Bengaluru : ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಮನೆ ಯಜಮಾನಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ (Grilahakshmi Yojana launched today) ಇಂದು ಚಾಲನೆ
ಸಿಗುತ್ತಿದ್ದು ಇದಕ್ಕೆ ನೋಂದಣಿ ಮಾಡಿಕೊಳ್ಳಬೇಕಾದರೆ ಪತಿಯ ಆಧಾರ್ ಕಾರ್ಡ್(Adhar Card) ಬೇಕಾಗುತ್ತದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar)
ಮಾತನಾಡಿ, ಸೇವಾ ಕೇಂದ್ರಗಳಲ್ಲಿಯೇ ಈ ಯೋಜನೆಯನ್ನು ನೋಂದಣಿ ಮಾಡಿಕೊಳ್ಳಬೇಕಾಗಿದೆ. ಇಲಾಖೆ ಎಲ್ಲ ರೀತಿಯ ಸಿದ್ಧತೆಗಳನ್ನು ಯೋಜನೆಯನ್ನು ಸಮರ್ಪಕವಾಗಿ ಅರ್ಹರಿಗೆ
ತಲುಪಿಸಲು ಮಾಡಿಕೊಂಡಿದೆ. ಅಧಿಕಾರಿಗಳು, ಸಿಬ್ಬಂದಿಗೆ ತಳ ಹಂತದಿಂದ ತರಬೇತಿ ಕೊಡಲಾಗಿದೆ ಎಂದರು.

ಗ್ರಾಮ ಒನ್(Grama One), ನಾಡಕಚೇರಿ, ಬೆಂಗಳೂರು ಒನ್(Bengaluru One) ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಮನೆ ಯಜಮಾನಿಗೆ 2 ಸಾವಿರ ರೂ.ನೀಡುವ ಗೃಹಲಕ್ಷ್ಮಿ ಯೋಜನೆಗೆ
ಅರ್ಜಿ ಸಲ್ಲಿಸಲು ಈ ಬಾರಿ ಪತಿಯ ಆಧಾರ್ ಕಾರ್ಡ್ ಕೂಡ ಬೇಕಾಗುತ್ತದೆ. ಮನೆ ಯಜಮಾನಿ ಆಧಾರ್ ಕಾರ್ಡ್ ಜತೆಗೆ ಮೊಬೈಲ್ (Mobile) ಕೊಂಡೊಯ್ದರೆ ಸಾಕು, ಬೇರೆ ಯಾವುದೇ ದಾಖಲೆ ಬೇಡ
ಎಂದು ಪ್ರತಿ ಯಜಮಾನಿಗೆ (Grilahakshmi Yojana launched today) ತಿಳಿಸಿದರು.
ಇದನ್ನೂ ಓದಿ : ವಿವಾದಿತ ಎಪಿಎಂಸಿ ತಿದ್ದುಪಡಿ ವಿಧೇಯಕ ಅಂಗೀಕಾರ : ಬಿಜೆಪಿ ಮತ್ತು ಜೆಡಿಎಸ್ ಸದಸ್ಯರಿಂದ ಧರಣಿ
ಬೇರೆ ಖಾತೆಗೆ ಹಣ ಹಾಕಿ ಎನ್ನುವವರು ಪಾಸ್‌ಬುಕ್ (Pass Book) ಜೆರಾಕ್ಸ್ (Xerox) ಕೊಡಬೇಕು. ಯೋಜನೆಯ ಉಚಿತ ಲಾಭ ಪಡೆದುಕೊಳ್ಳಲು ಸಹಾಯವಾಣಿ 8147500500 ಸಂಖ್ಯೆಗೆ ಕರೆ ಮಾಡಿ
ಪಡಿತರ ಚೀಟಿ ಸಂಖ್ಯೆಯನ್ನು ಹೇಳಿ ಕೂಡಲೇ ನಿಮ್ಮ ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಸಂದೇಶ ಹೋಗುತ್ತೆ. ಈ ಬಾರಿ ನೀವು ಯಾವುದೇ ಮಧ್ಯವರ್ತಿಗಳ ಮೊರೆಹೋಗುವ ಅಗತ್ಯವಿಲ್ಲ.

ಗೊಂದಲವಿದ್ದರೆ 1902 ನಂಬರ್‌ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾವುದೇ ರೀತಿಯ ಗೊಂದಲವಿಲ್ಲ. ಮನೆ ಯಜಮಾನಿ ಯಾರೆಂದು
ಕುಟುಂಬದವರೇ ನಿರ್ಧರಿಸಬೇಕು ಎಂದು ತಿಳಿಸಿದರು. ಗೃಹಲಕ್ಷ್ಮೀ ಯೋಜನೆಯಿಂದ 1.28 ಕೋಟಿ ಕುಟುಂಬಕ್ಕೆ ಲಾಭವಾಗುತ್ತದೆ, ಈ ಯೋಜನೆಗೆ ಬಜೆಟ್‌ನಲ್ಲಿ 17,500 ಕೋಟಿ ರೂ. ಮೀಸಲಿಡಲಾಗಿದೆ.
ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಗಸ್ಟ್‌ನಲ್ಲಿ ಹಣ ಜಮೆ ಮಾಡಲಾಗುತ್ತದೆ. ಮುಂದಿನ ವರ್ಷಕ್ಕೆ ಈ ಯೋಜನೆ 30 ಸಾವಿರ ಕೋಟಿಯನ್ನ ದಾಟಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ರಶ್ಮಿತಾ ಅನೀಶ್