Health Benefits of Asafoetida : ತನ್ನ ಗಾಢವಾದ ಪರಿಮಳದಿಂದಲೇ ಜನರಿಗೆ ಚಿರಪರಿಚಿತವಾಗಿರುವ ಇಂಗು, ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಅನೇಕ ಆರೋಗ್ಯ
ಸಮಸ್ಯೆಗಳನ್ನು ದೂರ ಮಾಡುವ ಗುಣವನ್ನು ಹೊಂದಿದೆ.ನಾವು ಸೇವಿಸುವ ಆಹಾರ ಪದಾರ್ಥ ಸರಿಯಾಗಿ ಜೀರ್ಣವಾಗದೇ ಇದ್ದರೆ, ಅಜೀರ್ಣ ಮಲಬದ್ಧತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಇವೆಲ್ಲವೂ ಕೂಡ ನಮ್ಮ ಜೀರ್ಣಾಂಗಕ್ಕೆ ಸಂಬಂಧ ಪಟ್ಟ (Health benefits of Asafoetida) ಸಮಸ್ಯೆಗಳು ಎಂದು ಹೇಳಬಹುದು.
ಮನೆಯಲ್ಲಿ ಬೇಳೆಸಾರು, ಸಾಂಬಾರು ಮಾಡಿದಾಗ ಅಥವಾ ಕೆಲವೊಂದು ತರಕಾರಿ ಪದಾರ್ಥಗಳಿಗೆ ಕೊನೆಯಲ್ಲಿ ಒಗ್ಗರಣೆ ಹಾಕುವ ಸಂದರ್ಭದಲ್ಲಿ ಚಿಟಿಕೆಯಷ್ಟು ಇಂಗನ್ನು ಹಾಕುತ್ತಾರೆ. ಮತ್ತು ಅಡುಗೆಯ ರುಚಿ
ಹೆಚ್ಚಾಗಲು ಹಾಗೂ ಗ್ಯಾಸ್ಟ್ರಿಕ್ (Gastric), ಹೊಟ್ಟೆಯುಬ್ಬರದಂತಹ ಸಮಸ್ಯೆಗಳನ್ನು ದೂರ ಮಾಡಲು ಇದನ್ನು ಬಳಸುತ್ತಾರೆ ಇದರ ಉಪಯೋಗಗಳು ಇಷ್ಟಕ್ಕೆ ಮಾತ್ರ ಮೀಸಲಾಗಿಲ್ಲ ಬದಲಿದೆ ಇದರಿಂದ
ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು (Health benefits of Asafoetida) ಪಡೆಯಹುದಾಗಿದೆ.
ನಮ್ಮ ದೈನಂದಿನ ಆಹಾರ ಪದಾರ್ಥಗಳಲ್ಲಿ ಅಂದರೆ ನಾವು ತಯಾರಿಸುವ ಸಾಂಬಾರು, ಬೇಳೆಸಾರಿಗೆ ಚಿಟಿಕೆ ಯಷ್ಟು ಇಂಗನ್ನು ಬಳಸುವುದರಿಂದ, ಇಂತಹ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.
ಇದಕ್ಕೆ ಪ್ರಮುಖ ಕಾರಣ ಇಂಗಿನಲ್ಲಿ ಬ್ಯಾಕ್ಟೀರಿಯಾ ನಿವಾರಕ, ವೈರಸ್ ನಿವಾರಕ ಹಾಗೂ ಉರಿಯೂತ ನಿವಾರಕ ಗುಣ ಲಕ್ಷಣಗಳು ಇರುದರಿಂದ,ಗ್ಯಾಸ್ಟಿಕ್, ಹೊಟ್ಟೆ ಉಬ್ಬರ, ಮಲಬದ್ಧತೆಯಂತಹ ಸಮಸ್ಯೆಗಳು
ಕ್ರಮೇಣವಾಗಿ ದೂರ ಮಾಡಬಹುದಾಗಿದೆ
ಇಂಗಿನ ಪ್ರಯೋಜನಗಳು
ಮನೆಯಲ್ಲಿ ರೆಡಿ ಮಾಡುವ ಸಾಂಬಾರಿಗೆ, ಚಿಟಿಕೆಯಷ್ಟು ಇಂಗು ಬಳಸುವುದರಿಂದ ಇದರಲ್ಲಿರುವ ಕೆಲವೊಂದು ಆರೋಗ್ಯಕಾರಿ ಅಂಶಗಳು, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ.
ರಕ್ತದೊತ್ತಡ ಅನ್ನೋದು ಗೊತ್ತಾಗದೆ ಬರುವ ಕಾಯಿಲೆ ಮತ್ತು ಈ ರೋಗಲಕ್ಷಣಗಳು ಆರಂಭದಲ್ಲಿ ಯಾರಿಗೂ ಕೂಡ ಗೊತ್ತಾಗುವುದಿಲ್ಲ, ಈ ಕಾಯಿಲೆ ಅಪಾಯದ ಮಟ್ಟ ಮೀರಿದ ಮೇಲೆ ನಮಗೆ ತಿಳಿಯುತ್ತದೆ
ಅಲ್ಲದೆ ಹೃದಯ ತನ್ನ ನಿಯಂತ್ರಣ ತಪ್ಪಿರುತ್ತದೆ, ಹಾಗೂ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರು ವಾಗಿರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಕೂಡ ಈ ಕಾಯಿಲೆಯನ್ನು
ಮಾತ್ರ ನಾವು ನಿರ್ಲಕ್ಷ್ಯ ಮಾಡುವಂತಿಲ್ಲ.ಇನ್ನು ರಕ್ತದೊತ್ತಡಕ್ಕೆ ಉತ್ತಮ ಪರಿಹಾರ ಏನಂದ್ರೆ ಅಡುಗೆ ಯಲ್ಲಿ ಇಂಗು ಬಳಸುವುದು.
ಇಂಗಿನಿಂದ ತಲೆನೋವು ಮಾಯ
ಬೆಳಗ್ಗೆ ಎದ್ದ ಕೂಡಲೇ ಕೆಲವರಿಗೆ, ತಲೆನೋವು ಹಾಗೂ ತಲೆಸುತ್ತು ಸಮಸ್ಯೆ ಕಂಡು ಬರುತ್ತದೆ ಆದರೆ ಇನ್ನೂ ಕೆಲವರಿಗೆ ದೀರ್ಘಕಾಲದಿಂದ, ತಲೆನೋವು ಸಮಸ್ಯೆಯಿಂದ ಬಳಲುತ್ತಿರುತ್ತಾರೆ.ಈ ಸಮಸ್ಯೆ ಇರುವವರು,
ಒಂದು ಲೋಟ ನೀರಿಗೆ ಚಿಟಿಕೆಯಷ್ಟು ಇಂಗು ಪುಡಿಯನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿಕೊಂಡು ದಿನದಲ್ಲಿ ಒಮ್ಮೆ ಕುಡಿಯುವ ಅಭ್ಯಾಸ ಮಾಡಿಕೊಡರೆ ಸಮಸ್ಯೆಯಿಂದ ಪರಿಹಾರ ಪಡೆಬಹುದಾಗಿದೆ.
ಕೆಮ್ಮು, ಕಫ ಶೀತದಂತ ಸಮಸ್ಯೆಗೂ ಮದ್ದು
ಮೊದಲೇ ಹೇಳಿದ ಹಾಗೆ ಇಂಗು ಬ್ಯಾಕ್ಟೀರಿಯಾ (Bacteria) ನಿವಾರಕ, ಉರಿಯೂತ ನಿವಾರಕ ಹಾಗೂ ಆಂಟಿ ವೈರಲ್ (Anti Viral) ಗುಣ ಲಕ್ಷಣಗಳನ್ನು ಒಳಗೊಂಡಿದೆ ಹಾಗಾಗಿ ನೆಗಡಿ, ಕೆಮ್ಮು, ಕಫದಂತಹ
ಸಮಸ್ಯೆಗಳಿಗೆ, ಇಂಗು ಬಹಳ ಬೇಗನೇ ಪರಿಹಾರ ನೀಡುತ್ತದೆ.
ಇಂಗನ್ನು ಸೇವಿಸುವ ವಿಧಾನ
ಕೆಮ್ಮಿನ ಸಮಸ್ಯೆ ಇದ್ದರೆ, ಅರ್ಧ ಟೀ ಚಮಚ ಇಂಗು ಪುಡಿ, ಅರ್ಧ ಟೀ ಚಮಚದಷ್ಟು ಶುಂಠಿ ರಸ ಹಾಗೂ ಒಂದು ಟೇಬಲ್ ಚಮಚ ಜೇನು ತುಪ್ಪ ವನ್ನು ಮಿಶ್ರಣ ಮಾಡಿ. ದಿನದಲ್ಲಿ ಎರಡು ಬಾರಿ ಸೇವನೆ
ಮಾಡುವುದರಿಂದ, ಕೆಮ್ಮು ಶೀತದ ಸಮಸ್ಯೆ ಕ್ರಮೇಣ ಕಡಿಮೆ ಮಾಡುತ್ತದೆ.
ಶ್ವಾಸಕೋಶದ ಆರೋಗ್ಯವನ್ನು ಕಾಪಾಡುತ್ತದೆ
ಅಡುಗೆಯಲ್ಲಿ ಇಂಗನ್ನು ಬಳಸುವುದರಿಂದ, ಶ್ವಾಸಕೋಶದಲ್ಲಿ ಕಾಣಿಸಿಕೊಳ್ಳುವ ಸೋಂಕು ಗಂಟಲು ಕಿರಿಕಿರಿ ಯನ್ನು ಸಹ ನಿಧಾನವಾಗಿ ಕಡಿಮೆ ಮಾಡುತ್ತದೆ ಪ್ರಮುಖವಾಗಿ ಉಸಿರಾಟಕ್ಕೆ ಸಂಬಂಧಿಸಿದ
ತೊಂದರೆಗಳಾದ ಅಸ್ತಮಾ, ಕಫದಿಂದ ಎದೆ ಕಟ್ಟುವಿಕೆಯಂತಹ ಸಮಸ್ಯೆ ಗಳು ದೂರವಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಇದನ್ನು ಒದಿ: 2029ಕ್ಕೆ ‘ಒಂದು ದೇಶ, ಒಂದು ಎಲೆಕ್ಷನ್’: ಕಾನೂನು ಆಯೋಗದಿಂದ ಬುಧವಾರ ಅಂತಿಮ ವರದಿ
- ಮೇಘಾ ಮನೋಹರ ಕಂಪು