ಕೊರಿಯನ್ ವೆಬ್ ಸೀರಿಸ್ ಮಾದರಿಯಲ್ಲಿ ಅಜ್ಜಿಯನ್ನು ಕೊಂದ ಮೊಮ್ಮಗ: ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ !

Mysore : ಕೊರಿಯನ್ (grandson killed his grandmother) ವೆಬ್ ಸೀರಿಸ್ ಮಾದರಿಯಲ್ಲಿ ಮೊಮ್ಮಗ ಅಜ್ಜಿಯನ್ನು ಕೊಂದು ಶವ ವಿಲೇವಾರಿ ಮಾಡಲು ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ

ಮೈಸೂರಿನಲ್ಲಿ ನಡೆದಿದೆ. ಇತ್ತೀಚೆಗೆ ವೆಬ್ ಸೀರಿಸ್ ಮಾದರಿಯಲ್ಲಿ ಅನೇಕ ಕೊಲೆ ಪ್ರಕರಣಗಳು ನಡೆದಿವೆ. ಇಂದಿನ ಯುವ ಜನಾಂಗ ಸೇರಿದಂತೆ ಮಕ್ಕಳೂ ಸಹ ವೆಬ್ ಸೀರಿಸ್ ಗೆ (Web series) ದಾಸರಗಿದ್ದಾರೆ.

ಇಂತಹ ಒಂದು ಭೀಕರ ಘಟನೆ ಇದೀಗ ರಾಜ್ಯದ ಮೈಸೂರು ಜಿಲ್ಲೆಯಲ್ಲಿ ನಡೆದು ಜನರನ್ನು (grandson killed his grandmother) ಬೆಚ್ಚಿ ಬೀಳಿಸಿದೆ.


ಅಜ್ಜಿ ನಾಪತ್ತೆಯಾಗಿದ್ದಾರೆ ಎಂದು ಮಿಸ್ಸಿಂಗ್ ಕಂಪ್ಲೇಂಟ್ (Complaint) ಕೊಟ್ಟಿದ್ದ ಸುಪ್ರೀತ್, ಅಜ್ಜಿಯ ಹೆಣವನ್ನುಪ್ಯಾಕ್ ಮಾಡಿ, ಕಾರಿನಲ್ಲಿಟ್ಟು ಇಡೀ ದಿನ ಮೈಸೂರು ನಗರದಲ್ಲಿ ಓಡಾಡಿದ್ದಾನೆ. ಆ ಬಳಿಕ ಶವವನ್ನು ವಿಲೇವಾರಿ

ಮಾಡಿ ಮುಗ್ಧನಂತೆ ವರ್ತಿಸಿದ್ದಾನೆ. ಮೈಸೂರು ಪೊಲೀಸರು ಈ ಹಿಂದೆ ಇಂಥಹುದೇ ಎರಡು ಪ್ರಕರಣಗಳನ್ನು ಭೇದಿಸಿದ್ರು. ಕೆಆ‌ರ್‌ಎಸ್ (KRS) ಹಿನ್ನೀರಿನಲ್ಲಿ ಮಹಿಳೆಯ ಶವವೊಂದು ಸುಟ್ಟ ಸ್ಥಿತಿಯಲ್ಲಿ ಸಿಕ್ಕಿತ್ತು ಈ ಪ್ರಕರಣವನ್ನು

ಭೇದಿಸಿದ್ದ ಮೈಸೂರು ಪೊಲೀಸರು ಮೊಮ್ಮಗನಿಂದ ಸ್ವಂತ ಅಜ್ಜಿಯೇ ಕೊಲೆಯಾಗಿರುವ ಅಂಶವನ್ನು ಪತ್ತೆ ಮಾಡಿದ್ರು.

ಇದನ್ನು ಓದಿ: ಇಂಧನ ಹೊಂದಾಣಿಕೆ ಶುಲ್ಕ ನೆಪ, ಡಬಲ್ ಆಯ್ತು ಕರೆಂಟ್ ಬಿಲ್ ; ಹಲವೆಡೆ ಪ್ರತಿಭಟನೆ


ಈ ಹಿಂದೆ ನಜರ್‌ಬಾದ್ (Nazarbad) ಠಾಣೆಯಲ್ಲಿ ಒಂದು ಪ್ರಕಾರಣವು ದಾಖಲಾಗಿತ್ತು ಆ ಪ್ರಕರಣದಲ್ಲಿ ಮೇ 28 ರಂದು ಮಹಿಳೆಯೊಬ್ಬರನ್ನು ಹೊಡೆದು ನಂತರ ಆಕೆಯನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ

ಮಾಡಿದ್ದಾರೆ ನಂತರ ಆ ಮಹಿಳೆಯ ಶವ ಗುರುತು ಸಿಗದಂತೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ನಜರ್‌ಬಾದ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕಾರಣದ ಜೊತೆಗೆ ಈ ಪ್ರಕರಣದಲ್ಲಿ ಕೂಡ ಸಾಮ್ಯತೆ ಕಂಡ

ಪೊಲೀಸರು ಆರೋಪಿ ಸುಪ್ರೀತ್‌ನನ್ನು(Supreet) ವಿಚಾರಣೆಗೆ ಒಳಪಡಿಸಿದ್ದಾರೆ.


ಗದರಿದ್ದಕ್ಕೆ ಕೊಲೆ: ಅಜ್ಜಿ ಸದಾ ಗದರಿಸುತ್ತಿದ್ದಳು ಇದೇ ಕೊಲೆಗೆ ಕಾರಣ ಎಂದು ಆರೋಪಿ ಸುಪ್ರೀತ್‌ ಹೇಳಿದ್ದಾರೆ. ಮೈಸೂರು (Mysore) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರನ್ನೊಳಗೊಂಡ

ತನಿಖಾ ತಂಡ ಪ್ರಕರಣವನ್ನು ಭೇದಿಸಿ ವಾರದೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.


ಇತ್ತೀಚಿನ ದಿನಗಳಲ್ಲಿ ಕ್ರೈಂಗೆ ಸಂಬಂಧಪಟ್ಟ ವೆಬ್‌ಸೀರೀಸ್‌ಗಳು (Web series) ಹೆಚ್ಚುತ್ತಿದ್ದು, ಇದರಿಂದ ಯುವಕರು ತುಂಬಾನೇ ಪ್ರಭಾವಿತರಾಗುತ್ತಿದ್ದಾರೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಕೊಲೆ,

ದರೋಡೆಯಂಥಾ ಹೀನ ಕೃತ್ಯಗಳಿಗೆ ಕೈ ಹಾಕುತ್ತಿದ್ದಾರೆ. ಇತ್ತೀಚೆಗೆ ವೆಬ್‌ ಸೀರೀಸ್‌ ಮಾದರಿಯ ಕೊಲೆಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಈ ಬಗ್ಗೆ ಸರ್ಕಾರ ಗಂಭೀರವಾದ ಚಿಂತನೆ ನಡೆಸಲೇ ಬೇಕು.

ರಶ್ಮಿತಾ ಅನೀಶ್

Exit mobile version