ಕಲ್ಲಡ್ಕ ಪ್ರಭಾಕರ್ಭಟ್ ಹೇಳಿಕೆ: ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶನ

Bengaluru: ಮುಸ್ಲಿಂ (Muslim) ಸಮುದಾಯದ ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪಿಸಿ ಆರ್ಎಸ್ಎಸ್ (RSS) ಮುಖಂಡ ಕಲ್ಲಡ್ಕ ಪ್ರಭಾಕರ್ಭಟ್ ವಿರುದ್ದ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹತ್ವದ ಸೂಚನೆಯನ್ನು ಹೈಕೋರ್ಟ್ (Highcourt) ನೀಡಿದೆ.

ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ಭಟ್ (Kalladka Prabhakar Bhat) ಅವರು ವಿರುದ್ದ ವಿವಿದೆಡೆ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಶ್ ರೈ (Rajesh Rai) ಅವರಿದ್ದ ರಜಾ ಕಾಲದ ಏಕಸದಸ್ಯ ಪೀಠ, ನ್ಯಾಯಾಲಯ ನಡೆಸುವ ಮುಂದಿನ ವಿಚಾರಣೆವರೆಗೂ, ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸರಕಾರಕ್ಕೆ ಸೂಚನೆ ನೀಡಿತು. ಹೈಕೋರ್ಟ್ ನೀಡಿರುವ ಈ ಆದೇಶದಿಂದಾಗಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಬಂಧನ ಭೀತಿಯಿಂದ ಪಾರಾಗಿದ್ದಾರೆ.

ಪ್ರಚೋದನಕಾರಿ ಹೇಳಿಕೆ ನೀಡಿಲ್ಲ: ವಾಸ್ತವ ಅಂಶದ ಮಾತನಾಡಿದ್ದಾರೆ
ಕಲ್ಲಡ್ಕ ಪ್ರಭಾಕರ್ಭಟ್ ಅವರ ಪರ ವಾದಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್ (Arun Shyam), ಕಲ್ಲಡ್ಕ ಪ್ರಭಾಕರ್ಭಟ್ ಅವರ ವಿರುದ್ದ ಪ್ರಕರಣ ದಾಖಲಿಸಿರುವುದಕ್ಕೆ ರಾಜಕೀಯ ಪ್ರೇರಿತ ಕಾರಣವಿದೆ. ಅವರು ಯಾವುದೇ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ವಾಸ್ತವ ಅಂಶವನ್ನು ಬಿಂಬಿಸುವ ಅಭಿವ್ಯಕ್ತಿ ಅಂಶಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಎಂದು ವಾದಿಸಿದ್ದಾರೆ.

ಪ್ರಕರಣದ ಹಿನ್ನಲೆ : ಮಂಡ್ಯ ಜಿಲ್ಲೆಶ್ರೀರಂಗಪಟ್ಟಣದಲ್ಲಿ (Sri Rangapattana) ನಡೆದ ಹನುಮ ಶೋಭಾ ಯಾತ್ರೆಯಲ್ಲಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು, ಈ ಹಿಂದೆ ತಲಾಖ್ ತಲಾಖ್ ಎಂದು ಹೇಳಿ ಮುಸ್ಲಿಂ ಗಂಡಸರು ಹೆಂಡತಿಯರನ್ನು ಬಿಟ್ಟು ಕೈತೊಳೆದುಕೊಳ್ಳುತ್ತಿದ್ದರು. ಗಂಡ ಯಾವಾಗ ತಲಾಕ್ ಹೇಳುತ್ಥಾನೆ ಎಂದು ಮುಸ್ಲಿಂ ಹೆಣ್ಣುಮಕ್ಕಳು ಭಯಭೀತರಾಗಿದ್ದರು. ತಲಾಕ್ ಇದ್ದಾಗ ದಿನಕ್ಕೊಬ್ಬ ಗಂಡ ಬದಲಾಗುತ್ತಿದ್ದ.

ಆದರೆ ತಲಾಕ್ ಅನ್ನು ರದ್ದುಗೊಳಿಸಿ ಮುಸ್ಲಿಂ (Muslim) ಹೆಣ್ಣುಮಕ್ಕಳಿಗೆ ಕಾಯಂ ಗಂಡನನ್ನು ಕೊಟ್ಟಿದ್ದೇ ಮೋದಿ ಸರಕಾರ. ತಲಾಖ್ ರದ್ದು ಮಾಡಿ ನಿಮಗೆ ಗೌರವ ತಂದುಕೊಟ್ಟಿದ್ದೇ ಹಿಂದೂ ಧರ್ಮ ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಯನ್ನು ಖಂಡಿಸಿ, ಕೆಲ ಮುಸ್ಲಿಂ ಮಹಿಳೆಯರು ನೀಡಿದ ದೂರಿನ ಹಿನ್ನಲೆ ಐಪಿಸಿ ಸೆಕ್ಷನ್ 354, 294, 509, 153, 295, 295 ಎ, 298ರಡಿ ಪೊಲೀಸರು ಎಫ್ಐಆರ್ (FIR) ದಾಖಲಿಸಿದ್ದರು.

Exit mobile version