ತಂದೆಯನ್ನು ಕಳೆದುಕೊಂಡ 4 ಮಕ್ಕಳನ್ನು ದತ್ತು ಪಡೆದ ಪೊಲೀಸರು

Gujarat

ಗುಜರಾತ್‌ : ವಿಷಪೂರಿತ ನಕಲಿ ಮದ್ಯ(Alcohal) ಕುಡಿದು ತಂದೆ ಸಾವನ್ನಪ್ಪಿದಾಗ ಅನಾಥರಾದ(Orphans) ನಾಲ್ವರು ಮಕ್ಕಳ ಹೊಣೆಯನ್ನು ಗುಜರಾತ್‌ನ(Gujarat) ಬೋಟಾಡ್ ಪೊಲೀಸರು ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಗುಜರಾತ್ನ ಬೊಟಾಡ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ 40ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಆಸ್ಪತ್ರೆಗೆ(Hospital) ದಾಖಲಾಗಿದ್ದಾರೆ. ಈ ಘಟನೆಯಿಂದ ಹಲವಾರು ಕುಟುಂಬಗಳು ಬೀದಿ ಪಾಲಾಗಿದ್ದು, ಅನೇಕ ಮಕ್ಕಳು ಅನಾಥರಾಗಿದ್ದಾರೆ.

ಹೀಗೆ ಅನಾಥರಾದ ನಾಲ್ವರು ಮಕ್ಕಳ ಹೊಣೆಯನ್ನು ಸ್ಥಳೀಯ ಪೊಲೀಸರು ವಹಿಸಿಕೊಂಡಿದ್ದಾರೆ. ಹೌದು, 40 ವರ್ಷದ ಕನುಭಾಯಿ ಸೆಖಾಲಿಯಾ ಬರ್ನಾಲಾ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದು, ಅವರ ನಾಲ್ವರು ಮಕ್ಕಳು ಅನಾಥರಾಗಿದ್ದಾರೆ. ಮಾನವೀಯ ನೆಲೆಗಟ್ಟಿನಲ್ಲಿ ಪೊಲೀಸರು ಗ್ರಾಮದ ಜನರೊಂದಿಗೆ ಮಾತನಾಡಿ ಎಲ್ಲಾ ನಾಲ್ವರು ಅನಾಥ ಮಕ್ಕಳನ್ನು ದತ್ತು ಸ್ವೀಕರಿಸಿದರು ಮತ್ತು ಅವರ ಓದು ಸೇರಿದಂತೆ ನಾಲ್ವರು ಮಕ್ಕಳ ಜವಾಬ್ದಾರಿಯನ್ನು ಬೋಟಡ್ ಪೋಲೀಸರು ವಹಿಸಿಕೊಂಡಿದ್ದು, ನಾಲ್ವರು ಮಕ್ಕಳ ಶಿಕ್ಷಣ ವೆಚ್ಚವನ್ನು ಬೋಟಡ್ ಎಸ್ಪಿ(SP) ಭರಿಸಲಿದ್ದಾರೆ.

ಇನ್ನು ಎಸ್ಪಿ ಕರಂರಾಜ್ ವಘೇಲಾ ಮಾತನಾಡಿ, ಅವರ ತಂದೆ ಈಗಿಲ್ಲ ಮತ್ತು ಕುಟುಂಬವು ತುಂಬಾ ಬಡವಾಗಿದೆ. ನಾವು ಎಲ್ಲಾ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಮಕ್ಕಳ ಮುಂದಿನ ಬದುಕಿಗೆ ಬೇಕಾದ ಎಲ್ಲ ನೆರವನ್ನು ನಮ್ಮ ಇಲಾಖೆ ನೀಡುತ್ತದೆ. ಈ ಕಾರ್ಯವು ಮುಂದಿನ ದಿನಗಳಲ್ಲಿಯೂ ಮುಂದುವರೆಯುತ್ತದೆ. ನಾವು ಅಧಿಕಾರಿಗಳು ವರ್ಗಾವಣೆಯಾದರು, ಮಕ್ಕಳಿಗೆ ಬೇಕಾದ ಎಲ್ಲ ನೆರವನ್ನು ಒದಗಿಸುವಂತೆ ಯೋಜನೆ ರೂಪಿಸಿದ್ದೇವೆ.

ಹೀಗಾಗಿ ಮಕ್ಕಳಿಗೆ ಒಂದು ಸೂಕ್ತ ನೆಲೆಯನ್ನು ಒದಗಿಸುವವರೆಗೂ ನಾವು ಅವರೊಂದಿಗೆ ನಿಲ್ಲುತ್ತೇವೆ. ಮಕ್ಕಳಿಗೆ ಬೇಕಾದ ಎಲ್ಲ ನೆರವನ್ನು ನಾವು ನೀಡುತ್ತೇವೆ ಎಂದು ತಿಳಿಸಿದ್ದಾರೆ.

Exit mobile version