ಡಿ.ಕೆ ಸುರೇಶ್‌ ನೀಡಿದ ವಿವಾದಾತ್ಮಕ ಹೇಳಿಕೆ: ನೋ ಕಮೆಂಟ್ಸ್ ಎಂದ ಹೆಚ್.ಡಿ ದೇವೇಗೌಡ

Delhi: ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪ ಮಾಡಿದ್ದರು ಅಲ್ಲದೆ, ಉತ್ತರ ಭಾರತ ಮಾತ್ರ ಹೆಚ್ಚಿನ ಅನುದಾನ ಪಡೆಯುತ್ತಿದೆ ಎಂದಿದ್ದರು. ದಕ್ಷಿಣ ಭಾರತದ ರಾಜ್ಯಗಳನ್ನೊಳಗೊಂಡ ಪ್ರತ್ಯೇಕ ದೇಶ ರಚನೆಯಾದರೆ ತಾರತಮ್ಯ ಸರಿ ಹೋಗಬಹುದು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಹಾಗೂ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (D K Shivakumar) ಅವರ ಸಹೋದರ ಡಿ.ಕೆ.ಸುರೇಶ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸದ್ಯ ಈ ಕುರಿತಾಗಿ ಜೆಡಿಎಸ್ (JDS) ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡ (HD Devegowda) ದೆಹಲಿಯಲ್ಲಿ ಮಾತನಾಡಿದ್ದು, ಯಾವ ಉದ್ದೇಶದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಈ ವಿಷಯದ ಕುರಿತಾಗಿ ಮಾತನಾಡಲು ನನಗೆ ಇಷ್ಟವಿಲ್ಲ ಎಂದಿದ್ದಾರೆ. ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್​​. ದೇಶದಲ್ಲಿ ಸರ್ಕಾರ ನಡೆಸಿದೆ. ಅನ್ಯಾಯವಾದರೆ ನ್ಯಾಯ ಬಜೆಟ್ ಚರ್ಚೆ ವೇಳೆ ಮಾತನಾಡುತ್ತೇವೆ ಎಂದು ನುಡಿದಿದ್ದಾರೆ. ಈ ಹಿಂದೆ ಕೃಷಿ ನೀರಾವರಿಗೆಂದು ಹೆಚ್ಚು ಅನುದಾನ ಕೊಡಬೇಕು ಎಂದು ನಾನು ಮಾತನಾಡಿದ್ದೇನೆ. ಬಹಳಷ್ಟು ಕಠುವಾಗಿ ಮಾತನಾಡಿದ್ದೇನೆ. ಆದರೆ ಪ್ರತ್ಯೇಕ ದೇಶದ ಬಗ್ಗೆ ಮಾತನಾಡಿಲ್ಲ. ಒಂದು ರಾಷ್ಟ್ರೀಯ ಪಕ್ಷದ ಸದಸ್ಯರಾಗಿ ಅವರು ಯಾವ ಆಯಾಮದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಇದಕ್ಕಿಂತ ಹೆಚ್ಚು ನಾನು ಮಾತನಾಡಲಾರೆ ಎಂದಿದ್ದಾರೆ.

ಅಖಂಡ ಭಾರತ ಇಬ್ಭಾಗ ಮಾಡುವ ಮಾತಿಲ್ಲ ಎಂದ ಸಚಿವ ದಿನೇಶ್ ಗುಂಡೂರಾವ್.
ಇನ್ನು ಈ ಕುರಿತಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಪ್ರತಿಕ್ರಿಯೆ ನೀಡಿದ್ದು, ಅಖಂಡ ಭಾರತ ಇರಬೇಕು, ಅದನ್ನು ಇಬ್ಭಾಗ ಮಾಡುವುದು ಸರಿಯಲ್ಲ. ಡಿ.ಕೆ.ಸುರೇಶ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಆದರೆ ದಕ್ಷಿಣ ಭಾರತ ರಾಜ್ಯಗಳಿಗೆ ಸರಿಯಾದ ಅನುದಾನ ಸಿಗುತ್ತಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ತಾರತಮ್ಯ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತ್ ಜೋಡೋ ಇಲ್ಲವಾದ್ರೆ ಭಾರತ್ ತೋಡೋ ಎಂದ ವಿಧಾನಪರಿಷತ್ ಸದಸ್ಯ ರವಿಕುಮಾರ್
ಡಿಕೆ ಸುರೇಶ್ (D K Suresh) ನೀಡಿರುವ ವಿವಾದಾತ್ಮಕ ಹೇಳಿಕೆಗೆ ಬಾಗಲಕೋಟೆಯಲ್ಲಿ ವಿಧಾನಪರಿಷತ್ ಸದಸ್ಯ ರವಿಕುಮಾರ್​ ತಿರುಗೇಟು ನೀಡಿದ್ದು, ಕಾಂಗ್ರೆಸ್​​ ಪಕ್ಷದವರಿಗೆ ಬುದ್ಧಿಭ್ರಮಣೆ ಆಗಿದೆಯಾ ಅನಿಸುತ್ತಿದೆ. ಒಂದು ಕಡೆ ರಾಹುಲ್​​ ಗಾಂಧಿ ಭಾರತ ಜೋಡೋ ಅಂತಾ ಹೇಳುತ್ತಾರೆ. ಇನ್ನೊಂದು ಕಡೆ ಸಂಸದ ಡಿ.ಕೆ.ಸುರೇಶ್​​​ ಭಾರತ್​​​ ತೋಡೋ ಅಂತಾರೆ. ಭಾರತ್ ಜೋಡೋ (Bharat Jodo) ಇಲ್ಲದಿದ್ರೆ ಭಾರತ್ ತೋಡೋ ಎನ್ನುವುದು ಇವರ ಸಂಕಲ್ಪ ಎನಿಸುತ್ತದೆ ಎಂದು ಗೇಲಿ ಮಾಡಿದ್ದಾರೆ.

ಅಕ್ಷತಾ ಹೆಗ್ಡೆ

Exit mobile version