ಟಾಟಾ ಐಪಿಎಲ್ 2022: ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ಸ್ ಪಟ್ಟ ಮುಡಿಗೇರಿಸಿಕೊಂಡ ಗುಜರಾತ್ ಟೈಟನ್ಸ್!

Gujarat Titans

ಹಾರ್ದಿಕ್ ಪಾಂಡ್ಯ(Hardik Pandya) ಅವರ ಆಲ್‌ರೌಂಡ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್(Gujarat Titans) ಮೊದಲ ಸೀಸನ್ ನಲ್ಲಿ IPL ಟ್ರೋಫಿ ಗೆದ್ದಿದೆ.


ಭಾನುವಾರ ಅಹಮದಾಬಾದ್‌ನ(Ahemadabad) ನರೇಂದ್ರ ಮೋದಿ(Narendra Modi Stadium) ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್(Rajasthan Royals) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಗೆಲುವಿನ ಸಂಭ್ರಮ ಮುಗಿಲುಮುಟ್ಟಿತು. ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 17 ರನ್‌ಗಳಿಗೆ 3 ವಿಕೆಟ್ ಪಡೆದು ಮತ್ತು ಬ್ಯಾಟಿಂಗ್ ವೇಳೆ 30 ಎಸೆತಗಳಲ್ಲಿ 34 ರನ್ ಗಳಿಸಿದರು. ಇಂಡಿಯನ್ ಪ್ರೀಮಿಯರ್ ಲೀಗ್‌ನ ತಮ್ಮ ಮೊದಲ ಆವೃತ್ತಿಯನ್ನು ಆಡಿದ ಗುಜರಾತ್ ಟೈಟಾನ್ಸ್ ಈ ಚೊಚ್ಚಲ ಆವೃತ್ತಿಯಲ್ಲೇ ಚೊಚ್ಚಲ ಚಾಂಪಿಯನ್ಸ್ ಪಟ್ಟ ಏರಿದ್ದಾರೆ.

ತಮ್ಮ 14 ಪಂದ್ಯಗಳಲ್ಲಿ 10 ಪಂದ್ಯವನ್ನು ಗೆದ್ದ ನಂತರ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು,ತದನಂತರ ಕ್ವಾಲಿಫೈಯರ್ 1 ರಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸಿ ನೇರ ಫೈನಲ್‌ ಪ್ರವೇಶಿಸಿತು. ಪ್ರಶಸ್ತಿ ಹಣಾಹಣಿಯಲ್ಲಿ, ಹಾರ್ದಿಕ್ ಪಾಂಡ್ಯ ಉತ್ತಮ ಬ್ಯಾಟಿಂಗ್ ಹಾಗೂ ನಾಯಕತ್ವದ ಮುನ್ನಡೆಯಿಂದ, ಗುಜರಾತ್ ಟೈಟಾನ್ಸ್ ಉತ್ತಮ ತಂಡವಾಗಿ ಸಾಗಿತು. ಗುಜರಾತ್ ಟೈಟನ್ಸ್ ಆರಂಭಿಕ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ಬೆನ್ನಲ್ಲೇ ನಾಯಕ ಹಾರ್ದಿಕ್ ಪಾಂಡ್ಯ ಬಲವಾಗಿ ನಿಂತು ಉತ್ತಮ ರನ್ ಕಲೆ ಹಾಕಿದರು.

ಹಾರ್ದಿಕ್ ಪಾಂಡ್ಯಗೆ ಸಾಥ್ ನೀಡಿದ ಶುಭ್‌ಮನ್ ಗಿಲ್ ಔಟಾಗದೆ 45 ರನ್ ಹೊಡೆಯುವ ಮುಖೇನ 63 ರನ್‌ಗಳ ಜೊತೆಯಾಟವನ್ನು ನಡೆಸಿ ಫೈನಲ್‌ನಲ್ಲಿ ತಮ್ಮ ತಂಡವನ್ನು ಗೆಲುವಿನತ್ತ ಸಾಗಿಸಿ, ಚಾಂಪಿಯನ್ ಪಟ್ಟವನ್ನು ಧರಿಸಿದ್ದಾರೆ. ಆರೆಂಜ್ ಕ್ಯಾಪ್ ಪಡೆದ ಜಾಸ್ ಬಟ್ಲರ್ ತಮ್ಮ ತಂಡಕ್ಕೆ ಉತ್ತಮ ರನ್ ನೀಡಲು ವಿಫಲವಾಗಿದ್ದು, ರಾಜಸ್ಥಾನ ತಂಡಕ್ಕೆ ದೊಡ್ಡ ಹೊಡೆತ ನೀಡಿದಂತಾಯಿತು.

ಜಾಸ್ ಬಟ್ಲರ್ ಪೆವಿಲಿಯನ್ ಹೋಗುತ್ತಿದ್ದಂತೆ ಮಿಕ್ಕ ಬ್ಯಾಟ್ಸ್‌ಮನ್‌ಗಳು ಕೂಡ ವಿಕೆಟ್ ಓಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಗುಜರಾತ್ ತಂಡಕ್ಕೆ ಗರಿಷ್ಠ ರನ್ ಗುರಿ ನೀಡಲು ತಂಡ ವಿಫಲವಾಯಿತು.

Exit mobile version