Visit Channel

ಗ್ಯಾನವಾಪಿ ಮಸೀದಿಯೊಳಗೆ ಕಂಡುಬರುವ ರಚನೆಯು ಗುಪ್ತರ ಕಾಲದ ಶಿವಲಿಂಗವನ್ನು ಹೋಲುತ್ತದೆ : ಇತಿಹಾಸಕಾರರು!

gyanvapi mosque

ಗ್ಯಾನವಾಪಿ ಮಸೀದಿಯೊಳಗೆ(Gyanvapi Mosque) ಕಂಡುಬರುವ ಶಿವಲಿಂಗದಂತಹ ರಚನೆಯು ವಾರಣಾಸಿ(Varanasi) ಬಳಿ ಕಂಡುಬರುವ ಗುಪ್ತರ ಕಾಲದ(Gupta Era) ಕಟ್ಟಡದೊಂದಿಗೆ ಗಮನಾರ್ಹ ಹೋಲಿಕೆಯನ್ನು ಹೊಂದಿದೆ ಎಂದು ಇತಿಹಾಸಕಾರ(History Teller) ಶ್ರೀ ಭಗವಾನ್ ಸಿಂಗ್(Sri Bhagwan Singh) ಹೇಳಿದ್ದಾರೆ.

Varanasi

ಸಿಂಗ್ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಮತ್ತು ವಿಗ್ರಹ ಪೂಜೆ ಮತ್ತು ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಪರಿಣತಿ ಹೊಂದಿರುವ ಪ್ರಮುಖ ಇತಿಹಾಸಕಾರರು. ಸ್ಥಳೀಯ ಸುದ್ದಿ ವಾಹಿನಿಗೆ ಮಾಹಿತಿ ನೀಡಿದ ಅವರು, ಸಂಗ್ರಹಾಲಯದಲ್ಲಿ ಸಂರಕ್ಷಿಸಲ್ಪಟ್ಟಿರುವ ಶಿವಲಿಂಗವನ್ನು ವಾರಣಾಸಿ ಬಳಿಯ ಸೈದ್‌ಪುರ ಪ್ರದೇಶದಿಂದ ವರ್ಷಗಳ ಹಿಂದೆ ಉತ್ಖನನ ಮಾಡಲಾಗಿದೆ. ಸೈದ್‌ಪುರ ಮತ್ತು ಹತ್ತಿರದ ಪ್ರದೇಶಗಳು ಗುಪ್ತ ಸಾಮ್ರಾಜ್ಯದ ರಾಜಧಾನಿಗಳಲ್ಲಿ ಒಂದಾಗಿದ್ದವು. ಗ್ಯಾನವಾಪಿ ಮಸೀದಿಯ ಒಳಗೆ ಕಂಡುಬರುವ ರಚನೆಯು ಸೈದ್‌ಪುರ ಶಿವಲಿಂಗವನ್ನು ಹೋಲುತ್ತದೆ.

ಶಿವಲಿಂಗವನ್ನು ಅದರ ವಸ್ತು ಮತ್ತು ನಿರ್ಮಾಣದ ಪ್ರಕಾರದಿಂದ ಗುರುತಿಸಲಾಗುತ್ತದೆ. ಒಂದು ರಚನೆಯು ಶಿವಲಿಂಗವೇ ಮತ್ತು ಅದು ಇದ್ದಲ್ಲಿ ಅದು ಯಾವ ಯುಗಕ್ಕೆ ಸೇರಿದೆ ಎಂಬುದನ್ನು ತಜ್ಞರು ಸುಲಭವಾಗಿ ಹೇಳಬಹುದು ಎಂದು ಸಿಂಗ್ ಹೇಳಿದರು. ಮೊಟ್ಟಮೊದಲ ಶಿವಲಿಂಗಗಳು ಹರಪ್ಪಾ ಮತ್ತು ಮೊಹಂಜೋದಾರೋ ಸ್ಥಳಗಳಲ್ಲಿ ಕಂಡುಬಂದಿವೆ. ಆರ್ಯರ ಆಕ್ರಮಣದ ಸಿದ್ಧಾಂತಕ್ಕೆ ವಿರುದ್ಧವಾಗಿ, ಇತಿಹಾಸಕಾರರು ಹೇಳುವಂತೆ ಹರಪ್ಪ ನಾಗರಿಕತೆಯ ಜನರು ‘ಶೈವಿಸಂ’ನ ಕಟ್ಟಾ ಶಿಷ್ಯರಾಗಿದ್ದರು,

gyanvapi mosque

ಏಕೆಂದರೆ ಹರಪ್ಪ ಮತ್ತು ಮೊಹಂಜೋದಾರೋ ಪುರಾತತ್ತ್ವ ಶಾಸ್ತ್ರದ ಸ್ಥಳಗಳ ಉತ್ಖನನದ ಸಮಯದಲ್ಲಿ ಮೊದಲ ಶಿವಲಿಂಗಗಳು ಕಂಡುಬಂದಿವೆ. ಸ್ಥಳಗಳ ಉತ್ಖನನದಲ್ಲಿ ತೊಡಗಿರುವ ಜಾನ್ ಮಾರ್ಷಲ್ ಅವರು ತಮ್ಮ ಪುಸ್ತಕವಾದ ಮೋಹನ್ಜೋದಾರೋ-ದಿ ಸಿಂಧೂ ನಾಗರಿಕತೆಯಲ್ಲಿ ಕಂಡುಬರುವ ಶಿವಲಿಂಗಗಳ ಪ್ರಕಾರಗಳನ್ನು ಉಲ್ಲೇಖಿಸಿದ್ದಾರೆ. ಹರಪ್ಪಾ ಮತ್ತು ಮೊಹಂಜೋದಾರೋ ಸ್ಥಳಗಳ ಉತ್ಖನನದ ಸಮಯದಲ್ಲಿ ಭಾರತೀಯ ಉಪಖಂಡದಲ್ಲಿ ಅತ್ಯಂತ ಹಳೆಯ ಶಿವಲಿಂಗವು ಕಂಡುಬಂದಿದೆ. ಇದು ಆಧುನಿಕ ಶಿವಲಿಂಗಗಳಿಗೆ ಹೋಲುತ್ತದೆ ಎಂದು ಇತಿಹಾಸಕಾರರು ಸ್ಪಷ್ಟಪಡಿಸಿದ್ದಾರೆ.

ಹರಪ್ಪಾ ಉತ್ಖನನದ ಸಮಯದಲ್ಲಿ ಶಿವನ ರೂಪವಾದ ಪಶುಪತಿನಾಥನ ಪ್ರತಿಮೆಯೂ ಕಂಡುಬಂದಿದೆ. ಇದರರ್ಥ ಹರಪ್ಪನ್ ನಾಗರಿಕತೆಯು ಶೈವ ನಾಗರಿಕತೆಯಾಗಿತ್ತು. ಶಿವಲಿಂಗದ ಬಗ್ಗೆ ಸಾಹಿತ್ಯದಲ್ಲಿ ಅತ್ಯಂತ ಮುಂಚಿನ ಉಲ್ಲೇಖವನ್ನು ವೇದಕಾಲದಲ್ಲಿ ಕಾಣಬಹುದು ಎಂದು ಸಿಂಗ್ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.