ಹರಿಯಾಣ ಗಲಭೆ : 250 ಅಕ್ರಮ ವಲಸಿಗರ ಗುಡಿಸಲನ್ನು ಬುಲ್ಡೋಜರ್‌ನಿಂದ ನೆಲಸಮ, 250 ಜನ ವಶಕ್ಕೆ

Chandigarh: ಹರಿಯಾಣದ (Haryana) ಮೆವಾತ್ನಲ್ಲಿ ವಿಹೆಚ್ಪಿ- ಬಜರಂಗದಳದ ಶೋಭಾಯಾತ್ರೆಯ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಇಡೀ ರಾಜ್ಯಾದ್ಯಂತ (Haryana demolished Illegal huts)

ಹೊತ್ತಿಕೊಂಡಿರುವ ಕೋಮುಸಂಘರ್ಷಕ್ಕೆ ಅಪಾರ ಪ್ರಮಾಣದ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟವಾಗಿದೆ. ಕೋಮುಗಲಭೆಗೆ ಕಾರಣರಾದವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಿರುವ ಹರಿಯಾಣ ಸರ್ಕಾರ,

ಕೋಮುಸಂಘರ್ಷದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸುಮಾರು 250ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ. ಅವರು ವಾಸಿಸುತ್ತಿದ್ದ ಗುಡಿಸಲುಗಳನ್ನು

ರಾಹುಲ್ ಗಾಂಧಿ ಅನರ್ಹತೆ ವಾಪಾಸ್ ಲೋಕಸಭೆಯ ಎಂ.ಪಿಯಾಗಿ ಮುಂದುವರಿಕೆ

ಬುಲ್ಡೋಜರ್ನಿಂದ (Haryana demolished Illegal huts) ತೆರೆವುಗೊಳಿಸಲಾಗಿದೆ.

ಇನ್ನೂ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರದಂತೆ ಹರಿಯಾಣದ ಬಿಜೆಪಿ ಸರ್ಕಾರವೂ ಕೂಡಾ ಆರೋಪಿಗಳಿಗೆ ಬುಲ್ಡೋಜರ್ ಶಾಕ್ ನೀಡಿದೆ. ಹರಿಯಾಣದ ನೂಹ್ನಿಂದ ಸುಮಾರು

20 ಕಿಮೀ ದೂರದಲ್ಲಿರುವ ತೌರುದಲ್ಲಿ ವಾಸವಿದ್ದ ಅಕ್ರಮ ಬಾಂಗ್ಲಾ ವಲಸಿಗರ ಗುಡಿಸಲುಗಳನ್ನ ಬುಲ್ಡೋಜರ್ (Bulldozer) ಬಳಸಿ ತೆರೆವುಗೊಳಿಸುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ

ಹರಿದಾಡುತ್ತಿವೆ. ಈ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಅವರು, ಸರ್ಕಾರಿ ಜಮೀನನ್ನು ಅತಿಕ್ರಮಿಸಿದ್ದಕ್ಕಾಗಿ ಈ ಕ್ರಮ

ಕೈಗೊಳ್ಳಲಾಗಿದೆ. ಬಾಂಗ್ಲಾದೇಶದಿಂದ (Bangladesh) ಅಕ್ರಮವಾಗಿ ಭಾರತಕ್ಕೆ ಬಂದು ಮೊದಲು ಅಸ್ಸಾಂನಲ್ಲಿ ವಾಸವಿದ್ದು, ಅವರೀಗ ಹರಿಯಾಣದ ನೂಹ್ ಜಿಲ್ಲೆಯ ತೌರು ಪಟ್ಟಣದ ಹರಿಯಾಣ ನಗರಾಭಿವೃದ್ದಿ

ಪ್ರಾಧಿಕಾರಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಸುಮಾರು 250ಕ್ಕೂ ಅಧಿಕ ಅಕ್ರಮ ಗುಡಿಸಲುಗಳನ್ನ ನಿರ್ಮಿಸಿಕೊಂಡಿದ್ದು ಸರ್ಕಾರದ ಗಮನಕ್ಕೆ ಬಂದಿದ್ದು, ಹೀಗಾಗಿ ಅವರನ್ನು

ಅಲ್ಲಿಂದ ತೆರೆವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಹರಿಯಾಣದಲ್ಲಿ ಆರಂಭವಾಗಿರುವ ಕೋಮುಸಂಘರ್ಷ ಪಂಜಾಬ್ನ ಕೆಲ ಜಿಲ್ಲೆಗಳಿಗೆ ವ್ಯಾಪಿಸಿದ್ದು, ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತಾ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಸದ್ಯದ ಮಟ್ಟಿಗೆ ಪರಿಸ್ಥಿತಿ

ನಿಯಂತ್ರಣದಲ್ಲಿದೆ ಎಂದು ಹರಿಯಾಣ ಸರ್ಕಾರ ತಿಳಿಸಿದೆ. ಹರಿಯಾಣದಲ್ಲಿ ನಡೆದ ಈ ಕೋಮುಸಂಘರ್ಷಕ್ಕೆ ಸಂಬಂಧಿಸಿದಂತೆ ಇದುವರೆಗೂ 41 ಕೇಸ್ಗಳು ದಾಖಲಾಗಿದ್ದು, 176 ಮಂದಿಯನ್ನ ಬಂಧಿಸಲಾಗಿದೆ.

ಹರಿಯಾಣದ ನೌಹ್ ಜಿಲ್ಲೆಯಲ್ಲಿ ಗ್ರಾಮಗಳಲ್ಲಿರುವ ಪುರುಷರು ಪೊಲೀಸರು ಬಂಧಿಸುತ್ತಾರೆ ಎಂಬ ಭೀತಿಯಿಂದ ಊರು ತೊರೆದಿದ್ದಾರೆ. ಅನೇಕರು ಕಾಡುಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

Exit mobile version