ಜನರಲ್ಲಿ ಹೊಸ ಸರ್ಕಾರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದ್ದು, ಗ್ಯಾರಂಟಿಗಳ ನಡುವೆ ಹೊಸ ಭರವಸೆ ಹುಟ್ಟಿಸುತ್ತಾ ರಾಜ್ಯ ಸರ್ಕಾರದ ಬಜೆಟ್?

Bengaluru: 14ನೇ ಬಾರಿ ಇಂದು ಸಿಎಂ ಸಿದ್ದರಾಮಯ್ಯ (government and budget expectation) ಬಜೆಟ್ (Budget 2023) ಮಂಡನೆ ಮಾಡುತ್ತಿದ್ದಾರೆ. ಗ್ಯಾರಂಟಿಗಳೇ ಈ ಬಜೆಟ್‌ನಲ್ಲಿ ಮುಖ್ಯ

ಸವಾಲುಗಳಾಗಿವೆ. ಹಾಗಾಗಿ ಗ್ಯಾರಂಟಿ ಯೋಜನೆಗಳನ್ನು ಸರಿದೂಗಿಸುವ ಜೊತೆಗೆ ಹೊಸ ಭರವಸೆಗಳನ್ನು ಹುಟ್ಟಿಸುತ್ತಾ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಜನರಲ್ಲಿ ಹೊಸ ಸರ್ಕಾರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದ್ದು, ಈ ಬಾರಿಯ ಬಜೆಟ್‌(Budget) ಗಾತ್ರ 3.35 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ.ಸಿಎಂ ಇಂದು ಮಧ್ಯಾಹ್ನ 12 ಗಂಟೆಗೆ ಬಜೆಟ್‌ ಮಂಡಿಸಲಿದ್ದಾರೆ.

ಕೆಲವು ತೆರಿಗೆಗಳನ್ನು ( taxes) ಸಿಎಂ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಜೊತೆಗೆ ಹಲವು ಇಲಾಖೆಗಳ ಅನುದಾನವನ್ನು ಕೂಡ ಕಡಿತ ಮಾಡುವ ಸಾಧ್ಯತೆ. ಶಾಸಕರ ಅಭಿವೃದ್ಧಿಗೆ ಹೆಚ್ಚಿನ ನೆರವು ಸಿಗುವುದು

ಡೌಟು ಎನ್ನಲಾಗ್ತಿದೆ. ಸಿಎಂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಮುಂದಾಗಲಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಸಿಎಂ ಈ ಬಾರಿ ದಾಖಲೆಯ ಬಜೆಟ್‌ ಮಂಡಿಸಲಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ಸಿದ್ದರಾಮಯ್ಯ ಅವರ ಮೇಲೆ 5 ಗ್ಯಾರಂಟಿ ಅನುಷ್ಠಾನದ ಹೊರೆಯೊಂದಿಗೆ ಆರ್ಥಿಕ ವ್ಯವಸ್ಥೆ ಸರಿದೂಗಿಸುವ ಜವಬ್ದಾರಿಯೂ ಇದೆ. ಬಜೆಟ್ ಗಾತ್ರ ಮತ್ತು ರಾಜ್ಯದ ಸಾಲದ ಹೊರೆ ಎರಡೂ ಕೂಡ ಸಿಎಂ

ಸಿದ್ದರಾಮಯ್ಯ ಮುಂದಿರುವ ಆರ್ಥಿಕ ಸಂಕಷ್ಟದ ಸವಾಲಿನಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ (government and budget expectation) ಎನ್ನಲಾಗುತ್ತಿದೆ.

3.09 ಲಕ್ಷ ಕೋಟಿ ಗಾತ್ರದ ಬಜೆಟ್ ಕಳೆದ ಬಾರಿ ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿಯವರಿಂದ (Basavaraj Bommai) ಮಂಡನೆಯಾಗಿತ್ತು. ಈ ಬಾರಿ 3 ಲಕ್ಷಣ 35 ಸಾವಿರದಿಂದ 40 ಸಾವಿರ ಕೋಟಿವರೆಗೂ

ಸಿದ್ದರಾಮಯ್ಯ ಮಂಡಿಸುವ ಬಜೆಟ್ ಗಾತ್ರ ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ.77,750 ಕೋಟಿ ವರೆಗೆ ಸಾಲ ಪಡೆಯಲು ಅವಕಾಶವಿದೆ ಎಂದು 2023-24ನೇ ಸಾಲಿನ ಬಜೆಟ್ ನಲ್ಲಿ ಹೇಳಲಾಗಿದೆ.

ಸಾಲದ ಮೊತ್ತ:

ರಶ್ಮಿತಾ ಅನೀಶ್

Exit mobile version