ಆಂಧ್ರ ಸರ್ಕಾರ: ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. ೧೦ರಷ್ಟು ಮೀಸಲಾತಿ

ಆಂಧ್ರಪ್ರದೇಶ, ಜು. 15: ಸಂವಿಧಾನದ 103ನೇ ತಿದ್ದುಪಡಿ ಕಾಯ್ದೆಯ ಪ್ರಕಾರ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯೂಎಸ್) ಶೇ 10 ರಷ್ಟು ಮೀಸಲಾತಿ ಒದಗಿಸುವ ಹೊಸ ಆದೇಶವನ್ನು ಆಂಧ್ರಪ್ರದೇಶ ಸರ್ಕಾರ ಹೊರಡಿಸಿದೆ.

ಒಟ್ಟು ಕುಟುಂಬದ ವಾರ್ಷಿಕ ಆದಾಯವು ₹ 8 ಲಕ್ಷಕ್ಕಿಂತ ಕಡಿಮೆ ಇರುವ ಮತ್ತು ಸದ್ಯ ಅಸ್ತಿತ್ವದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ ವ್ಯಾಪ್ತಿಗೆ ಒಳಪಡದ ವ್ಯಕ್ತಿಗಳು ಇಡಬ್ಲ್ಯೂಎಸ್ ಮೀಸಲಾತಿಯ ಲಾಭವನ್ನು ಪಡೆಯುತ್ತಾರೆ ಎಂದು ಮುಖ್ಯ ಕಾರ್ಯದರ್ಶಿ ಆದಿತ್ಯ ನಾಥ್ ದಾಸ್ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಇಡಬ್ಲ್ಯೂಎಸ್ ಅಡಿಯ ಶೇಕಡಾ 10 ಮೀಸಲಾತಿಯನ್ನು ವಿಂಗಡಿಸಿ ಅರ್ಧದಷ್ಟು ವಿಶೇಷವಾಗಿ ಕಾಪು ಸಮುದಾಯಕ್ಕೆ ನೀಡಿ, ಉಪ-ವರ್ಗವನ್ನಾಗಿ ಮಾಡಿದ್ದ ಹಿಂದಿನ ಟಿಡಿಪಿ ಸರ್ಕಾರದ 2019ರ ಆದೇಶವನ್ನು ಈ ಹೊಸ ಆದೇಶ ರದ್ದುಪಡಿಸುತ್ತದೆ.

Exit mobile version