`ಹಲಾಲ್ ಕಟ್’ ನಿಷೇಧದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವೆ : ಸಿಎಂ ಬೊಮ್ಮಾಯಿ!

halal

ರಾಜ್ಯಾದ್ಯಂತ ಹಲಾಲ್ ಕಟ್(Halal Cut) ನಿಷೇಧ(Ban) ಎಂಬ ನಾಮಫಲಕವನ್ನು ಇಟ್ಟು ಪ್ರತಿಭಟನೆ ಮಾಡಲಾಗುತ್ತಿದೆ. ಹಲಾಲ್ ಮಾಂಸ ಖರೀದಿಯನ್ನು ರಾಜ್ಯದಲ್ಲಿ ಬಹಿಷ್ಕರಿಸಬೇಕು ಎಂಬ ಆಂದೋಲನ ನಡೆಯುತ್ತಿದೆ. ಈ ಕುರಿತು ಒಂದೆಡೆ ಹಲಾಲ್ ಕಟ್ ನಿಷೇಧವಾಗಲೇಬೇಕು ಎಂಬ ಕೂಗು ಕೇಳಿಬಂದರೆ, ಮತ್ತೊಂದೆಡೆ ಇಷ್ಟು ದಿನ ತಿಂದು ಈಗ ನಿಷೇಧ ಅಂದ್ರೆ ಯಾವ ಲೆಕ್ಕಾಚಾರ ಎಂಬ ವಾದ-ವಿವಾದಗಳು ಕೇಳಿಬಂದಿವೆ.

ಕಳೆದ ಒಂದೆರೆಡು ದಿನದಿಂದ ಹಲಾಲ್ ಕಟ್ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಗಳನ್ನು ಕೊಟ್ಟು ಜನರಲ್ಲಿ ಗೊಂದಲಗಳನ್ನು ಹುಟ್ಟುಹಾಕುತ್ತಿದ್ದಾರೆ. ಇನ್ನು ಕೆಲವರು ಈ ರೀತಿ ಮಾತನಾಡಿ ಜನರ ಮಧ್ಯೆ ಕೋಮು ಗಲಭೆ ಸೃಷ್ಟಿ ಮಾಡಲು ಈ ವಿಷಯ ಪ್ರಮುಖ ಕಾರಣವಾಗಲಿದೆ. ರಾಜಕೀಯ ನಾಯಕರು ತಮ್ಮ ನಾಲಿಗೆಯನ್ನು ಹರಿಬಿಡುವಾಗ ಎಚ್ಚರವಹಿಸುವುದು ಸೂಕ್ತ ಎಂಬ ಮಾತುಗಳು ಹರಿದಾಡುತ್ತಿದೆ.

ಇಂದು ಗುರುವಾರ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಅವರು ಹಲಾಲ್ ಕಟ್ ನಿಷೇಧ ಯಾಕೆ ಮಾಡಬೇಕು, ಇಷ್ಟು ದಿನ ತಿಂದು ಈಗ ಹೊಸದಾಗಿ ಏನು ನಿಯಮ? ಇವೆಲ್ಲಾ ಪಿತೂರಿಗಳು ಅಷ್ಟೇ! ಭಜರಂಗದಳದವರ ಕರಪತ್ರ ಹಂಚಿಕೆ ವಿರೋಧಿಸುವಂತದ್ದು, ಅದರ ಅವಶ್ಯಕತೆ ಇಲ್ಲ. ಇದನ್ನು ನಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಇಷ್ಟೆಲ್ಲಾ ಅಹಿತಕರ ಘಟನೆಗಳು ನಡೆಯುತ್ತಿದ್ದರು ಕೂಡ ಸಿಎಂ ಅವರಿಗೆ ಕಾಣಿಸುತ್ತಿಲ್ವಾ? ಅಥವಾ ಅದನ್ನು ಪ್ರಶ್ನಿಸುವ ಗಂಡಸ್ತನ ಇಲ್ವಾ ಎಂದು ಗುಡುಗಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ದೊಡ್ಡ ವಿವಾದವಾಗಿರುವ ಹಲಾಲ್ ಕಟ್ ಬಗ್ಗೆ ಸಿಎಂ ಮಾತನಾಡಿದ್ದು, ಹಲಾಲ್ ಮಾಂಸ ಖರೀದಿ, ಬಳಕೆಯನ್ನು ನಿಷೇಧಿಸುವ ಬಗ್ಗೆ ರಾಜ್ಯಾದ್ಯಂತ ಚರ್ಚೆ ಉದ್ಭವಗೊಂಡಿದೆ. ನಮ್ಮ ಸರ್ಕಾರ ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ ಸೂಕ್ತ ನಿರ್ಧಾರವನ್ನು ನೀಡಲಿದ್ದೇವೆ ಎಂದು ಹೇಳಿದ್ದಾರೆ.

Exit mobile version