ಗೃಹಲಕ್ಷ್ಮಿ ಯೋಜನೆಗೆ ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ: ಯಾವೆಲ್ಲ ದಾಖಲೆಗಳು ಬೇಕು? ಇಲ್ಲಿದೆ ಮಾಹಿತಿ

Bengaluru: ರಾಜ್ಯದಲ್ಲಿ ಕಾಂಗ್ರೆಸ್​​ ಸರ್ಕಾರದ 5 ಗ್ಯಾರಂಟಿಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ (Grilahakshmi scheme application submission) ಯೋಜನೆಗೆ ಇಂದನಿಂದ ಅರ್ಜಿ

ಸಲ್ಲಿಕೆಯೂ ಆರಂಭವಾಗಲಿದೆ. ಈಗಾಗಲೇ ಫ್ರೀ ಆಗಿ ಶಕ್ತಿ ಯೋಜನೆಯಡಿ (Shakti Scheme) ಬಸ್ ಪ್ರಯಾಣ ಮಾಡುತ್ತಿರೋ ಮಹಿಳೆಯರು ಇದೀಗ ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ

2 ಸಾವಿರ ರೂಪಾಯಿ ಪಡೆಯುವ (Grilahakshmi scheme application submission) ನಿರೀಕ್ಷೆಯಲ್ಲಿದ್ದಾರೆ.

ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಮಾಸಿಕ ಹಣ ನೀಡುವ ಗೃಹಲಕ್ಷ್ಮಿ ಯೋಜನೆ ಕೂಡ ಕಾಂಗ್ರೆಸ್ (Congress) ಗ್ಯಾರಂಟಿಗಳ ಪೈಕಿ ಒಂದು.ಮನೆಯ ಓರ್ವ ಯಜಮಾನಿಗೆ ಅಂದರೆ

ಅತ್ತೆ ಅಥವಾ ಸೊಸೆ ಇಬ್ಬರಲ್ಲಿ ಒಬ್ಬರಿಗೆ 2000 ರೂಪಾಯಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಈ ಗೃಹಲಕ್ಷ್ಮಿ ಯೋಜನೆಗೆ ಇಂದಿನಿಂದ ಅಂದರೆ ಜೂನ್ 27 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು,

ಮನೆ ಒಡತಿಯರ ಖಾತೆಗೆ ಆಗಸ್ಟ್ 17 ಅಥವಾ 18 ರಂದು 2 ಸಾವಿರ ರೂ ಹಣ ಜಮಾ ಮಾಡಲಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalakr) ತಿಳಿಸಿದ್ದಾರೆ.

ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಜನ : ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ ಸೈಬರ್‌ ಸೆಂಟರ್‌ಗಳು ಎಂಬ ಆರೋಪ!

ಸಚಿವ ಸಂಪುಟ ಸಭೆಯು (Cabinet Meeting) ಜೂನ್ 27ರಂದು ನಡೆಯಲಿದ್ದು, ಬಿಡುಗಡೆ ಆಗಿರುವ ಹೊಸ ಆಪ್ (APP) ಅನ್ನು ಮುಖ್ಯಮಂತ್ರಿಗಳಿಗೆ ತೋರಿಸಿ ವಿವರಿಸುತ್ತೇವೆ. ಅರ್ಜಿ ಸಲ್ಲಿಕೆಗೆ ನಂತರ

ಆ್ಯಪ್ ಬಿಡುಗಡೆ ಮಾಡಲಾಗುವುದು. ಫಲಾನುಭವಿಗಳ ಖಾತೆಗೆ ಆಗಸ್ಟ್ 17ರ ನಂತರ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಎಂಬುವುದು ಇರುವುದಿಲ್ಲ, ಈ ಅರ್ಜಿ ಸಲ್ಲಿಕೆಗೆ ಶುಲ್ಕವೂ ಸಹ ಇರುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಲೆಂದೇ ಈ ಆ್ಯಪ್ ರಚಿಸಲಾಗಿದ್ದು, ಇದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಸಲ್ಲಿಸುವುದು ಎಲ್ಲಿ?:

ಸರ್ಕಾರದ ಸೇವಾಸಿಂಧು ಪೋರ್ಟಲ್​​​ನಲ್ಲಿ (Seva Sindhu Portal) ಗೃಹಲಕ್ಷ್ಮೀ ಯೋಜನೆಗೆ ಆನ್ನೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಮತ್ತು ಭೌತಿಕವಾಗಿ ಗ್ರಾಮ ಒನ್

(Grama One), ಬೆಂಗಳೂರು ಒನ್ (Bengaluru One), ಕರ್ನಾಟಕ ಒನ್ (Karnataka One), ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಗಾಗಿ ಪ್ರತ್ಯೇಕ ಪೋರ್ಟ​ಲ್​​ ಸಿದ್ಧಪಡಿಸಲಾಗಿದೆ.

ಬೇಕಾಗುವ ದಾಖಲೆಗಳು:

ಆಧಾರ್​​ ಕಾರ್ಡ್​​
ರೇಷನ್​​ ಕಾರ್ಡ್​​
ಬ್ಯಾಂಕ್​​​ ಪಾಸ್ಬುಕ್​​
ಫೋಟೋ
ಯಾವುದಾದರೂ ಒಂದು ಗುರುತಿನ ಚೀಟಿ ( ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಸೇರಿ ಯಾವುದಾದರೂ ಒಂದು ಇರಲೇಬೇಕು)

ಮನೆಯೊಡತಿಯ ಬ್ಯಾಂಕ್ ಹಾಗೂ ಆಧಾರ್ ಕಾರ್ಡ್ (Adhar Card) ಅನ್ನುಈ ಯೋಜನೆಯ ಲಾಭ ಪಡೆಯಲು ಜೋಡಣೆ ಮಾಡಿರಲೇಬೇಕು. ಯೋಜನೆಯ ಲಾಭ ಪಡೆಯಬೇಕೆಂದು ತಪ್ಪು

ಮಾಹಿತಿ ನೀಡಿದರೆ ಸೂಕ್ತ ಕಾನೂನು ಕ್ರಮಗಳನ್ನು ಕೂಡ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ರಶ್ಮಿತಾ ಅನೀಶ್

Exit mobile version