Health Tips: ಅಂಜೂರದ ಹಣ್ಣು (Health Benefits of Fig-Milk) ನಮ್ಮ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಇದರಲ್ಲಿರುವ ಪೌಷ್ಟಿಕ ಸತ್ವಗಳು
ನಮ್ಮ ಆರೋಗ್ಯದ ಲಾಭಗಳನ್ನು ಹೆಚ್ಚಿಸುತ್ತದೆ. ಹಲವಾರು ಆರೋಗ್ಯಕರ ಲಾಭಗಳನ್ನು ಕೊಡುವಂತಹ ಅಂಜೂರದ ಹಣ್ಣುನ್ನು ಸೇವಿಸುವುದರಿಂದಾಗುವ ಪ್ರಯೋಜನಗಳು ಎಂದು ಎಂದು ತಿಳಿಯೋಣ.
ನಮ್ಮ ಶಕ್ತಿಯನ್ನು ಮತ್ತು ಚೈತನ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರೆ ಪ್ರತಿದಿನ ಅಂಜೂರ ಹಣ್ಣು ಬೆರೆಸಿದ ಹಾಲು (Milk) ಕುಡಿಯುವುದು ಉತ್ತಮ. ಅಂಜೂರದಲ್ಲಿ ಕಾರ್ಬೋಹೈಡ್ರೇಟ್
(Carbohydrates) ಮತ್ತು ಹಾಲಿನಲ್ಲಿ ಕ್ಯಾಲ್ಸಿಯಂ ಇದ್ದು ಇವೆರಡು ಸೇರಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ಇದೊಂದು ಸಮತೋಲನವಾದ ಆಹಾರ ಕೂಡವಾಗಿದೆ ಅಲ್ಲದೆ ದೇಹದ ತೂಕವನ್ನು
ನಿರ್ವಹಣೆ ಮಾಡಬೇಕುಎನ್ನುವವರು ಈ (Health Benefits of Fig-Milk) ಒಂದು ಪಾನೀಯವನ್ನು ಕುಡಿಯಬಹುದು.
ಮೂಳೆಗಳ ಆರೋಗ್ಯ ಉತ್ತಮವಾಗಿ ನಿರ್ವಹಣೆ ಆಗಬೇಕು ಎನ್ನುವವರು ಅಂಜೂರ ಮಿಶ್ರಿತ ಹಾಲನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಕ್ಯಾಲ್ಸಿಯಂ (Calcium) ಮತ್ತು ಫಾಸ್ಫರಸ್ ಒಟ್ಟಿಗೆ ಸಿಕ್ಕಂತೆ
ಆಗುತ್ತದೆ. ಪ್ರತಿದಿನ ಇದನ್ನು ಕುಡಿದರೆ ಅವರಿಗೆ ಮೂಳೆಗಳು ಗಟ್ಟಿಯಾಗುತ್ತವೆ ಮತ್ತು ಚಳಿಗಾಲದ ನಂತರದಲ್ಲಿ ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸುವುದಿಲ್ಲ
ಪ್ರತಿದಿನ ಇದನ್ನು ಕುಡಿಯುವುದು ಆರೋಗ್ಯ ತುಂಬಾ ಒಳ್ಳೆಯದು.ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ (Vitamin) ಅಂಶಗಳು, ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು
ಇದರಲ್ಲಿ ಹೇರಳವಾಗಿವೆ. ಹೀಗಾಗಿ ನಮಗೆ ಶಕ್ತಿ ಹೆಚ್ಚಿಸುವಲ್ಲಿ ಅಂಜೂರ ಮತ್ತು ಹಾಲು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ.
ನಾವು ಅಂಜೂರ ಸೇವಿಸುವುದರಿಂದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುತ್ತದೆ. ಅಂಜೂರ ಹಾಲಿನಲ್ಲಿ ನಾರಿನ ಅಂಶಇರವುದರಿಂದ ಅಜೀರ್ಣತೆ ಮತ್ತು ಮಲಬದ್ಧತೆ ಉಂಟಾಗಲು ಬಿಡುವುದಿಲ್ಲ
ಮತ್ತು ನಾವು ಯಾವುದೇ ಆಹಾರ ತಿಂದರೂ ಸಹ ಹೊಟ್ಟೆಯ ಹಾಗೂ ಕರುಳಿನ ಸಮಸ್ಯೆ ಬರದ ಹಾಗೆ ನೋಡಿಕೊಳ್ಳಲು ಅಂಜೂರ ಮತ್ತು ಹಾಲಿನ ಸೇವನೆ ಬಹಳ ಮುಖ್ಯ.
ಅಂಜೂರದ ಹಾಲು ತನ್ನಲ್ಲಿ ನಾರಿನ ಪ್ರಮಾಣವನ್ನು ಹೊಂದಿರುವ ಕಾರಣದಿಂದ ಕೊಲೆಸ್ಟ್ರಾಲ್ (Cholesterol) ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಪೊಟಾಸಿಯಂ ಕೂಡ ಇದರಲ್ಲಿ ಇರುವುದರಿಂದ
ರಕ್ತದ ಒತ್ತಡ ಚೆನ್ನಾಗಿ ನಿರ್ವಹಣೆ ಆಗುತ್ತದೆ ನೋಡಿಕೊಳ್ಳುತ್ತದೆ.
ಮಧುಮೇಹ ಇರುವವರು ಹಾಲಿನ ಜೊತೆ ಅಂಜೂರವನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಸಕ್ಕರೆ ಕಾಯಿಲೆ ಉತ್ತಮವಾಗಿ ನಿಯಂತ್ರಣ ದಲಿಡುತ್ತದೆ ನಿಮ್ಮ ಸಮತೋಲನ ಆಹಾರ ಪದ್ಧತಿಯಲ್ಲಿ
ಅಂಜೂರವನ್ನು ಸೇರಿಸಿಕೊಳ್ಳುವುದರಿಂದ ದೀರ್ಘಕಾಲದಲ್ಲಿ ನಿಮಗೆ ಮತ್ತು ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಉಪಯೋಗವಾಗುತ್ತದೆ.
ದೇಹದ ತೂಕ ಕಡಿಮೆ ಮಾಡಿ ಕೊಳ್ಳಬೇಕು ಎನ್ನುವವರು ಅಂಜೂರ ಮಿಶ್ರಿತ ಹಾಲು ಒಂದು ವರದಾನ. ಪ್ರತಿದಿನ ಇದನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ತೂಕ ನಿಯಂತ್ರಣವಾಗುವುದರ
ಜೊತೆಗೆ ಆರೋಗ್ಯಕರವಾದ ಜೀವನ ಶೈಲಿ ನಿಮ್ಮದಾಗುತ್ತದೆ.
ಆಂಟಿ ಆಕ್ಸಿಡೆಂಟ್ (Anti Oxidant) ಅಂಶಗಳು ಇದರಲ್ಲಿ ಅಪಾರವಾಗಿರುವ ಕಾರಣದಿಂದ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಕೆಲಸ ಮಾಡುತ್ತದೆ. ಹಾಲಿನೊಂದಿಕೆ ಅಂಜೂರ
ಸೇವಿಸುವುದರಿಂದ ಹಲವು ಬಗೆಯ ಸೋಂಕುಗಳಿಂದ ಮತ್ತು ಸಣ್ಣ ಪುಟ್ಟ ಕಾಯಿಲೆಗಳಿಂದ ನಾವು ರಕ್ಷಣೆ ಪಡೆದು ಕೊಳ್ಳಬಹುದು.
ಅಂಜೂರದ ಹಣ್ಣಿನಲ್ಲಿ ನಮ್ಮ ದೇಹದ ಫ್ರೀ ರಾಡಿಕಲ್ (Free Radicals) ಅಂಶಗಳ ವಿರುದ್ಧ ಹೋರಾಡುವಂತಹ ಆಂಟಿ ಆಕ್ಸಿಡೆಂಟ್ ಅಂಶಗಳು ಸಾಕಷ್ಟು ಕಂಡುಬರುತ್ತವೆ. ಹಾಲಿನ ಜೊತೆ ಸೇರಿಸಿ
ಕುಡಿಯುವುದರಿಂದ ನಮ್ಮ ದೇಹದಲ್ಲಿ ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗುತ್ತದೆ. ಹೀಗಾಗಿ ಈಗಿನ ಚಳಿಗಾಲದಲ್ಲಿ ಇದೊಂದು ಬೆಸ್ಟ್ ಆರೋಗ್ಯಕರ ಪಾನೀಯ ಎಂದು ಹೇಳಬಹುದು.
ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ
ಹಾಲಿನ ಜೊತೆ ಅಂಜೂರ ಸೇರಿದರೆ ಅದು ನಮ್ಮ ಚರ್ಮದ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಇದು ನಮ್ಮ ಸೌಂದರ್ಯವನ್ನು ಹೆಚ್ಚು ಮಾಡುವ ಜೊತೆಗೆ ಚರ್ಮದ ಮೇಲಿನ ಸುಕ್ಕುಗಳನ್ನು
ಮತ್ತು ಗೆರೆಗಳನ್ನು ಇಲ್ಲವಾಗಿಸುತ್ತದೆ. ಹೀಗಾಗಿ ಯಾವಾಗಲೂ ನೀವು ಯೌವ್ವನ ಭರಿತರಾಗಿ ಕಾಣಬೇಕು ಎಂದರೆ ಅಂಜೂರ ಮಿಶ್ರಿತ ಹಾಲಿನ ಸೇವನೆ ಮಾಡಿ.
- ಮೇಘಾ ಮನೋಹರ ಕಂಪು