ಹಲವು ಅನುಮಾನಗಳಿಗೆ ಎಡೆಮಾಡಿದ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಕೇಸ್

ಬೆಂಗಳೂರು, ಡಿ. 02: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಪ್ರಕರಣದ ತನಿಖೆ ಮುಂದುವರೆದಂತೆ ಕ್ಷಣ ಕ್ಷಣಕ್ಕೂ ಬಿಗ್ ಟ್ವಿಸ್ಟ್ ಸಿಗುತ್ತಾ ಇದೆ.ಬೆಂಗಳೂರಿನ ಬೆಳ್ಳಂದೂರು ಬಳಿ ಪತ್ತೆಯಾದ ಕಾರಿನ ಯಾವುದೇ ಡೋರ್ ಗಳ ಗ್ಲಾಸ್ ಒಡೆದಿಲ್ಲ. ಜೊತೆಗೆ ಯುವತಿಯೊಬ್ಬಳ ವೇಲ್ ( ದುಪ್ಪಟ್ಟ) ಪತ್ತೆ ಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

ಮಾಜಿ ಸಚಿವ ವರ್ತೂರು ಪ್ರಕಾಶ್ ರನ್ನ  ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಲಾಗಿದೆ. ಇದೇ ತಿಂಗಳ ೨೫ ರಂದು ಕೋಲಾರದ ಬೆಗ್ಲೀಹಳ್ಳಿಯಲ್ಲಿ ೮ ಜನರ ತಂಡ ವರ್ತೂರು ಪ್ರಕಾಶ್ ರನ್ನ ಕಿಡ್ನ್ಯಾಪ್ ಮಾಡಿದ್ದಾರೆ. ೩೦ ಕೋಟಿಗೆ ಬೇಡಿಕೆ ಇಟ್ಟು ಮೂರು ದಿನಗಳ ಕಾಲ ಕೂಡಿಹಾಕಿ ಮಾಜಿ ಸಚಿವನ ಮೇಲೆ ಹಲ್ಲೆ ಮಾಡಿದ್ದಾರಂತೆ  ದುಷ್ಕರ್ಮಿಗಳು. ವರ್ತೂರು ಪ್ರಕಾಶ್ ಕೈ ಮತ್ತು ಕಾಲುಗಳಿಗೆ ಹಲ್ಲೆ ಮಾಡಲಾಗಿದೆ. ವರ್ತೂರು ಪ್ರಕಾಶ್ ಕಾರು ಚಾಲಕ ಸುನೀಲ್ ಗು ಸಹ ಕೂಡಿಟ್ಟುಕೊಂಡು ಹಲ್ಲೆ ಮಾಡಿದ್ದಾರಂತೆ. ೩೦ ಕೋಟಿ ಕೊಡದಿದ್ರೆ ಮುಗಿಸೋದಾಗಿ ಥಳಿಸಿದ್ದಾರೆ ಎನ್ನಲಾಗಿದೆ. ಮೂರು ದಿನಗಳ ನಂತ್ರ ವರ್ತೂರು ಪ್ರಕಾಶ್ ರನ್ನ ಹೊಸಕೋಟೆಯಲ್ಲಿ ಬಿಟ್ಟು ಹೋಗಿದ್ದಾರೆ. ಇನ್ನು ವರ್ತೂರು ಪ್ರಕಾಶ್ ಗೆ ಸೇರಿದ್ದ ಕಾರ್ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಾಲನಾಯಕನಹಳ್ಳಿ ಸ್ಮಶಾನದ ಬಳಿ ಬಿಟ್ಟು ಹೋಗಿದ್ದಾರೆ. ಕಾರ್ ನಲ್ಲಿ ಖಾರದ ಪುಡಿ ಇನ್ನು ಹಾಗೆಯೇ ಇದೆ.. ಕಾರು ಚಾಲಕ ಸುನೀಲ್ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದಿದ್ದಾರೆ ಹೀಗಂತ ವರ್ತೂರು ಪ್ರಕಾಶ್ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.

ಇದೀಗ ಆ ಕಾರಿನಲ್ಲಿ ಯುವತಿಯ ದುಪ್ಪಟ್ಟ ಮಾದರಿಯ ಬಟ್ಟೆ ಸಿಕ್ಕಿರುವುದು ಇನ್ನಷ್ಟು ಅನುಮಾನ ಗಳನ್ನು ಹೆಚ್ಚಿಸಿದೆ. ಈ ಕಾರಣಕ್ಕಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಅನುಮಾನಗಳು ತನಿಖಾ ಅಧಿಕಾರಿಗಳನ್ನು ಕಾಡುತ್ತಿವೆ.  ಆದರೆ ವರ್ತೂರು ಪ್ರಕಾಶ್ ಹೇಳಿರುವ ಪ್ರಕಾರ, ಕಾರನ್ನು ಅಡ್ಡಗಟ್ಟಿ ಕಾರಿನ ಗಾಜು ಒಡೆದು, ಹಲ್ಲೆ ನಡೆಸಿ, ತನಗೆ ಮಂಕಿ ಕ್ಯಾಪ್ ಹಾಕಿ ಕಿಡ್ನ್ಯಾಪ್ ಮಾಡಿದ್ದಾರೆ ಎಂದಿದ್ದರು.

ಸದ್ಯ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ೩೬೪ , ೩೬೪ಎ , ೩೪೧, ೩೪೨ , ೩೦೭, ೩೨೪, ರ ಅಡಿ ಎಫ್ಐಆರ್ ದಾಖಲು ಮಾಡಲಾಗಿದೆ.. ದೂರಿನ ಅಯ್ಯಾ ಸತ್ಯತೆಯನ್ನು ಪರಿಶೀಲನೆಯನ್ನು ನಡೆಸಲಾಗ್ತಿದೆ.. ಒಬ್ಬ ಮಾಜಿ ಸಚಿವರನ್ನ ಕಿಡ್ನ್ಯಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು ಹಲ್ಲೆ ನಡೆಸಿರೊ ಬಗ್ಗೆ ತನಿಖೆ ನಡೆಯಬೇಕಾಗಿದೆ.

Exit mobile version