ಗ್ರಾಮ ಒನ್‌ ಕೇಂದ್ರಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

gram one

ಸಾರ್ವಜನಿಕರಿಗೆ ಗ್ರಾಮ ಪಂಚಾಯತ್‌ ಮಟ್ಟದಲ್ಲೇ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಗ್ರಾಮಒನ್ ಎಂಬುದನ್ನು ಗ್ರಾಮೀಣ ಮಟ್ಟದಲ್ಲಿ ತೆರೆಯಲಾಗಿದೆ. ಇದರಲ್ಲಿ ಜಿ2ಸಿ ಸೇವೆಗಳು, ಬ್ಯಾಂಕಿಂಗ್ ಸೇವೆಗಳು, ಆರ್.ಟಿ.ಐ. ಪ್ರಶ್ನೆಗಳು ಇತ್ಯಾದಿಗಳು ಒಳಗೊಂಡಿರುತ್ತವೆ. 2020-21 ರ ಹಣಕಾಸು ವರ್ಷದ ಆಯವ್ಯಯ ಪತ್ರದಲ್ಲಿ ಗೌರವಾನ್ವಿತ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಇದನ್ನು ಘೋಷಿಸಿರುತ್ತಾರೆ. ವಾರದ ಎಲ್ಲಾ ಏಳು (7) ದಿನಗಳಲ್ಲೂ ಬೆಳಿಗ್ಗೆ 8.00 ರಿಂದ ರಾತ್ರಿ 8.00 ಗಂಟೆಯವರೆಗೆ ಗ್ರಾಮಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ.

ಗ್ರಾಮಒನ್ ಕೇಂದ್ರಗಳ ಸೇವೆ ಮತ್ತು ಸೌಲಭ್ಯಗಳು :

10 ಜಿಲ್ಲೆಗಳಲ್ಲಿ ಸ್ಥಾಪನೆ

ಇಡಿಸಿಎಸ್ ನಿರ್ದೇಶನಾಲಯ, ಡಿಪಿಎಆರ್ (ಇ-ಆಡಳಿತ), ಕರ್ನಾಟಕ ಸರ್ಕಾರವು ಒಂದೇ ಸೂರಿನಡಿ ವಿವಿಧ ಸರ್ಕಾರಿ ಖಾತೆಗಳ ಮತ್ತು ಖಾಸಗಿ ಸಂಸ್ಥೆಗಳ ಸೇವೆಗಳನ್ನು ನಾಗರೀಕರಿಗೆ ಸ್ನೇಹತ್ವ ರೀತಿಯಲ್ಲಿ ಒದಗಿಸಲು ಗ್ರಾಮಒನ್ ಕೇಂದ್ರಗಳನ್ನು ತೆರೆದಿದೆ.

ಸಿಎಮ್ಎಸ್ ಕಂಪ್ಯೂಟರ್ಸ್ ಲಿಮಿಟೆಡ್ (ಗ್ರಾಮಒನ್‌ನ ಕಾರ್ಯಾಚರಣೆಯ ಪಾಲುದಾರ) ಮೂಲಕ ಇಡಿಸಿಎಸ್ ನಿರ್ದೇಶನಾಲಯವು ಪ್ರಾಯೋಗಿಕ ಯೋಜನೆಯಡಲ್ಲಿ ಫ್ರ್ಯಾಂಚೈಸಿ ಮಾದರಿಯಲ್ಲಿ ಗ್ರಾಮಒನ್ ಕೇಂದ್ರಗಳನ್ನು ಕರ್ನಾಟಕದ ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಗದಗ, ಧಾರವಾಡ, ಕಾರವಾರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಸ್ಥಾಪಿಸಲು ಪ್ರಸ್ತಾಪಿಸಿದೆ.

10 ಜಿಲ್ಲೆಗಳಲ್ಲಿ ಮಾತ್ರ ಗ್ರಾಮಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಗಮನಿಸಬಹುದು.

ಗ್ರಾಮ ಒನ್‌ ತೆರೆಯಲು ಬೇಕಾಗುವ ಸೌಕರ್ಯಗಳು

ಅರ್ಹತಾ ಮಾನದಂಡಗಳು

ಷರತ್ತು ಮತ್ತು ನಿಬಂಧನೆಗಳು

ಫ್ರ್ಯಾಂಚೈಸ್ ಮಾದರಿಯಲ್ಲಿ ಗ್ರಾಮಒನ್ ಕೇಂದ್ರವನ್ನು ಸ್ಥಾಪಿಸಲು ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾನು ಓದಿದ್ದೇನೆ ಮತ್ತು ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ನಾನು ಒಪ್ಪುತ್ತೇನೆ. ಎಂದು ನಿಬಂಧನೆಗೆ ಸಹಿ ಹಾಕಬೇಕು

Exit mobile version