ಪಪ್ಪಾಯ ಹಣ್ಣಿನ ಸೇವನೆ ನಮ್ಮ ದೇಹಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ? ತಪ್ಪದೇ ಓದಿ

Pappaya

ಪಪ್ಪಾಯ ಹಣ್ಣು(Pappaya Fruit) ಇದನ್ನು ಪರಂಗಿ ಹಣ್ಣು ಎಂದು ಕೂಡ ಕರೆಯುತ್ತಾರೆ ಹಾಗೂ ಇದನ್ನು ತಮಿಳುನಾಡು, ಮಹಾರಾಷ್ಟ್ರ, ಒರಿಸ್ಸಾ, ಬಿಹಾರ ಅಲ್ಲಿ ಅಧಿಕವಾಗಿ ಬೆಳೆಯುವರು. ನೋಡಲು ಅದರ ಮರವು ಹಸಿರು ಬಣ್ಣದ ಕಾಂಡವಾಗಿದ್ದು, ಟೊಳ್ಳಾಗಿ ಇರುತ್ತದೆ ಹಾಗೂ ದ್ವಿಲಿಂಗ ಮರ ಆಗಿದೆ.

ಇದನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಅನೇಕ ಬದಲಾವಣೆ ಆಗುವುದು. ಪಪ್ಪಾಯ ಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ಏನೆಲ್ಲಾ ಉಪಯೋಗ ಇದೆ ನೋಡೋಣ ಬನ್ನಿ. ನಿಮ್ಮ ದೈನಂದಿನ ಆಹಾರ ಶೈಲಿಯಲ್ಲಿ ಹಣ್ಣು ಹಾಗೂ ತರಕಾರಿಗಳ ಸೇವನೆ ಅಧಿಕವಾಗಿ ಉಪಯೋಗಿಸಿದಲ್ಲಿ ನಿಮ್ಮ ದೇಹದಲ್ಲಿ ನಾರು ಮತ್ತು ಕಾರ್ಬೋ ಹೈಡ್ರೇಟ್ ಅಂಶ ಹೆಚ್ಚುತ್ತದೆ.

ಮಧುಮೇಹಿಗಳಿಗೆ ರೈಸ್ ಜೊತೆಗೆ ಒಂದು ಬೌಲ್ ಪಪ್ಪಾಯ ಕೊಟ್ಟು ಅವರ ಶುಗರ್ ಲೆವೆಲ್ ಪರೀಕ್ಷೆ ಮಾಡಿದಾಗ ಶುಗರ್ ಲೆವೆಲ್ ಕಮ್ಮಿ ಇರುತ್ತದೆ. ಹೇಗೆಂದರೆ ಪಪ್ಪಾಯದಲ್ಲಿರುವ ನಾರಿನ ಅಂಶವು ಶುಗರ್ ಅಂಶವನ್ನು ಒಬ್ಸೇರ್ಬ್ ಮಾಡಲು ಅವಕಾಶ ನೀಡದೆ ಕರುಳಿಗೆ ದೊರಕುವುದರಿಂದ ದೇಹದಲ್ಲಿ ಸಕ್ಕರೆ ಅಂಶವು ಕಡಿಮೆ ಆಗುವುದು.

https://fb.watch/f5EA3JD549/

ಹಾಗಾಗಿ ದಿನಾಲೂ ಒಂದು ಪಪ್ಪಾಯ ಸೇವನೆ ಮಾಡುವುದು ಉತ್ತಮ. ಅಲ್ಲದೆ ಪಪ್ಪಾಯ ಅತಿ ಕಡಿಮೆ ಬೆಲೆ ಅಲ್ಲಿ ಸಿಗುವ ಹಣ್ಣು.
ಇಂದಿಗೂ ಕೆಲವರಲ್ಲಿ ತಪ್ಪು ನಂಬಿಕೆ ಇದೆ. ಪಪ್ಪಾಯ ತಿಂದರೆ ಬಾಡಿ ಹೀಟ್ ಆಗುವುದು, ಕೆಲವೊಂದು ಸೊಪ್ಪು ತಿಂದರೆ ಕಿಡ್ನಿ ಸ್ಟೋನ್ ಆಗುವುದು ಎಂಬ ನಂಬಿಕೆ ಇದೆ. ಹಾಗಾದ್ರೆ ನಾವು ಹೋಟೆಲ್ ಅಲ್ಲಿ ತಿನ್ನುವ ಆಹಾರ ಬಗ್ಗೆ ಯಾಕೆ ಯೋಚ್ನೆ ಮಾಡುವುದಿಲ್ಲ.

ಪಪ್ಪಾಯಿ ತಿಂದರೆ ಮಜ್ಜಿಗೆ ಮತ್ತು ಎಳನೀರನ್ನು ಕುಡಿಯಿರಿ ದೇಹದ ಉಷ್ಣತೆ ಕಡಿಮೆ ಆಗುವುದು. ದಿನಾಲೂ ಪಪ್ಪಾಯವನ್ನು ತಿಂಡಿಗಿಂತ ಮೊದಲು ಸೇವನೆ ಮಾಡಿದ್ದಲ್ಲಿ ನಮ್ಮ ದೇಹಕ್ಕೆ ಅಗತ್ಯ ಇರುವ ಪೋಷಕಾಂಶ ದೊರೆಯುತ್ತದೆ. ಪಪ್ಪಾಯ ಅಲ್ಲಿ ವಿಟಮಿನ್, ಕಾರ್ಬೋಹೈಡ್ರೇಟ್ಸ್, ಸಕ್ಕರೆ ಅಂಶ ಕಡಿಮೆ ಇದೆ. ಅನ್ನ ಚಪಾತಿಗೆ ಹೋಲಿಸಿದರೆ ಕಡಿಮೆ ಸಕ್ಕರೆ ಅಂಶ ಇದೆ.

ಅಧಿಕ ರಕ್ತದೊತ್ತಡ, ಬೊಜ್ಜುತನ, ಹೃದಯ ಸಂಬಂಧಿತ ಕಾಯಿಲೆ ಇರುವವರು ಮಧುಮೇಹಿಗಳು ಕೂಡ ಊಟಕ್ಕಿಂತ ಮೊದಲು ಸೇವಿಸಿದರೆ ಉತ್ತಮ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಣ್ಣು ಮತ್ತು ತರಕಾರಿಗಳನ್ನು ಯಥೇಚ್ಛವಾಗಿ ಸೇವನೆ ಮಾಡಿದರೆ ಒಳ್ಳೆಯದು.

Exit mobile version