ಸಂಸತ್ತಿನಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ ; ಪ್ರಧಾನಿ ಮೋದಿಗೆ ಪತ್ರ ಬರೆದ ಹೆಚ್.ಡಿ.ದೇವೇಗೌಡರು

Karnataka : ದೆಹಲಿಯ ಸಂಸತ್ ಭವನದ ಆವರಣದಲ್ಲಿ ಕೆಂಪೇಗೌಡರ(Kempegowda) ಕಂಚಿನ ಪ್ರತಿಮೆ ಸ್ಥಾಪಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ(HD Devegowda letter to PM) ಅವರು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಪತ್ರ ಬರೆಯುವ ಮೂಲಕ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು(Bengaluru) ನಗರವನ್ನು ಸ್ಥಾಪಿಸಿದ ನಾಡಪ್ರಭು ಕೆಂಪೇಗೌಡರನ್ನು, ಭಾರತದ ತಾಂತ್ರಿಕ ಪ್ರಗತಿಯ ಸಂಕೇತವಾಗಿ ಕಾಣಬಹುದು ಎಂದು ದೇವೇಗೌಡರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಹೆಚ್.ಡಿ.ದೇವೇಗೌಡ (HD Devegowda letter to PM)ಅವರು, ನಮ್ಮ ಸಂಸತ್ತಿನ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು ಪರಿಗಣಿಸಲು ಇಲ್ಲಿ ವಿನಂತಿಸಲಾಗಿದೆ.

ಈ ವಿನಂತಿಯ ಬಗ್ಗೆ ನಿಮ್ಮ ಅವಿಭಜಿತ ಗಮನವನ್ನು ನೀಡುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ.

ನಿಮಗೆ ತಿಳಿದಿರುವಂತೆ ಕೆಂಪೇಗೌಡರು 16ನೇ ಶತಮಾನದಲ್ಲಿ ಬೆಂಗಳೂರು ನಗರವನ್ನು ಸ್ಥಾಪಿಸಿದರು ಮತ್ತು ಅವರು ಶತಮಾನಗಳ ಹಿಂದೆ ಶ್ರಮಿಸಿದ್ದ ಕಾರಣದಿಂದ ಇಂದು ಜಾಗತಿಕವಾಗಿ ಪ್ರಸಿದ್ಧವಾದ ಮಹಾನಗರವಾಗಿ ಅರಳಿವೆ,

ಅದನ್ನು ನಾವೆಲ್ಲರೂ ಸಂಭ್ರಮಿಸಿ ಹೆಮ್ಮೆಪಡುತ್ತೇವೆ.

https://youtu.be/Hha3KHrTSyk ಬ್ಯಾಡರಹಳ್ಳಿ – ವಿಶ್ವೇಶ್ವರಯ್ಯ ಲೇಔಟ್ ಅವಶ್ಯಕತೆ ಇಲ್ಲದ 150 ಅಡಿ ಲಿಂಕ್ ರೋಡ್.

ಬೆಂಗಳೂರಿನಷ್ಟು ತಂತ್ರಜ್ಞಾನದ ಉತ್ಕೃಷ್ಟ ನಗರ ಭಾರತದಲ್ಲಿ ಬೇರೆ ಎಲ್ಲೂ ಇಲ್ಲ ಎಂದು ದೇವೇಗೌಡರು ಪತ್ರದಲ್ಲಿ ಉಲ್ಲೇಖಸಿದ್ದಾರೆ.

ಬೆಂಗಳೂರಿನಲ್ಲಿ ಕೆಂಪೇಗೌಡರನ್ನು ಚೆನ್ನಾಗಿ ನಿರೂಪಿಸುವ ಮೂಲಕ ಭಾರತದ ತಾಂತ್ರಿಕ ಪ್ರಗತಿಯ ಸಂಕೇತವಾಗಿ ಕಾಣಬಹುದು.

ವೈಜ್ಞಾನಿಕ ಮತ್ತು ತಾಂತ್ರಿಕ ಉತ್ಕೃಷ್ಟತೆಯ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳನ್ನು ಹೊಂದಿರುವ ಯಾವುದೇ ನಗರವು ಭಾರತದಲ್ಲಿ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಕುರಿತು ಕೆಂಪೇಗೌಡ ಕೇಂದ್ರ ಸಮಿತಿಯಿಂದ ಮನವಿ ಪತ್ರವನ್ನೂ ಪ್ರಧಾನಿ ಕಚೇರಿಗೆ ಸಲ್ಲಿಸಲಾಗಿದೆ ಎಂದು ಜೆಡಿಎಸ್(ಜಾತ್ಯತೀತ) ಹಿರಿಯ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು,

ಮೋದಿ ಅವರಿಗೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪಿಸುವುದಾಗಿ ಕರ್ನಾಟಕ ಸರ್ಕಾರ(Karnataka Government) ಈಗಾಗಲೇ ಘೋಷಿಸಿದೆ.

ಇದನ್ನೂ ಓದಿ : https://vijayatimes.com/simple-tips-to-mental-health/

ನವೆಂಬರ್ 11 ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ 108 ಅಡಿ ಕೆಂಪೇಗೌಡ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಲಿದ್ದಾರೆ.

ಇದನ್ನು ‘ಸಮೃದ್ಧಿಯ ಪ್ರತಿಮೆ’ ಎಂದು ಕರೆಯಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಮನವಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆ ಏನು ಎಂಬುದನ್ನು ಕಾದು ನೋಡಬೇಕಿದೆ.

Exit mobile version