ಭೂಲೋಕದ ಸಂಜೀವಿನಿ ಈ ಲೋಳೆರಸ(ಅಲೋವೆರಾ)!

gel

ಅಲೋವೆರಾ ಆಯುರ್ವೇದದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ ಹಾಗು ಹಲವಾರು ಆರೋಗ್ಯ ಲಾಭಗಳನ್ನು ಕೂಡ ಹೊಂದಿದೆ(Health benefits of alovera).

ಅದರಲ್ಲೂ ಇಂದಿನ ದಿನದಲ್ಲಿ ಅಲೋವೆರಾವನ್ನು ಸೌಂದರ್ಯ ವರ್ಧಕವಾಗಿ ಬಳಸುತ್ತಾರೆ.

ನೇರವಾಗಿ ಅಲೋವೆರಾವನ್ನು ನಿಮ್ಮ ತ್ವಚೆಗೆ ಹಚ್ಚಿಕೊಂಡರೆ ಹಲವಾರು ಉಪಯೋಗಗಳು ನಮಗೆ ಲಭಿಸುವುದು. ಚರ್ಮದ ಅನೇಕ ರೋಗಗಳನ್ನು ದೂರವಿಡುತ್ತದೆ ಹಾಗು ಅದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಣೆ ಆಗುತ್ತದೆ.

ಇದು ದೇಹವನ್ನು ಒಳಗಿನಿಂದಲೇ ಶುದ್ದಿಗೊಳಿಸುತ್ತದೆ. ಹಾಗಾದರೆ ಈ ಅಲೋವೆರಾದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಇಂದಿನ ಲೇಖನದಲ್ಲಿ.

  1. ಅಲೋವೆರಾ ಎಂದರೇನು :

ಅಲೋವೆರಾ ಎಂದರೆ ಒಂದು ಸಸ್ಯಜಾತಿ. ಇದು ಲಿಲಿಯೇಸಿ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಇದು ನೋಡಲು ಹಸಿರು ಬಣ್ಣದಲ್ಲಿ ಇರುತ್ತದೆ ಜೊತೆಗೆ ಸಣ್ಣ ಸಣ್ಣ ಮುಳ್ಳು ಕೂಡ ಸೇರಿಕೊಂಡಿರುತ್ತದೆ(Health benefits of alovera).

ಇದನ್ನು ಮುಟ್ಟಿದರೆ ಅಂಟು ಅಂಟಾಗಿರುತ್ತದೆ. ಅಲೋವೆರಾದ ಮೇಲ್ಭಾಗವನ್ನು ರಿಂಡ್ ಎನ್ನಲಾಗುತ್ತದೆ ಮತ್ತು ಮಧ್ಯದ ಭಾಗವನ್ನು ಇನ್ನರ್ ಲೀಫ್ ಎಂದು ಕರೆಯುತ್ತಾರೆ. ಈ ಮಧ್ಯದ ಭಾಗವನ್ನು ಅಲೋವೆರಾ ಜೆಲ್ ಎಂದು ಕೂಡ ಕರೆಯುತ್ತಾರೆ.

ಅದರ ಮೂರನೆಯ ಭಾಗವನ್ನು ಅಲೋವೆರಾ ಲ್ಯಾಟೆಕ್ಸ್ ಎನ್ನಲಾಗುತ್ತದೆ.

  1. ಅಲೋವೆರಾದ ಇತಿಹಾಸ :
skin alovera

ಸಂಶೋಧನೆಗಳು ಹೇಳುವ ಪ್ರಕಾರ ಅಲೋವೆರಾ ಅನೇಕ ನಾಗರಿಕತೆಗಳಲ್ಲಿ ಒಂದಾಗಿದೆ. ಈಜಿಪ್ಟ್ ಗ್ರೀಕ್ ಮತ್ತು ರೋಮನ್ ನಾಗರಿಕತೆಗಳಲ್ಲಿ ಕೂಡ ಇದರ ವಿಶೇಷವನ್ನು ಉಲ್ಲಂಘಿಸಲಾಗಿದೆ.

ಹಾಗೆ ನಮ್ಮ ಭಾರತದ ಸಾಂಸ್ಕೃತಿಕ ಬರಹಗಳಲ್ಲೂ ಕೂಡ ಇದರ ಉಲ್ಲೇಖಗಳನ್ನು ಕಾಣಬಹುದಾಗಿದೆ. ಅಂದಿನ ಕಾಲದಲ್ಲಿ ಈಜಿಪ್ಟ್ ಮಹಾರಾಣಿ ತನ್ನ ದೈಹಿಕ ಸೌಂದರ್ಯಕ್ಕಾಗಿ ಇದನ್ನು ಬಳಸಲಾಗುತ್ತಿತ್ತು ಎನ್ನಲಾಗುತ್ತದೆ.

ಫಿಲಿಪೈನ್ಸ್ನಲ್ಲಿ ಮೂತ್ರಪಿಂಡದ ಚಿಕಿತ್ಸೆಗಾಗಿ ಅಲೋವೆರಾವನ್ನು ಹಾಲಿನೊಂದಿಗೆ ಸೇರಿಸಿ ಬಳಕೆ ಮಾಡುತ್ತಿದ್ದರೂ ಎಂದು ಕೆಲ ಸಂಶೋಧನೆಗಳು ಸ್ಪಷ್ಟಪಡಿಸಿದೆ.

  1. ಅಲೋವೆರಾ ಉಪಯೋಗಗಳೇನು :
Aleo Gel

ಹೊಟ್ಟೆಯ ಹುಣ್ಣನ್ನು ತಡೆಯುತ್ತದೆ. ಈ ಜೀರ್ಣಕಾರಿ ಕಾಯಿಲೆಗಳಿಗೆ ಅಲೋವೆರಾವನ್ನು ಬಳಸುತ್ತಾರೆ ಹಾಗೂ ಹೊಟ್ಟೆಯ ಒಳಗೆ ಉಂಟಾಗುವ ಹುಣ್ಣುಗಳನ್ನು ಕೂಡ ಸುಲಭವಾಗಿ ಗುಣಪಡಿಸಲು ಇದನ್ನು ಬಳಸುತ್ತಾರೆ.

ಇದು ಒಂದು ಉರಿಯೂತದ ವಸ್ತುವಾಗಿದೆ. ಇದನ್ನು ನಿಯಮಿತವಾಗಿ ಬಳಸಿದರೆ ಹೊಟ್ಟೆಯ ಒಳಪದರ ಹಾಗೂ ಹೊಟ್ಟೆಯ ಹುಣ್ಣುಗಳನ್ನು ತಡೆಯುತ್ತದೆ ಎಂದು ಸಾಬೀತಾಗಿದೆ.

4. ಮೊಡವೆಗಳಿಗೆ ಅಲೋವೆರಾವನ್ನು ಉಪಯೋಗಿಸಿ :

ಬೇಸಿಗೆ ಕಾಲ ಬಂತು ಎಂದರೆ ಸಾಕು, ಹೆಚ್ಚಿನ ಜನರಿಗೆ ಮೊಡವೆ ಹಾಗೂ ಬೊಕ್ಕಗಳು ಕಾಣಿಸಿಕೊಳ್ಳುತ್ತವೆ. ಏಕೆಂದರೆ ನಾವು ಗಾಳಿಯಲ್ಲಿ ಹೆಚ್ಚಿನ ಪ್ರಯಾಣ ಮಾಡುವುದರಿಂದ ಕೆಲವೊಮ್ಮೆ ಈ ಮೊಡವೆಗಳು ಹೆಚ್ಚಿನ ನೋವುಗಳನ್ನು ಕೊಡುತ್ತದೆ.

https://vijayatimes.com/wife-kills-her-husband-brutally/

ಆ ಸಂದರ್ಭದಲ್ಲಿ ಈ ಆಲೋವೆರಾ ಹಚ್ಚುವುದರಿಂದ ನೋವು ಹಾಗೂ ಕಿರಿಕಿರಿಯಿಂದ ನಾವು ತಪ್ಪಿಸಿಕೊಳ್ಳಬಹುದು. ಇದು ಚರ್ಮಕ್ಕೆ ಶೀಘ್ರ ಉಪಶಮನ ನೀಡಿ, ಮೊಡವೆಗಳ ಗಾತ್ರವನ್ನು ಕುಗ್ಗಿಸುತ್ತದೆ.

ಹೀಗಾಗಿ ಮೊಡವೆಗಳು ಕಾಣಿಸಿಕೊಂಡರೆ ಹಾಗೂ ಅದರಿಂದ ನೋವುಗಳು ಉಂಟಾದರೆ ಹೀಗೆ ಮಾಡುವುದು ಉತ್ತಮ.

5. ತಲೆಹೊಟ್ಟು ದೂರವಾಗುತ್ತದೆ :

Dandruff

ತಲೆಹೊಟ್ಟು ಅನ್ನುವುದು ಚರ್ಮದ ಸಮಸ್ಯೆ ಅಲ್ಲ. ಆದರೆ ಇದೊಂದು ತಲೆಬುರಡೆಯ ಸಮಸ್ಯೆಯಾಗಿದೆ. ಇದು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅಲೋವೆರಾವನ್ನು ಹಚ್ಚಿಕೊಂಡರೆ ತಲೆ ಹೊಟ್ಟನ್ನು ದೂರವಿಡುವುದರಲ್ಲಿ ಯಶಸ್ವಿಯಾಗಬಹುದು.

https://youtu.be/iLNe180wspM

6. ಹೃದಯದ ಆರೋಗ್ಯ :

ಅಲೋವೆರಾವನ್ನು ನಿಯಮಿತವಾಗಿ ಬಳಸುವುದರಿಂದ ಹೃದಯಕ್ಕೆ ಸಹಾಯವಾಗುತ್ತದೆ. ಹೇಗೆ ಎಂದರೆ, ಈ ಅಲೋವೆರಾ ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶದ ವಿರುದ್ಧ ಬಲವಾಗಿ ಹೊರಡುತ್ತದೆ.

ಹಾಗೂ ಇದರಿಂದ ನಮ್ಮ ದೇಹದಲ್ಲಿ ಸಕ್ಕರೆ ಮಟ್ಟವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಒಟ್ಟಿನಲ್ಲಿ ಹೇಳುವುದಾದರೆ ಅಲೋವೆರಾ ಅನಾರೋಗ್ಯದ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತದೆ.

ಹಾಗೂ ದೇಹದಲ್ಲಿನ ಚಯಾಪಚಯ ಮತ್ತು ಜೀರ್ಣಕಾರಿ ಪ್ರಕ್ರಿಯೆಗಳಿಗೆ ಸಹಕಾರ ಮಾಡುತ್ತದೆ.

ಇದರಿಂದ ನಮ್ಮ ಚರ್ಮವನ್ನು ಕೂಡ ಆರೋಗ್ಯದಿಂದ ಇಡಲು ಸಾಧ್ಯವಾಗುತ್ತದೆ ಎಂದು ಸಂಶೋಧನೆಗಳು ವಿವರಿಸಿದೆ.

Exit mobile version