ಶುಭಸುದ್ದಿ: ಸೂರ್ಯನ ಅಧ್ಯಯನಕ್ಕಾಗಿ ತೆರಳಿರುವ ‘ಆದಿತ್ಯ’ನಿಂದ ಬಂತು ಮತ್ತೊಂದು ಗುಡ್ ನ್ಯೂಸ್

New Delhi: ಭಾರತದ ಮಹತ್ವಾಕಾಂಕ್ಷಿ ಮೊದಲ ಸೌರ ನೌಕೆ ಆದಿತ್ಯ ಎಲ್‌-1 (Good News from AdityaL1), ತನ್ನ ಉದ್ದೇಶಿತ ನಿಲ್ದಾಣಕ್ಕೆ ಮತ್ತಷ್ಟು ಹತ್ತಿರಕ್ಕೆ ಸಮೀಪಿಸಿದ್ದು, ಇನ್ನು

ಒಂದು ತಿಂಗಳಲ್ಲಿ ಅದು ಕಕ್ಷೆ ಸೇರುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಅದರ ಪೇಲೋಡ್‌ನಲ್ಲಿರುವ (Payload) ಸಾಧನವೊಂದು ಸಕ್ರಿಯಗೊಂಡಿದ್ದು, ಮೊದಲ ಚಿತ್ರ ತಲುಪಿಸಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಉಪಗ್ರಹದಲ್ಲಿನ ಆದಿತ್ಯ ಸೌರ ಮಾರುತ ಕಣ ಪ್ರಯೋಗ ಪೇಲೋಡ್ ತನ್ನ ಕಾರ್ಯಾಚರಣೆ ಆರಂಭಿಸಿದೆ ಮತ್ತು ಸಹಜವಾಗಿ

ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ತಿಳಿಸಿದೆ. ಎಎಸ್‌ಪಿಎಇಎಕ್ಸ್ ಎರಡು ಸಾಧನಗಳನ್ನು ಹೊಂದಿದೆ. ಒಂದು ಸೋಲಾರ್ ವಿಂಡ್ ಅಯಾನ್ ಸ್ಪೆಕ್ಟ್ರೋಮೀಟರ್ (Solar Wind Ion

Spectrometer), ಮತ್ತೊಂದು ಸುಪ್ರಾ ಥರ್ಮಲ್ ಆಂಡ್ ಎನೆರ್ಜೆಟಿಕ್ ಪರ್ಟಿಕಲ್ (Good News from AdityaL1) ಸ್ಪೆಕ್ಟ್ರೋಮೀಟರ್ (ಎಸ್‌ಟಿಇಪಿಎಸ್).

ಎಸ್‌ಟಿಇಪಿಎಸ್ (STEPS) ಅಥವಾ ಸ್ಟೆಪ್ಸ್, ಸೆಪ್ಟೆಂಬರ್ 10ರಂದೇ ಕಾರ್ಯಾಚರಣೆಗೆ ಸಕ್ರಿಯಗೊಂಡಿತ್ತು. ಎಸ್‌ಡಬ್ಲ್ಯೂಐಎಸ್ (SWIS) ಅಥವಾ ಸ್ವಿಸ್ ಸಾಧನವು ಶನಿವಾರ ಸಕ್ರಿಯಗೊಂಡಿದ್ದು,

ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಇಸ್ರೋ (ISRO) ಮಾಹಿತಿ ನೀಡಿದೆ.

ಜನವರಿ 7ರಂದು ಕಕ್ಷೆ ಸೇರ್ಪಡೆ ನಿರೀಕ್ಷೆ
ಆಂಧ್ರಪ್ರದೇಶದ (Andrapradesh) ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್‌ಡಿಎಸ್‌ಸಿ) ಸೆ 2ರಂದು ಆದಿತ್ಯ ಎಲ್‌1 ಸೌರ ಅಧ್ಯಯನ ನೌಕೆಯನ್ನುಉಡಾವಣೆ

ಮಾಡಲಾಗಿತ್ತು. ಈ ನೌಕೆ ಈಗ ಮೂರು ತಿಂಗಳ ಪ್ರಯಾಣ ಪೂರೈಸಿದೆ. ಇನ್ನೂ ಒಂದು ತಿಂಗಳು ಇದು ಸೂರ್ಯ ಮುಖಿಯಾಗಿ ತನ್ನ ಪಯಣ ಮುಂದುವರಿಸಲಿದೆ.

ಉಡಾವಣೆಯ ದಿನದಿಂದ ಬಾಹ್ಯಾಕಾಶ ನೌಕೆಯು ಸುಮಾರು 1.5 ಮಿಲಿಯನ್ (Millions) ಕಿಮೀ ಪ್ರಯಾಣಿಸಿದ ಬಳಿಕ ಅಂದಾಜು 125 ದಿನಗಳಲ್ಲಿ, ಜನವರಿ 7ರಂದು ಅದು ಸೂರ್ಯನ ಎಲ್‌1

ಪಾಯಿಂಟ್‌ನ (L1 Point) ಉದ್ದೇಶಿತ ಕಕ್ಷೆಯನ್ನು ಸೇರಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದ್ದು, ಆದಿತ್ಯ ಎಲ್‌1 ಬಾಹ್ಯಾಕಾಶ ನೌಕೆಯು ತನ್ನ ಅಂತಿಮ ಹಂತ ಸಮೀಪಿಸುತ್ತಿದೆ. ಜನವರಿ 7, 2024

ವೇಳೆಗೆ ಅದನ್ನು ಲಾಗ್ರೇಂಜಿಯನ್ ಪಾಯಿಂಟ್ ಎಲ್‌1 ಸುತ್ತಲಿನ ಸೂರ್ಯನ ಸಮೀಪದ ಭಾಗವಾದ ಹ್ಯಾಲೋ ಕಕ್ಷೆಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್

(S Somanath) ಅವರು ಇತ್ತೀಚೆಗ ತಿಳಿಸಿದ್ದರು.

ಇದನ್ನು ಓದಿ: ಮಂಡ್ಯದ ಇಬ್ಬರು ವೈದ್ಯರು ಆತ್ಮಹತ್ಯೆಗೆ ಶರಣು: ಅನುಮಾನ ಮೂಡಿಸುತ್ತಿರುವ ಈ ಇಬ್ಬರ ಆತ್ಮಹತ್ಯೆ

Exit mobile version