ಧಾರ್ಮಿಕ ಪ್ರಾರ್ಥನೆಗೆ ವಸತಿ ಗೃಹ ಬಳಕೆಗೆ ನಿರ್ಬಂಧವಿಲ್ಲ: ಕರ್ನಾಟಕ ಹೈಕೋರ್ಟ್

Bengaluru: ಧಾರ್ಮಿಕ ಪ್ರಾರ್ಥನೆಗೆ ವಸತಿ ಗೃಹ ಬಳಕೆಗೆ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಹೀಗಾಗಿ ಅನುಮತಿ ಪಡೆದ ವಸತಿ ಗೃಹಗಳನ್ನು (HC – use residential house prayers) ಧಾರ್ಮಿಕ

ಪ್ರಾರ್ಥನೆಗೆ ಬಳಕೆ ಮಾಡಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ (HC – use residential house prayers) ಹೈಕೋರ್ಟ್ ಹೇಳಿದೆ.

ಬೆಂಗಳೂರಿನ ಹೆಚ್ಬಿಆರ್ ಲೇಔಟ್ನಲ್ಲಿ ವಸತಿ ಆಸ್ತಿಯನ್ನು ಪ್ರಾರ್ಥನೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿ ಕೆಲವು ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ,

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ವಿಭಾಗೀಯ ಪೀಠ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

ಚಂದ್ರಯಾನ-3 ಯಶಸ್ಸಿಗೆ ಹೊಟ್ಟೆಕಿಚ್ಚು : ನಮ್ಮ 2.3 ಬಿಲಿಯನ್ ಪೌಂಡ್ ಹಿಂತಿರುಗಿಸಿ ಎಂದ ಬ್ರಿಟನ್ ಪತ್ರಕರ್ತ, ಎಲ್ಲೆಡೆ ಆಕ್ರೋಶ

ಪ್ರಕರಣದ ಹಿನ್ನಲೆ :
ಎಚ್ಬಿಆರ್ ಲೇಔಟ್ನ ನಿವಾಸಿಗಳಾದ ಸ್ಯಾಮ್ ಪಿ ಫಿಲಿಪ್, ಕೃಷ್ಣ ಎಸ್ಕೆ, ಜಗಯೀಸನ್ ಟಿಪಿ ಮತ್ತು ಇತರ ಐವರು, ವಸತಿ ಪ್ರದೇಶದಲ್ಲಿ ಧಾರ್ಮಿಕ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಇದರಿಂದ ನಮಗೆ

ತೊಂದರೆಯುಂಟಾಗುತ್ತಿದೆ ಎಂದು ಆರೋಪಿಸಿ, ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಮತ್ತು ಮಸೀದಿ ಇ-ಅಶ್ರಫಿತ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ನಂತರ ಅವರ ಅರ್ಜಿಯನ್ನು

PIL ಗೆ ಪರಿವರ್ತಿಸಲಾಯಿತು.

ಜನವಸತಿ ಪ್ರದೇಶವನ್ನು ಪ್ರಾರ್ಥನಾ ಮಂದಿರವಾಗಿ ಬಳಸುತ್ತಿರುವುದು ನೆರೆಹೊರೆಯವರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ವಾದಿಸಿದರು. ಈ ಹಿಂದೆಯೂ ಒಮ್ಮೆ ಬಿಬಿಎಂಪಿಯ ಅನುಮತಿ

ಪಡೆಯದೆ ಮಸೀದಿ ಟ್ರಸ್ಟ್ ಕಟ್ಟಡ ನಿರ್ಮಿಸಿದ್ದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆಗ ಬಿಬಿಎಂಪಿಯಿಂದ ಅಗತ್ಯ ಮಂಜೂರಾತಿ ಪಡೆದ ನಂತರವಷ್ಟೇ ಮದರಸಾ ಕಟ್ಟಡ ನಿರ್ಮಿಸಬಹುದು ಎಂದು

ಕೋರ್ಟ್ ಸೂಚಿಸಿತ್ತು. ನಂತರ ಬಿಬಿಎಂಪಿಯಿಂದ ಅನುಮತಿ ಪಡೆದು, ಕಟ್ಟಡವನ್ನು ನಿರ್ಮಿಸಿ, ಇದೀಗ ಧಾರ್ಮಿಕ ಪ್ರಾರ್ಥನೆ ನಡೆಸಲಾಗುತ್ತಿತ್ತು. ಹೀಗಾಗಿ ಸ್ಥಳೀಯರು ಮತ್ತೇ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಾರ್ಥನೆಗಳನ್ನು ನಡೆಸುವುದರಿಂದ ಅಪಾಯವಿದೆ ಎಂಬ ವಾದವನ್ನು ತಿರಸ್ಕರಿಸಿತು. ವಸತಿ ಗೃಹಗಳನ್ನು ಅನುಮತಿ ಪಡೆದುಕೊಂಡು, ಧಾರ್ಮಿಕ ಪ್ರಾರ್ಥನೆಗೆ

ಬಳಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅದು ಕಾನೂನಿನ ಚೌಕಟ್ಟಿನಲ್ಲಿದ್ದರೆ, ಅದಕ್ಕೆ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ

ಎಂಜಿಎಸ್ ಕಮಲ್ ಅವರ ವಿಭಾಗೀಯ ಪೀಠ ತೀರ್ಪು ನೀಡಿದೆ.

Exit mobile version