ಲೋಕಾಯುಕ್ತಗೆ ಬಾಗಿಲು ಹಾಕಿಸಿದ್ದು ಸಿದ್ದರಾಮಯ್ಯ – ಹೆಚ್. ವಿಶ್ವನಾಥ್

ಬೆಂಗಳುರು ಡಿ 17 : ಸಿದ್ದರಾಮಯ್ಯನವರ ಅವಧಿಯಲ್ಲಿ ಲೋಕಾಯುಕ್ತ ಇದ್ದಿದ್ರೆ ಅವರು ಜೈಲಿಗೆ ಹೋಗಬೇಕಾಗಿತ್ತು ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಸಿದ್ಧರಾಮಯ್ಯ ಜೈಲಿಗೆ ಹೋಗೋದನ್ನ ತಪ್ಪಿಸಿಕೊಳ್ಳಲು ಲೋಕಾಯುಕ್ತಗೆ ಬಾಗಿಲ ಹಾಕಲಾಯ್ತು. ಪವರ್‌ಪುಲ್ ಆಗಿದ್ದ ಲೋಕಾಯುಕ್ತವನ್ನು ಬಂದ್ ಮಾಡಿಸಿದ್ದು ಸಿದ್ದರಾಮಯ್ಯ. ಇಲ್ಲವಾದರೆ ಯಡಿಯೂರಪ್ಪ ರೀತಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು ಎಂದು ಹೇಳಿದರು.

ಅಧಿವೇಶನಕ್ಕೆ ಹೋಗಲು ಆರೋಗ್ಯದ ಕಾರಣ ಸಾಧ್ಯವಾಗಲಿಲ್ಲ. ಎರಡು ತಿಂಗಳು ವಿಶ್ರಾಂತಿಗೆ ಸೂಚಿಸಿದ್ದಾರೆ. ಈ ಬಗ್ಗೆ ಸ್ಪೀಕರ್ ಬಳಿ ಅನುಮತಿ ಪಡೆದಿದ್ದೇನೆ. ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಅನುಭವಿಗಳು. ಸದನದಲ್ಲಿ ಮಾತನಾಡುವುದನ್ನು ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಇದು ಸಮಂಜಸವಲ್ಲ. 40% ಕಮಿಷನ್ ಬಗ್ಗೆ ತನಿಖೆಯಾಗಬೇಕು. ಅನ್ನೋದನ್ನು ಸದನದ ಒಳಗೆ ಕೇಳಬೇಕು. ಅದಕ್ಕೆ ಪೂರಕ ಸಾಕ್ಷಿ ದಾಖಲೆಯೊಂದಿಗೆ ಕೇಳಬೇಕು. ನೀವು ಮಾತ್ರ ಸತ್ಯವಂತರು‌ ಬಿಜೆಪಿ ಪರ್ಸೆಂಟೇಜ್ ಅವರು ಅಂತಾರೆ.ನಾನು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್ ನಾಯಕರು ಬಗ್ಗೆ ಮಾತನಾಡುತ್ತೇನೆ. ನಿಮ್ಮ ಸರ್ಕಾರ ಇದ್ದಾಗ ಡಿಕೆಶಿ 7 ಸಾವಿರ ಕೋಟಿ ಸೋಲಾರ್ ಟೆಂಡರ್ 3 ನಿಮಿಷದಲ್ಲಿ ಮುಗಿದಿದೆ. ಟೆಂಡರ್ ಭಾಗ್ಯ ಸಿದ್ದರಾಮಯ್ಯ ಕಾಲದಲ್ಲಿ ಆಗಿದ್ದು. ಸತ್ಯವಂತ ಸಿದ್ದರಾಮಯ್ಯ ಲೋಕಾಯುಕ್ತ ಏಕೆ ಸ್ಕ್ಯ್ರಾಪ್ ಮಾಡಿದಿರಿ.? ಎಂದು ಹೆಚ್.ವಿಶ್ವನಾಥ್ ಪ್ರಶ್ನಿಸಿದರು.

ಲೋಕಾಯುಕ್ತ ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೇ ಜೈಲಿಗೆ ಹಾಕಿತ್ತು. ಅರ್ಕಾವತಿ ರೀ ಡೂ ಹೊಸ ಹೆಸರು ನೀಡಿದಿರಿ. ಲ್ಯಾಂಡ್ ಡೀ ನೋಟಿಫಿಕೇಶನ್‌ ಗೆ ಹೊಸ ಹೆಸರು. 40% ಜೊತೆಗೆ ರೀ ಡೂ ಸಹ ತನಿಖೆಯಾಗಲಿ.ಆಗ ಯಾರು ಸತ್ಯವಂತರು ಅಂತಾ ಗೊತ್ತಾಗುತ್ತೇ. ಯಾರು ಇದನ್ನು ಮರೆತಿಲ್ಲ ಸಿದ್ದರಾಮಯ್ಯ ಅವರೇ ಎಂದು ಹೆಚ್.ವಿಶ್ವನಾಥ್  ಕುಟುಕಿದರು.

Exit mobile version