ಇನ್ನೇಷ್ಟು ಜನ ಸಾಯಬೇಕು: ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ ಹೈಕೋರ್ಟ್

Bengaluru: ನಿಮ್ಮ ಬಳಿ ಹಣವಿಲ್ಲವೇ..? ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲು ಇಷ್ಟು (HC Against Kar Govt) ವಿಳಂಬ ಯಾಕೆ ಆಗುತ್ತಿದೆ. ಸರಕಾರವೇ ಹೇಳಿರುವಂತೆ

ಈಗಾಗಲೇ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಎಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ (High court) ತೀವ್ರ ತರಾಟೆಗೆ ಕೊಂಡಿದೆ.

ಗುತ್ತಿಗೆದಾರರಿಗೆ ಹಣ ಪಾವತಿಸುವಂತೆ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಪಾಲಿಸದ ಬಿಬಿಎಂಪಿ (BBMP) ವಿರುದ್ಧ ‘ಮೆಸರ್ಸ್ ನಿಕ್ಷೇಪ್ ಇನ್ಫ್ರಾ ಪ್ರಾಜೆಕ್ಟ್’ ಹೂಡಿರುವ ನ್ಯಾಯಾಂಗ ನಿಂದನೆ

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿಬಿ ವರ್ಲೆ (PB Worley) ಹಾಗೂ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಹೈಕೋರ್ಟ್ನ ದ್ವಿಸದಸ್ಯ ಪೀಠ ರಾಜ್ಯ ಸರಕಾರಕ್ಕೆ ಛೀಮಾರಿ ಹಾಕಿತು.

”ನಿಮ್ಮ ಬಳಿ ಗುತ್ತಿಗೆದಾರರಿಗೆ ಪಾವತಿ ಮಾಡಲು ಹಣ ಇಲ್ಲವೇ? ಹಣ ಪಾವತಿಯಲ್ಲೂ ಹಿರಿತನ ಎಂದರೆ ಏನು? ನಿಮ್ಮ ಈ ಬಗ್ಗೆ ನಿಮ್ಮ ಬಳಿ ಅಧಿಕೃತ ಮಾರ್ಗಸೂಚಿ ಇದೆಯೇ? ಎಂದು ನ್ಯಾಯಮೂರ್ತಿ

ಕೃಷ್ಣ ದೀಕ್ಷಿತ್ (Krishna Dikshith) ಅವರು ಸರ್ಕಾರದ ಪರ ವಕೀಲರನ್ನು ಖಾರವಾಗಿ ಪ್ರಶ್ನಿಸಿದರು. ನಿಮ್ಮ ಬಳಿ ಇರುವ ದಾಖಲೆಗಳನ್ನೇ ಒಮ್ಮೆ ನೋಡಿ. ನೀವೇ ಹೇಳಿಕೊಂಡಿರುವಂತೆ ಇಬ್ಬರು

ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರರನ್ನು (HC Against Kar Govt) ಮೂಲೆಗುಂಪು ಮಾಡಬೇಡಿ.

ಕಾಮಗಾರಿಗಳಿಗೆ ಟೆಂಡರ್ (Tender) ಕರೆದು ಆ ಕಾಮಗಾರಿಗಳನ್ನು ಪೂರ್ಣಗೊಳಿಸಿದ ನಂತರ ಹಣ ಪಾವತಿಗೆ ಷರತ್ತುಗಳನ್ನು ವಿಧಿಸುವುದು, ಅನಗತ್ಯವಾಗಿ ಹಣ ಪಾವತಿ ಮಾಡಲು ವಿಳಂಬ

ಮಾಡುವುದು ಎಷ್ಟರ ಮಟ್ಟಿಗೆ ಸರಿ. ನೀವು ಹಣ ಪಾವತಿ ಮಾಡಲು ಅನುಸರಿಸುತ್ತಿರುವ ನೀತಿಯೇ ನಮಗೆ ಅರ್ಥವಾಗುತ್ತಿಲ್ಲ. ರಾಜ್ಯ ಸರಕಾರ ಸ್ವಲ್ಪ ವಿವೇಚನೆಯಿಂದ ಕಾರ್ಯನಿರ್ವಹಿಸಬೇಕು

ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.

ಇನ್ನು ‘ಮೆಸರ್ಸ್ ನಿಕ್ಷೇಪ್ ಇನ್ಫ್ರಾ ಪ್ರಾಜೆಕ್ಟ್’ ಹೂಡಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ನಗರಾಭಿವೃದ್ಧಿ ಕಾರ್ಯದರ್ಶಿ ಡಾ ಅಜಯ್ ನಾಗಭೂಷಣ್ (Dr. Ajay Nagabhushan),

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ (BBMP) ಮುಖ್ಯ ಲೆಕ್ಕಾಧಿಕಾರಿ ವಾಣಿ, ಬಿಬಿಎಂಪಿ ಮಲ್ಲೇಶ್ವರಂ ವಿಭಾಗದ ಕಾರ್ಯಧಿನಿಧಿರ್ವಾಧಿಹಕ ಎಂಜಿನಿಯರ್

ಜೈಶಂಕರ್ (Engineer Jaishankar) ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಇದನ್ನು ಓದಿ: ಆಸ್ತಿ ವಿವರ ಸಲ್ಲಿಸದ ರಾಜ್ಯದ ಶಾಸಕರ ಹೆಸರು ಪ್ರಕಟಿಸಿದ ಲೋಕಾಯುಕ್ತ: ಗಡುವು ಮುಗಿದರೂ ವಿವರ ಸಲ್ಲಿಸಿಲ್ಲ.

Exit mobile version