ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಯುಟ್ಯೂಬ್ (good news for youtubers) ವಿಡಿಯೋಗಳನ್ನು ಮಾಡುವುದರಲ್ಲಿ ನಿರತರಾಗಿದ್ದಾರೆ. ಆದರೆ ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್ಗಳಿಗೆ ವಿಡಿಯೋ ಎಡಿಟಿಂಗ್
(Video Editing) ಕೂಡಾ ಕೆಲವೊಮ್ಮೆ ಸವಾಲಾಗಿ ಪರಿಣಮಿಸುವುದು ಇದೆ. ಹಾಗಾಗಿ ಸ್ವತಃ ಯುಟ್ಯೂಬ್ ಪರಿಹಾರ ಸೂಚಿಸಿದೆ.
ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್ಗಳಿಗೆ ಗೂಗಲ್ ಮಾಲಿಕತ್ವದ ವಿಡಿಯೋ ಪ್ಲಾರ್ಟ್ಫಾರ್ಮ್ ಮತ್ತೊಂದು ಸಿಹಿ ಸುದ್ದಿ ನೀಡಿದೆ. ವಿಡಿಯೋ ಎಡಿಟಿಂಗ್ಗೆ ಸಹಾಯವಾಗುವಂತೆ ಯುಟ್ಯೂಬ್ ಕ್ರಿಯೇಟ್
(YouTube Create) ಎಂಬ ಹೊಸ ಅಪ್ಲಿಕೇಶನ್ (Application) ಅನ್ನು ಯುಟ್ಯೂಬ್ ಘೋಷಿಸಿದೆ. ಈ ಆ್ಯಪ್ ಮೂಲಕ ತಮ್ಮ ಫೋನ್ನಲ್ಲೇ ಕಂಟೆಂಟ್ ಕ್ರಿಯೇಟರ್ಗಳು ಸುಲಭವಾಗಿ ವಿಡಿಯೋ
ಎಡಿಟಿಂಗ್ ಮಾಡಬಹುದು. ಈ ಆ್ಯಪ್ ಬರೀ ಕಿರು ವಿಡಿಯೋಗಳ ಎಡಿಟಿಂಗ್ಗೆ ಮಾತ್ರ ನೆರವಾಗುತ್ತಿಲ್ಲ ಬದಲಾಗಿ ಸರಳ ಎಐ ಟೂಲ್ಗಳ ಬಳಕೆಯ ಮೂಲಕ ವಿಡಿಯೋ ಎಡಿಟಿಂಗ್ ಅನ್ನು ಸುಲಭವಾಗಿಸುವ
ಉದ್ದೇಶವನ್ನು (good news for youtubers) ಇದು ಹೊಂದಿದೆ.
ಹಾಗಾಗಿ ವಿಡಿಯೋ ಎಡಿಟಿಂಗ್ ಆ್ಯಪ್ನ ಪರಿಕಲ್ಪನೆ ಹೊಸದೇನೂ ಅಲ್ಲ. ಚೀನಾ ಮೂಲದ ಕಿರು ವಿಡಿಯೋ ಆ್ಯಪ್ ಟಿಕ್ಟಾಪ್ ಕೂಡಾ ಅದರ ವಿಡಿಯೋ ಎಡಿಟಿಂಗ್ ಆ್ಯಪ್ ಅನ್ನು ಈ ಹಿಂದೆ ಬಿಡುಗಡೆ ಮಾಡಿತ್ತು.
ಈಗ ಗೂಗಲ್ (Google) ಕೂಡಾ ಇದೇ ಟ್ರೆಂಡ್ ಅನ್ನು ಅನುಸರಿಸುತ್ತಾ ಹೆಜ್ಜೆ ಇಟ್ಟಿದೆ. ವಿಡಿಯೋ ಎಡಿಟ್ ಮಾಡಲು ಈ ಆ್ಯಪ್ ಸರಳವಾಗಿ ಯುಟ್ಯೂಬರ್ಗಳಿಗೆ ಸಹಾಯ ಮಾಡುತ್ತದೆ. ನಿಖರವಾದ ಎಡಿಟಿಂಗ್,
ಟ್ರಿಮ್ಮಿಂಗ್,(Trimming) ಆಟೋ ಕ್ಯಾಪ್ಶನ್, ವಾಯ್ಸ್ ಓವರ್ನಂತಹ ಆಯ್ಕೆಯಂತಹ ಟೂಲ್ಗಳು ಇಲ್ಲಿವೆ. ಅದೂ ಅಲ್ಲದೆ, ಫಿಲ್ಟರ್ಗಳ ಲೈಬ್ರರಿ, ಟ್ರಾನ್ಸಿಷನ್ಸ್ ಮತ್ತು ಎಫೆಕ್ಟ್ಗಳನ್ನೂ ಈ ಅಪ್ಲಿಕೇಷನ್
ಒದಗಿಸುತ್ತದೆ. ಇದರೊಂದಿಗೆ ರಾಯಲ್ಟಿ ಫ್ರೀ ಮ್ಯೂಸಿಕ್ ಮತ್ತು ಬೀಟ್ ಸಿಂಗ್ ವೈಶಿಷ್ಟ್ಯವನ್ನೂ ಅಪ್ಲಿಕೇಷನ್ನಲ್ಲಿ ಸೇರಿಸಲಾಗಿದೆ.
ಬಳಕೆದಾರರಿಗೆ ಸುಲಭವಾಗಿ ಪೂರ್ಣಪ್ರಮಾಣದ ವಿಡಿಯೋ ರಚಿಸುವುದಕ್ಕೆ ನೆರವಾಗುವಂತಹ ಟೂಲ್ಗಳನ್ನು ಈ ಅಪ್ಲಿಕೇಷನ್ ಒಳಗೊಂಡಿದೆ. ಯುಟ್ಯೂಬ್ ಕ್ರಿಯೇಟ್ ಆ್ಯಪ್ ಸಂಪೂರ್ಣ ಉಚಿತವಾಗಿ
ಲಭ್ಯವಿರಲಿದೆ ಎಂದು ಗೂಗಲ್ ದೃಢಪಡಿಸಿದೆ. ಪ್ರಸ್ತುತ ಆಂಡ್ರಾಯ್ಡ್ ಡಿವೈಸ್ಗಳ (Android Device) ಬೀಟಾದಲ್ಲಿ ಈ ಅಪ್ಲಿಕೇಷನ್ ಲಭ್ಯವಿದೆ.
ಯುಟ್ಯೂಬ್ ಕ್ರಿಯೇಟ್ನ ಬೀಟಾ ಆವೃತ್ತಿ ಈಗ ಯುಎಸ್(US) , ಯುಕೆ, ಜರ್ಮನಿ, ಫ್ರಾನ್ಸ್, ಇಂಡೋನೇಷ್ಯಾ, ಭಾರತ, ಕೊರಿಯಾ (Korea) ಮತ್ತು ಸಿಂಗಾಪುರ ಸೇರಿದಂತೆ ಆಯ್ದ ದೇಶಗಳಲ್ಲಿ ಸಿಗುತ್ತಿದೆ.
ಮುಂದಿನ ವರ್ಷ ಅಪ್ಲಿಕೇಷನ್ ಐಒಎಸ್ ಆವೃತ್ತಿಯನ್ನು ಯುಟ್ಯೂಬ್ ಪ್ರಾರಂಭಿಸುವ ಸಾಧ್ಯತೆ ಇದೆ.
ಇಷ್ಟೇ ಅಲ್ಲದೆ ಯುಟ್ಯೂಬ್ ತನ್ನ ವಾರ್ಷಿಕ ‘ಮೇಡ್ ಆನ್ ಯೂಟ್ಯೂಬ್’ (Made on YouTube) ಈವೆಂಟ್ನಲ್ಲಿ ಬಳಕೆದಾರರಿಗೆ ಹಲವಾರು ಎಐ ಚಾಲಿತ ಟೂಲ್ಗಳನ್ನು ನೀಡಿದೆ. ಶಾರ್ಟ್ಸ್ ವಿಡಿಯೋಗಳಿಗೆ
ಎಐ ರಚಿಸಿದ ಬ್ಯಾಕ್ಗ್ರೌಂಡ್ಗಾಗಿ ಡ್ರೀಮ್ ಸ್ಕ್ರೀನ್ ಟೂಲ್ನಂತಹ ಕೆಲ ಎಐ ಚಾಲಿತ ವೈಶಿಷ್ಟ್ಯಗಳನ್ನೂ ಯುಟ್ಯೂಬ್ ಘೋಷಿಸಿದೆ.
ಇದನ್ನು ಓದಿ: ಅರಣ್ಯ ವೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಲಿಖಿತ ಪರೀಕ್ಷೆ ಇಲ್ಲ, SSLC ವಿದ್ಯಾರ್ಹತೆ..!
- ಭವ್ಯಶ್ರೀ ಆರ್.ಜೆ