Coconut Fiber Uses : ತೆಂಗಿನ ಕಾಯಿ ನಾರನ್ನು ಕಸದ ತೊಟ್ಟಿಗೆ ಬಿಸಾಕುವ ಅಭ್ಯಾಸವಿದ್ದರೆ ಇನ್ನು ಮುಂದೆ ಈ ತಪ್ಪನ್ನು ಮಾಡಬೇಡಿ. ಬದಲಾಗಿ ಅವುಗಳನ್ನು ಕೂಡ ಬಳಸಿಕೊಳ್ಳಬಹುಡಗಿದ್ದು,

ಆದ್ದರಿಂದ ತೆಂಗಿನ ಕಾಯಿಯ ನಾರಿನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಕೂದಲನ್ನು ಕಪ್ಪಾಗಿಸುತ್ತದೆ:
ಮೊದಲಿಗೆ ಬಾಣಲೆಯಲ್ಲಿ ತೆಂಗಿನ ನಾರು ಹಾಕಿ ಕಪ್ಪಾಗುವವರೆಗೆ ಹುರಿಯಬೇಕು. ತಣ್ಣಗಾದ ನಂತರ ಪುಡಿ ಮಾಡಿ. ಅದಕ್ಕೆ ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು (Coconut Fiber Uses)
ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲ.

ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು:
ಪಾತ್ರೆಗಳನ್ನು ಸ್ವಚ್ಛಗೊಳಿಸಲು ಸ್ಕ್ರಬ್ಗಳನ್ನು ಬಳಸುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ತೆಂಗಿನ ಕಾಯಿಯ ನಾರಿನಿಂದ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದರು.ಇದು ಪರಿಸರಕ್ಕೂ ಒಳ್ಳೆಯದು.
ಇದಲ್ಲದೆ, ವೆಚ್ಚವೂ ಕಡಿಮೆಯಾಗುತ್ತದೆ. ತೆಂಗಿನ ನಾರು ಮತ್ತು ನಿಂಬೆ ರಸದಿಂದ (Lemon Juice) ಪಾತ್ರೆಗಳನ್ನು ಸ್ವಚ್ಛಗೊಳಿಸಿದರೆ ಯಾವುದೇ ಕೊಳಕು ವಾಸನೆಯಿಲ್ಲದೆ ಪಾತ್ರೆಗಳು ಹೊಳೆಯುತ್ತದೆ.
ಸಂಧಿವಾತ ನಿವಾರಣೆ:
ಸಂಧಿವಾತದಿಂದ ಬಳಲುತ್ತಿರುವವರಿಗೆ ತೆಂಗಿನ ನಾರು ಉತ್ತಮ ಔಷಧಿ ಎಂದು ಹೇಳಬಹುದಾಗಿದ್ದು, ತೆಂಗಿನ ನಾರಿನಿಂದ ತಯಾರಿಸಿದ ಚಹಾವನ್ನು ಕುಡಿಯಿರಿ. ತೆಂಗಿನ ಸಿಪ್ಪೆಯು ಉತ್ತಮ
ಉರಿಯೂತದ ಗುಣಗಳನ್ನು ಹೊಂದಿದೆ. ಇವು ಸಂಧಿವಾತ ನೋವನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ.
ಹಲ್ಲುಗಳು ಬಿಳಿಯಾಗುತ್ತವೆ:
ತೆಂಗಿನ ಕಾಯಿಯ ನಾರು, ಹಳದಿ ಹಲ್ಲುಗಳ ಸಮಸ್ಯೆಯನ್ನು ಹೊಂದಿರುವವರಿಗೂ ಉತ್ತಮ ಆಯ್ಕೆಯಾಗಿದ್ದು, ಒಂದು ಫ್ಯಾನ್ನಲ್ಲಿ ತೆಂಗಿನ ನಾರು ಹುರಿದುಕೊಳ್ಳಿ.
ನಂತರ ಚೆನ್ನಾಗಿ ಪುಡಿ ಮಾಡಿ. ಈ ಪುಡಿಯಿಂದ ಹಲ್ಲುಜ್ಜಿದರೆ ಹಲ್ಲು ಮುತ್ತಿನಂತೆ ಬೆಳ್ಳಗಾಗುವುದು ಮಾತ್ರವಲ್ಲದೆ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ (Bacteria) ನಾಶವಾಗುತ್ತದೆ.
ಅಷ್ಟೇ ಅಲ್ಲದೆ ಈ ಪುಡಿಗೆ ನಿಂಬೆ ರಸದ ಕೂಡ ಸೇರಿಸಬಹುದು.
ಇದನ್ನು ಓದಿ: ಮಿಸ್ ಯೂನಿವರ್ಸ್ 2023ರ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸುಂದರಿ ಯಾರು? ಇಲ್ಲಿದೆ ಮಾಹಿತಿ.
- ಭವ್ಯಶ್ರೀ ಆರ್ ಜೆ