ಗೂಗಲ್ ಗೆ ರೂ. 1948 ಕೋಟಿ ದಂಡ ವಿಧಿಸಿದ ಫ್ರಾನ್ಸ್

ಪ್ಯಾರಿಸ್, ಜೂ. 07: ಗೂಗಲ್, ಆನ್‌ಲೈನ್ ಜಾಹೀರಾತುಗಳನ್ನು ಪ್ರಕಟಿಸುವುದಕ್ಕಾಗಿ ತನ್ನ ಪ್ರಬಲ ಮಾರುಕಟ್ಟೆ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂಬುದನ್ನು ಪತ್ತೆ ಮಾಡಿರುವ ಫ್ರಾನ್ಸ್‌ನ ಸ್ಪರ್ಧಾ ನಿಯಂತ್ರಕವು ಗೂಗಲ್‌ಗೆ 220 ಮಿಲಿಯನ್ ಯೂರೊ (ಸುಮಾರು ₹ 1948 ಕೋಟಿ) ದಂಡ ವಿಧಿಸಿದೆ.

ಆನ್‌ಲೈನ್ ಜಾಹೀರಾತು ಮಾರಾಟದಲ್ಲಿ ಗೂಗಲ್ ಏಕಸ್ವಾಮ್ಯವನ್ನು ಹೊಂದಿದೆ ಎಂದು ನ್ಯೂಸ್ ಕಾರ್ಪ್, ಫ್ರೆಂಚ್ ಡೈಲಿ ಲೆ ಫಿಗರೊ ಮತ್ತು ಬೆಲ್ಜಿಯಂನ ಗ್ರೂಪ್ ರೊಸೆಲ್ ಎಂಬ ಮೂರು ಮಾಧ್ಯಮ ಗುಂಪುಗಳು ತಲುಪಿದ ಒಮ್ಮತದ ಭಾಗವಾಗಿ ಈ ದಂಡ ವಿಧಿಸಲಾಗಿದೆ.

ಗೂಗಲ್ ವಿರುದ್ಧ ಫ್ರಾನ್ಸ್ ವಿಧಿಸಿರುವ ದಂಡವು ಈ ರೀತಿಯ ಆ್ಯಂಟಿಟ್ರಸ್ಟ್ ಪ್ರಕರಣದಲ್ಲಿ ಹಿಂದಿನ ಅತಿದೊಡ್ಡ ದಂಡಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಪಾಶ್ಚಿಮಾತ್ಯ ದೇಶಗಳ ಡಿಜಿಟಲ್ ಸೇವೆಗಳ ಅತ್ಯಂತ ಸಕ್ರಿಯ ನಿಯಂತ್ರಕ ಎಂದು ಹೇಳಲಾಗುವ ಯುರೋಪಿಯನ್ ಯೂನಿಯನ್ ಆಂಟಿಟ್ರಸ್ಟ್ ಸಂಸ್ಥೆ ಮುಖ್ಯಸ್ಥೆ ಮಾರ್ಗರೇಟ್ ವೆಸ್ಟಾಗರ್ ಹೇಳಿದ್ದಾರೆ.

‘ಗೂಗಲ್ ಸಂಸ್ಥೆ ಮಾಡಿರುವ ಕೃತ್ಯ ಯೂರೋಪಿಯನ್ ಯೂನಿಯನ್ ಆ್ಯಂಟಿ ಟ್ರಸ್ಟ್ ವಿರೋಧಿ ನಿಯಮಗಳಡಿಯಲ್ಲಿ ಕಾನೂನುಬಾಹಿರವಾಗಿದೆ ಎಂದು ಅವರು ಹೇಳಿದ್ದಾರೆ.

Exit mobile version