Bengaluru : ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಖುಷಿಯಲ್ಲಿರುವಾಗಲೇ ಮಾಸಿಕ 2,000 ರೂ.ಅನ್ನು ಕುಟುಂಬದ (Gruha Lakshmi app prepared) ಯಜಮಾನಿಗೆ ನೀಡುವ
‘ಗೃಹ ಲಕ್ಷ್ಮಿ’ (Gruha Lakshmi) ಯೋಜನೆಯಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲು ಇದೀಗ ಸಿದ್ಧತೆಗಳು ಪೂರ್ಣಗೊಂಡಿದೆ. ಈಗಾಗಲೇ ಇದಕ್ಕೆ ಪ್ರತ್ಯೇಕ ಆ್ಯಪ್(APP) ಸಿದ್ಧವಾಗಿದೆ .
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ
200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ‘ಗೃಹ ಜ್ಯೋತಿ’ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಮತ್ತು ಒತ್ತಡ ಸೃಷ್ಟಿಸಿದ್ದರಿಂದ ಸೇವಾ ಸಿಂಧು (Seva Sindhu) ಸರ್ವರ್ ಓವರ್‌ಲೋಡ್
ಆಗಿ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ‘ಗೃಹ ಲಕ್ಷ್ಮಿ’ಗೆ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಇದಲ್ಲದೆ, ಅರ್ಜಿದಾರರು ಬಾಪೂಜಿ ಸೇವಾ ಕೇಂದ್ರ(Bapuji Seva Kendra),
ನಾಡಕಚೇರಿ ಮತ್ತು ತಾಲೂಕು ಕಚೇರಿಗಳಲ್ಲಿ ಸಹ ಅರ್ಜಿ (Gruha Lakshmi app prepared) ಸಲ್ಲಿಸಬಹುದು.

ಯೋಜನೆ ಆಗಸ್ಟ್‌ನಲ್ಲಿ ಜಾರಿ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ಆಗಸ್ಟ್‌ನಲ್ಲಿ (August) ಯೋಜನೆ ಜಾರಿ ಮಾಡಲಾಗುತ್ತಿದೆ. ಜೂ.16ರಿಂದ ಅರ್ಜಿ ಸ್ವೀಕಾರ ಆರಂಭವಾಗಬೇಕಿತ್ತಾದರೂ,
ಪ್ರತ್ಯೇಕ ಆ್ಯಪ್ ಸಿದ್ಧಪಡಿಸಬೇಕಿದ್ದ ಕಾರಣ ಮುಂದೂಡಲಾಗಿತ್ತು. ಈಗ ರೆಡಿಯಾಗಿರುವ ಆ್ಯಪ್ ಅನ್ನು ಸಿಎಂ ಸಿದ್ದರಾಮಯ್ಯ (Siddaramaiah) ಪರಿಶೀಲಿಸಿದ ಬಳಿಕ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದ
ನಂತರ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಆದ್ದರಿಂದ ಆಗಸ್ಟ್‌ನಲ್ಲಿ ಯೋಜನೆ ಜಾರಿ ಮಾಡಲಾಗುತ್ತಿದೆ.
ಇದನ್ನೂ ಓದಿ : ಗೃಹಜ್ಯೋತಿ ಯೋಜನೆಯಡಿ ಅರ್ಜಿ ಸಲ್ಲಿಸಬೇಕೇ?? ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್..
ಅರ್ಜಿಗಳ ಸ್ವೀಕಾರವನ್ನು ಜೂನ್ 16 ರಂದು ಪ್ರಾರಂಭಿಸಲು ಯೋಜಿಸಲಾಗಿದ್ದರೂ, ಪ್ರತ್ಯೇಕ ಆ್ಯಪ್ ಸಿದ್ಧಪಡಿಸಬೇಕಿದ್ದ ಕಾರಣ ಅರ್ಜಿ ಸಲ್ಲಿಕೆಯನ್ನು ಮುಂದೂಡಲಾಗಿತ್ತು. ಸಿಎಂ ಸಿದ್ದರಾಮಯ್ಯ
ಈಗ ರೆಡಿಯಾಗಿರುವ ಆ್ಯಪ್ ಅನ್ನು ಪರಿಶೀಲಿಸಿದ ಬಳಿಕ ಸಂಪುಟ ಸಭೆ ಯೋಜನೆಯ ರೂಪುರೇಷೆ ಬುಧವಾರದ ಅಂತಿಮಗೊಳಿಸಲಿದೆ.ಜೂ. 27ರಿಂದ ಬಹುತೇಕ ಅರ್ಜಿ ಸ್ವೀಕಾರ ಆರಂಭವಾಗಲಿದೆ.

ಡಿಸಿಎಂ ಅಧ್ಯಕ್ಷತೆಯಲ್ಲಿ ಸಿದ್ಧತಾ ಸಭೆ
ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯು ಯೋಜನೆಯ ರೂಪುರೇಷೆ ಅಂತಿಮಗೊಳಿಸಲಿದೆ. ಸರಿಸುಮಾರು ಜೂ. 27ರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
ವಿಧಾನಸೌಧದಲ್ಲಿ (Vidhana Saudha) ಡಿ.ಕೆ ಶಿವಕುಮಾರ್ (D.K Shiva Kumar) ಅವರ ಕಚೇರಿಯಲ್ಲಿ ಶುಕ್ರವಾರ ನಡೆದ ಯೋಜನೆಯ ಪೂರ್ವಸಿದ್ಧತಾ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು. ಅರ್ಜಿ ಸ್ವೀಕಾರಕ್ಕೆ ಬಾಪೂಜಿ ಕೇಂದ್ರಗಳು,ವಿಶೇಷ ಆ್ಯಪ್ ಪರಿಶೀಲನೆ ಜತೆಗೆ
ನಾಡಕಚೇರಿಗಳನ್ನೂ ಅಣಿಗೊಳಿಸುವ ಸಂಬಂಧ ಚರ್ಚಿಸಲಾಯಿತು.

ಪ್ರತ್ಯೇಕ ಆ್ಯಪ್ ತಯಾರಾಗಿದೆ ಎಂದ ಲಕ್ಷ್ಮೀ ಹೆಬ್ಬಾಳಕರ್
ಸಚಿವೆ ಲಕ್ಷ್ಮೀ ಹೆಬ್ಬಾಳಕರ್(Lakshmi Hebbalkar) ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಗೃಹ ಲಕ್ಷ್ಮಿ ಯೋಜನೆಗಾಗಿ ”ಪ್ರತ್ಯೇಕ ಆ್ಯಪ್ ತಯಾರಾಗಿದೆ ಅರ್ಜಿ ಸ್ವೀಕಾರ ಯಾವತ್ತು ಆರಂಭಿಸಬೇಕು
ಎಂಬ ಕುರಿತು ಚರ್ಚಿಸಲಾಯಿತು. ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಚಾಲನೆ ನೀಡಲಾಗುವುದು,” ಎಂದು ತಿಳಿಸಿದರು.
ಸಾವಿರ ಜನರಿಗೆ ಇಬ್ಬರು ಪ್ರಜಾಪ್ರತಿನಿಧಿ
ಒಂದೇ ಬಾರಿಗೆ ಲಕ್ಷಾಂತರ ಜನ ”ಗೃಹ ಜ್ಯೋತಿ ಯೋಜನೆಯಡಿ ಅರ್ಜಿ ಹಾಕಿದ್ದರಿಂದ ಒತ್ತಡ ಹೆಚ್ಚಿ ಸಮಸ್ಯೆಯಾಗಿತ್ತು. ಈಗ ಸರ್ವರ್(Server) ಸ್ಥಿರತೆ ಬಂದಿದೆ.ಅರ್ಜಿ ಸಲ್ಲಿಕೆಯು ಗೃಹ ಲಕ್ಷ್ಮಿ ಯೋಜನೆಗೂ
ಸುಸೂತ್ರವಾಗಿ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಸಾವಿರ ಜನರಿಗೆ ಇಬ್ಬರು ಪ್ರಜಾಪ್ರತಿನಿಧಿಯಂತೆ ಈ ಯೋಜನೆಯಡಿಆಯ್ಕೆ ಮಾಡುವ ಕುರಿತು ಚರ್ಚೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ
ಈ ಆ್ಯಪ್ ಅನ್ನು ತೋರಿಸಿದ ಬಳಿಕ ಯೋಜನೆಗೆ ಸಂಪುಟದಲ್ಲಿ ಚಾಲನೆ ನೀಡುವ ದಿನಾಂಕವನ್ನು ನಿರ್ಧರಿಸಲಾಗುವುದು,” ಎಂದರು.
ರಶ್ಮಿತಾ ಅನೀಶ್