ಚಿನ್ನ ಕೊಳ್ಳುವವರಿಗೆ ಕಹಿ ಸುದ್ದಿ

ಬೆಂಗಳೂರು ನ 13 : ಚಿನ್ನ ಪ್ರಿಯರಿಗೊಂದು ಕಹಿ ಸುದ್ದಿಯಿದ್ದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್ 12ರಂದು ಚಿನ್ನದ ಬೆಲೆ ಭಾರಿ ಏರಿಕೆ ಕಂಡಿದೆ.

ದೇಶದಲ್ಲಿ ಶುಕ್ರವಾರ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 930 ರೂ.ರೂ. ಏರಿಕೆ ಕಂಡಿದ್ದು, 48,270 ರೂ. ಆಗಿದೆ, ಗುರುವಾರ 47,340ರೂ. ಇತ್ತು. ಇನ್ನು 24 ಕ್ಯಾರೆಟ್‌ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 49,270ರೂ. ಆಗಿದೆ, ಗುರುವಾರ 48,250 ರೂ. ಇತ್ತು. 1020 ರೂ. ಏರಿಕೆಯಾದಂತಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 45,900ರೂಪಾಯಿ,10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 50,070 ರೂಪಾಯಿಯಂತೆ ವಹಿವಾಟು ನಡೆಸಿದೆ.

ಎಂಸಿಎಕ್ಸ್ ನಲ್ಲಿ ನವೆಂಬರ್ 11ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 48,933 ರು ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡು 66.800ರು ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ +5.00ರಷ್ಟು ಏರಿಕೆಯಾಗಿ 1,832.00 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ -0.21 ಏರಿಕೆಯಾಗಿ 24.1 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರು ಚಿನ್ನದ ಮೌಲ್ಯ

22 ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 50,070
ಬೆಳ್ಳಿ ದರ: ರೂ. 67,100

Exit mobile version