ತನ್ನಷ್ಟಕ್ಕೆ ಗಾಳಿಯಲ್ಲಿ ಮೇಲೇರುವ ಬಂಡೆಯಿರುವ ವಿಶಿಷ್ಟ ಸ್ಥಳ ಹಜರತ್ ಕಮರ್ ಅಲಿ ದರ್ವೇಶ್ ದರ್ಗಾ!

Pune : ನಮ್ಮ ದೇಶ ಭಾರತವು(India) ಹಲವಾರು ನಿಗೂಢ ಹಾಗೂ ರಹಸ್ಯಗಳನ್ನು ಹೊಂದಿರುವ ತಾಣವೆಂದೇ ಜನಪ್ರಿಯವಾಗಿದೆ.

ಈ ಕುರಿತು ಇತಿಹಾಸವನ್ನು (History) ಕೆದುಕುತ್ತಾ ಹೋದಂತೆ, ಈ ಮಾತು ನಿಜ ಎಂದೇ ಅನಿಸುತ್ತದೆ. ಏಕೆಂದರೆ ಭಾರತವು ಅದೆಷ್ಟೋ ಕಲ್ಪನೆಗೂ ನಿಲುಕದ ವಿಚಿತ್ರ (Weird) ಸಂಗತಿಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ.

ಇದನ್ನೂ ಓದಿ : https://vijayatimes.com/bjp-slams-dks-siddaramaiah/

ಇಲ್ಲಿರುವ ಕೆಲವೊಂದು ಪ್ರದೇಶಗಳು ನಿಗೂಢವಾದ ರಹಸ್ಯಗಳನ್ನು ತನ್ನಲ್ಲಿ ಒಳಗೊಂಡಿದ್ದು, ವಿಜ್ಞಾನದ ತರ್ಕಕ್ಕೂ ನಿಲುಕದೇ, ಐತಿಹಾಸಿಕ (Hazrat Kamar Ali Darvesh Dargah Pune) ಮಹತ್ವಗಳಿಗೆ ಹೆಸರುವಾಸಿಯಾಗಿದೆ.

ಗಿರಿಶಿಖರಗಳಿಂದ ಹಿಡಿದು ಪ್ರಾಣಿಗಳಿಗೆ, ಮೋಟಾರ್ ವಾಹನಗಳಿಗೆ ಕೆಲವೊಂದು ಸ್ಥಳಗಳಲ್ಲಿ ಪೂಜೆ ನಡೆಸಲಾಗುತ್ತದೆ.

ಹೀಗೆ ಕೆಲವೊಂದು ನಂಬಲು ಅಸಾಧ್ಯವಾಗಿರುವ ಆಚರಣೆಗಳನ್ನು ಈ ಪ್ರದೇಶಗಳು ಹೊಂದಿದೆ. ಇಂತಹ ವಿಶಿಷ್ಟ ಸ್ಥಳಗಳಲ್ಲಿ ಒಂದು ದರ್ವೇಶ್ ದೇವಾಲಯ.

ಹೌದು, ಹಜರತ್ ಕಮರ್ ಅಲಿ ದರ್ವೇಶ್ ದೇವಾಲಯವು ಸಾಮಾನ್ಯ ದೇವಾಲಯವಲ್ಲ. ಈ ದೇವಾಲಯವನ್ನು ಭಾರತದಲ್ಲಿನ ನಿಗೂಢ ಸ್ಥಳಗಳಲ್ಲಿ ಒಂದು ಎಂದು ಪಟ್ಟಿ ಮಾಡಲಾಗಿದೆ.

ಈ ದೇವಸ್ಥಾನವು, 70 ಕೆ.ಜಿ ತೂಕದ ಒಂದು ವಿಶೇಷ ಬಂಡೆಗೆ ಹೆಸರುವಾಸಿಯಾಗಿದೆ, ಈ ಬಂಡೆ ತನ್ನಷ್ಟಕ್ಕೆ ಗಾಳಿಯಲ್ಲಿ ಮೇಲೇರುತ್ತದಂತೆ! ಇದರ ಹಿನ್ನೆಲೆ ಹೀಗಿದೆ ನೋಡಿ.

ಮಹಾರಾಷ್ಟ್ರದ ಪುಣೆಯಲ್ಲಿ ಹಜರತ್ ಕಮರ್ ಅಲಿ ದರ್ವೇಶ್ ಅವರ ಪ್ರಸಿದ್ಧ ದರ್ಗಾ ಇದೆ.

https://youtu.be/NENBfl6PJqQ ಬ್ಯಾಂಕ್ ವಿರುದ್ಧ ರೈತರ ಪ್ರತಿಭಟನೆ.

ಈ ದರ್ಗಾವನ್ನು ಸಂದರ್ಶಿಸಲು ಸಾವಿರಾರು ಭಕ್ತರು ತಮ್ಮ ಬೇಡಿಕೆಯೊಂದಿಗೆ ಅಲ್ಲಿಗೆ ಹೋಗುತ್ತಾರೆ. ಇಲ್ಲಿ ಒಂದು ವರ್ಚಸ್ವಿ ಕಲ್ಲು ಇದೆ ಎಂದು ನಂಬಲಾಗಿದೆ, ಇದನ್ನು ಒಂದೇ ಸಮಯದಲ್ಲಿ ಕೇವಲ ಹನ್ನೊಂದು ಜನರು ಮಾತ್ರ ಎತ್ತಬಹುದು.

ಹನ್ನೊಂದು ಅಥವಾ ಅದಕ್ಕಿಂತ ಹೆಚ್ಚು ಅಥವಾ ಅದಕ್ಕಿಂತ ಕಡಿಮೆ ಜನರು ಇದನ್ನು ಮಾಡಲು ಪ್ರಯತ್ನಿಸಿದರೆ, ಆ ಕಲ್ಲನ್ನು ಎತ್ತಲು ಸಾಧ್ಯವಿಲ್ಲ.

11 ಜನರು ಅದನ್ನು ಎತ್ತುವ ಪ್ರಯತ್ನ ಮಾಡಿದಾಗ, ಅದರ ತೂಕ ಅವರಿಗೆ ಅರಿವಿಗೆ ಬರುವುದಿಲ್ಲ ಎಂಬುದು ಆಶ್ಚರ್ಯಕರ ಸಂಗತಿ.

ಈ ಕಲ್ಲನ್ನು ಎತ್ತುವಾಗ, ಭಕ್ತರು ಒಂದೇ ಧ್ವನಿಯಲ್ಲಿ ಹಜರತ್ ಕಮರ್ ಅಲಿ ದರ್ವೇಶ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಪ್ರತಿದಿನ ನೂರಾರು ಜನರು ಈ ಬಂಡೆಯನ್ನು ಪ್ರಯತ್ನಿಸುತ್ತಾರೆ.


ಈ ಬಂಡೆಯನ್ನು ಎತ್ತಲು ಒಂದು ವಿಶಿಷ್ಟ ವಿಧಾನವಿದೆ. ಮೊದಲು ಬಂಡೆಯ ಸುತ್ತಲೂ ಹನ್ನೊಂದು ಜನ ನಿಲ್ಲಬೇಕು ಹಾಗೂ ತಮ್ಮ ನಾಲ್ಕನೆಯ ಬೆರಳಿನಿಂದ ಬಂಡೆಯನ್ನು ಸ್ಪರ್ಶಿಸುತ್ತಾ ಅದಕ್ಕೆ

ಶಾಪವಿತ್ತ ಸಂತನ ಹೆಸರನ್ನು ಕೂಗಬೇಕು. ಆಗ ಕಲ್ಲು (Hazrat Kamar Ali Darvesh Dargah Pune) ತನ್ನಷ್ಟಕ್ಕೆ ಗಾಳಿಯಲ್ಲಿ ಮೇಲೇಳಲು ಪ್ರಾರಂಭಗೊಳ್ಳುತ್ತದೆ.

ಇದನ್ನೂ ಓದಿ : https://vijayatimes.com/pitbull-deadly-attack-in-punjab/

ಈ ವಿಧಾನ ಅನುಸರಿಸದೇ ನೂರು ಜನ ಪ್ರಯತ್ನಿಸಿದರೂ ಈ ಕಲ್ಲನ್ನು ಅಲುಗಾಡಿಸಲೂ ಸಾಧ್ಯವಿಲ್ಲ! ಇಂತಹ ಅಚ್ಚರಿಗಳನ್ನು ವಿಜ್ಞಾನಿಗಳಿಂದಲೂ ಬಗೆಹರಿಸಲು ಸಾಧ್ಯವಾಗಿಲ್ಲ.

ವಿಜ್ಞಾನವೂ ಪರಿಹರಿಸದ ರಹಸ್ಯಗಳನ್ನು ಕೇವಲ ಜನರ ಭಾವನೆಗಳ ಆಧಾರದ ಮೇಲೆ ವ್ಯಾಖ್ಯಾನಿಸಬಹುದು ಅಷ್ಟೇ!
Exit mobile version