ಅವರದ್ದೇ ಒರಿಜಿನಲ್‌ ಅಂತಾ ಬೋರ್ಡ್‌ ಹಾಕಿಕೊಳ್ಳಲಿ, ಬೇಡ ಅಂದೋರು ಯಾರು? ಸಿಎಂ ಇಬ್ರಾಹಿಂ ವಿರುದ್ಧ ಎಚ್‌ಡಿಕೆ ವಾಗ್ದಾಳಿ

Bengaluru: ಬಿಜೆಪಿ (BJP) ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್‌ನಲ್ಲಿ ಸಿಎಂ ಇಬ್ರಾಹಿಂ (HDK against on CM Ibrahim) ಹಾಗೂ ಎಚ್‌ಡಿ ಕುಮಾರಸ್ವಾಮಿ (H D Kumaraswamy)

ನಡುವೆ ಸಮರ ನಡೆಯುತ್ತಿದ್ದು, ಕುಮಾರಸ್ವಾಮಿ ಅವರು, ನಮ್ಮದೇ ಒರಿಜಿನಲ್‌ (Original) ಜೆಡಿಎಸ್‌, ನಾವು ಐಎನ್‌ಡಿಐಎ ಕೂಟಕ್ಕೆ ಬೆಂಬಲ ನೀಡ್ತೀವಿ ಎಂದು ಹೇಳಿರುವ ಜೆಡಿಎಸ್‌

ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರಿಗೆ ತಿರುಗೇಟು ನೀಡಿದ್ದು, ಅವರದೇ ಒರಿಜಿನಲ್‌ ಅಂತಾ ಬೋರ್ಡ್‌ ಹಾಕಿಕೊಳ್ಳಲಿ, ಅವರನ್ನು ಬೇಡ ಅಂದೋರು ಯಾರು ಎಂದು ಪ್ರಶ್ನಿಸಿದ್ದಾರೆ.

ಸಿಎಂ ಇಬ್ರಾಂಹಿ (C M Ibrahim) ಅವರು ತಮ್ಮದೇ ಒರಿಜಿನಲ್‌ ಅಂತಾ ಬೋರ್ಡ್‌ ಹಾಕಿಕೊಳ್ಳಲಿ, ಅವರನ್ನು ಹಿಡ್ಕೊಂಡಿರೋರು ಯಾರು? ಅವರ ಮಾತಿಗೆಲ್ಲಾ ಯಾಕ್ರಿ ಸಿರಿಯಸ್‌ ಆಗಿ ಹೇಳಿಕೆ

ಕೊಡಬೇಕು. ಅವರ ವಿಚಾರವನ್ನು ಯಾಕೆ ಗಂಭೀರವಾಗಿ ತಗೋತಿರಾ ಎಂದು ಬೆಂಗಳೂರಿನ (Bengaluru) ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನಿಸಿದ್ದಾರೆ.

ತಮ್ಮನ್ನು ಸಮಯ ನೋಡಿಕೊಂಡು ಉಚ್ಛಾಟನೆ ಮಾಡ್ತೀವಿ ಎಂಬ ಸಿಎಂ ಇಬ್ರಾಂಹಿ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಉಚ್ಛಾಟನೆ ಮಾಡಿಕೊಳ್ಳಲಿ, ಅವರು ಫ್ರೀ ಇದ್ರೆ ಏನ್‌ ಬೇಕಾದ್ರೂ

ಮಾಡ್ಕೋಬಹುದು. ಅದು ಅವರಿಗೆ ಬಿಟ್ಟಿದ್ದು. ಅವರ ಮಾತನ್ನೆಲ್ಲಾ ಗಂಭೀರವಾಗಿ ಯಾಕೆ ತಗೋತಿರಿ? ನಾನ್ಯಾಕೆ ಅವರ ಮಾತಿಗೆಲ್ಲಾ ಪ್ರತಿಕ್ರಿಯಿಸಬೇಕು ಎಂದು ಗರಂ ಆದರು.

ಇಂತಹ ಚಿಕ್ಕ ಪುಟ್ಟ ವಿಚಾರಗಳನ್ನು ದಯವಿಟ್ಟು ಚರ್ಚೆಗೆ ತರಬೇಡಿ. ನಿಮಗೆ ಇದು ದೊಡ್ಡದಾಗಿ ಕಾಣಬಹುದು. ಆದರೆ, ನಮಗಲ್ಲ. ಇದು ಉತ್ತರ ಕೊಡುವ ವಿಷಯವೂ ಅಲ್ಲ. ನಮ್ಮ ಪಕ್ಷದಲ್ಲಿ

ಇರುವವರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ನೀವ್ಯಾಕ್‌ ಇಷ್ಟು ತಲೆ ಕೆಡಿಸ್ಕೋತಿರಿ, ನಾವು (HDK against on CM Ibrahim) ಏನ್‌ ಮಾಡಬೇಕೋ, ಮಾಡಿ ಸರಿ

ಮಾಡ್ಕೋತಿವಿ ಎಂದು ತಿಳಿಸಿದರು.

ಸಿ.ಎಂ ಇಬ್ರಾಹಿಂ ಹೇಳಿಕೆ
ಜೆಡಿಎಸ್‌ (JDS) ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಜೆಡಿಎಸ್‌, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಜೆಡಿಎಸ್‌ ಕರ್ನಾಟಕ ಚಿಂತನ ಮಂಥನ (Karnataka

Chinthana Manthana) ಹೆಸರಲ್ಲಿ ಸೋಮವಾರ ಸಭೆ ನಡೆಸಿದರು. ಆ ಸಂಧರ್ಭದಲ್ಲಿ ಐಎನ್‌ಡಿಐಎ (INDIA) ಮೈತ್ರಿಕೂಟಕ್ಕೆ ಬೆಂಬಲವನ್ನು ಸಿಎಂ ಇಬ್ರಾಹಿಂ ನೀಡಿದರು. ಬಿಜೆಪಿ ಜೊತೆಗಿನ

ಮೈತ್ರಿಯನ್ನು ನಾನು ಒಪ್ಪುವುದಿಲ್ಲ. ಮೈತ್ರಿ ಕುರಿತು ಪಕ್ಷದಲ್ಲಿ ಸಭೆ ನಡೆದಿದೆಯಾ? ನಿರ್ಣಯ ಕೈಗೊಳ್ಳಲಾಗಿದೆಯಾ? ಯಾವುದು ಆಗಿಲ್ಲ ಎಂದು ಕಿಡಿಕಾರಿದ್ದರು.

ಇದನ್ನು ಓದಿ: ಕೆಪಿಸಿಸಿಗೆ ಹೊಸ ಕಾರ್ಯಾಧ್ಯಕ್ಷರ ನೇಮಕಕ್ಕೆ ಸಿದ್ಧತೆ: ಖರ್ಗೆ, ಕೆಸಿ ವೇಣುಗೋಪಾಲ್‌ ಜೊತೆ ಡಿಕೆಶಿ ಚರ್ಚೆ

Exit mobile version