ಮತ್ತು ಪಟ್ಟಣಗಳಲ್ಲಿ ಕರ್ಫ್ಯೂ ಹಾಕಲಾಯಿತು. ಆ ಬಳಿಕದ ಗಲಭೆಗಳಲ್ಲಿ 1,044 ಮಂದಿ ಸಾವನ್ನಪ್ಪಿರುವುದು ಅಧಿಕೃತವಾಗಿ ದಾಖಲಾಗಿರುವ ಮಾಹಿತಿ. 2,500 ಜನರು ಗಾಯಗೊಂಡಿದ್ದಾರೆ. ಇನ್ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು.

ಭವ್ಯಶ್ರೀ ಆರ್ ಜೆ

Exit mobile version