ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಒಟ್ಟು 55 ಸರಕಾರಿ ಶಾಲೆಗಳಲ್ಲಿ ಈ ಬಾರಿ ಶೂನ್ಯ ದಾಖಲಾತಿ

UDUPI 2023-24ನೇ ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳಾಗಿದೆ. ಶಾಲೆಯ ಬಾಗಿಲು ತೆರೆದಿದ್ದು, ಬೇಸಿಗೆ ರಜೆ ಮುಗಿದು (government schools zero enrollment) ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ.

ಹೊಸ ಮಕ್ಕಳು ಶಾಲೆಗೆ ಸೇರುತ್ತಿದ್ದಾರೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ದಕ್ಷಿಣಕನ್ನಡ (Dakshina Kannada) ಮತ್ತು ಉಡುಪಿ(Udupi) ಜಿಲ್ಲೆಗಳ ಅನೇಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ

ಒಂದನೇ ತರಗತಿಗೆ ಮಕ್ಕಳ ದಾಖಲಾತಿ ಸಂಖ್ಯೆ ಶೂನ್ಯವಾಗಿರುವುದು (government schools zero enrollment) ಅಚ್ಚರಿ ಮೂಡಿಸಿದೆ.

ಹೌದು, ಎರಡು ಜಿಲ್ಲೆಗಳ 55 ಸಾರ್ವಜನಿಕ ಪ್ರಾಥಮಿಕ ಶಾಲೆಗಳಲ್ಲಿ (Primary School) ಒಂದನೇ ತರಗತಿಗೆ ಯಾವುದೇ ವಿದ್ಯಾರ್ಥಿ ಕೂಡ ದಾಖಲಾಗಿಲ್ಲ ದಕ್ಷಿಣ ಕನ್ನಡದ 24 ಶಾಲೆಗಳಲ್ಲಿ ಶೂನ್ಯ ದಾಖಲಾತಿ

ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಪುತ್ತೂರು (Puttur) ತಾಲೂಕಿನಲ್ಲಿ ಎರಡು, ಬಂಟ್ವಾಳದಲ್ಲಿ(Bantwala) ನಾಲ್ಕು, ಬೆಳ್ತಂಗಡಿಯಲ್ಲಿ (Belthangadi) ಮೂರು,

ಮಂಗಳೂರು ಉತ್ತರದಲ್ಲಿ ಎರಡು, ಮಂಗಳೂರು(Mangalore) ದಕ್ಷಿಣದಲ್ಲಿ ಎರಡು, ಮೂಡುಬಿದಿರೆಯ(Moodbidri) ಮೂರು ಮತ್ತು ಸುಳ್ಯ ತಾಲೂಕಿನಲ್ಲಿ ಎಂಟು ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಶೂನ್ಯವಾಗಿದೆ.

ಇದನ್ನೂ ಓದಿ : ಪಿಡಿಒ ಹುದ್ದೆಗೆ ಅರ್ಜಿ ಅಹ್ವಾನ : ವೇತನ, ಅರ್ಹತೆ, ಅರ್ಜಿ ವಿಧಾನ, ಆಯ್ಕೆ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ

ಸಾರ್ವಜನಿಕ ಶಿಕ್ಷಣ ಇಲಾಖೆ (ಡಿಡಿಪಿಐ) (DDPI)ದಕ್ಷಿಣ ಕನ್ನಡದ ಉಪನಿರ್ದೇಶಕ ಆರ್.ದಯಾನಂದ(R Dayanand) ಮಾತನಾಡಿ, ಶಾಲೆಗೆ ಬರಲು ಇನ್ನೂ ಸಮಯವಿದ್ದು, ಮಕ್ಕಳು ಶಾಲೆಗೆ ಹೋಗಲು ಇನ್ನೂ

ಅವಕಾಶವಿದೆ. ಗ್ರೇಡ್‌ವಾರು ಡೇಟಾ ಕ್ರೋಢೀಕರಣ ಪ್ರಕ್ರಿಯೆಯು ಮುಂದುವರಿದಿದೆ ಎಂದರು. ಇನ್ನು ಉಡುಪಿ ಜಿಲ್ಲೆಯಲ್ಲಿ ಒಂದನೇ ತರಗತಿಗೆ 31 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ.

ಉಡುಪಿಯಲ್ಲಿ(Udupi) ನಾಲ್ಕು, ಕುಂದಾಪುರದಲ್ಲಿ(Kundapura) ಐದು,ಬ್ರಹ್ಮಾವರದಲ್ಲಿ ನಾಲ್ಕು, ಬೈಂದೂರಿನಲ್ಲಿ(Baindur) ಒಂಬತ್ತು, ಕಾರ್ಕಳ ತಾಲೂಕಿನಲ್ಲಿ ಒಂಬತ್ತು ಶಾಲೆಗಳ ಒಂದನೇ ತರಗತಿಗೆ

ದಾಖಲಾದ ಮಕ್ಕಳ ಸಂಖ್ಯೆ ಶೂನ್ಯವಾಗಿದೆ.

ಸಾರಿಗೆ ಸೌಲಭ್ಯ ಹೊಂದಿರುವ ಮತ್ತು ಉತ್ತಮ ಮೂಲಸೌಕರ್ಯ ಹೊಂದಿರುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು(English medium school) ಏರಿಕೆಯಾಗಿರುವುದು ಇದೀಗ ಸರ್ಕಾರಿ ಶಾಲೆಗಳ

ಪ್ರವೇಶದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಉಡುಪಿ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ವಿಧಾನ ಪರಿಷತ್ತಿಗೆ ಡಿಸೆಂಬರ್ 2022 ರಲ್ಲಿ ಸಲ್ಲಿಸಲಾದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯ ಪ್ರಕಾರ, ಕಳೆದ 13 ವರ್ಷಗಳಲ್ಲಿ ಖಾಸಗಿ ಶಾಲೆಗಳ ಪ್ರವೇಶವು ‘ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ

(RMSA) ಪ್ರಕಾರ ಶೇಕಡಾ 335 ರಷ್ಟು ಹೆಚ್ಚಾಗಿದೆ, ಆದರೆ ಸರ್ಕಾರಿ ಶಾಲೆಗಳಿಗೆ ಪ್ರವೇಶ ಕೇವಲ 30 ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

ರಶ್ಮಿತಾ ಅನೀಶ್

Exit mobile version