ಗಸಗಸೆ ಸೇವಿಸಿ ಈ 11 ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಿ ; ತಪ್ಪದೇ ಮಾಹಿತಿ ಓದಿ

Poppy seeds

ಆರೋಗ್ಯದ ದೃಷ್ಟಿಯಿಂದ ಗಸಗಸೆ(Poppy Seeds) ಪ್ರಯೋಜನಕಾರಿಯಾಗಿದೆ. ಇದು ವಿಟಮಿನ್(Vitamin) ಮತ್ತು ಫೈಬರ್‌ಗಳಿಂದ(Fiber) ಕೂಡಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಗಸಗಸೆ ಸೇವನೆಯಿಂದಾಗುವ 11 ಆರೋಗ್ಯ ಲಾಭಗಳನ್ನು ಇಲ್ಲಿ ನೋಡೋಣ.

  1. ಇದರಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು, ರಕ್ತವನ್ನು ಶುದ್ಧೀಕರಿಸುತ್ತದೆ. ಜೊತೆಗೆ ಕೆಂಪು ರಕ್ತ ಕಣಗಳು ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಅಂದರೆ ಒತ್ತಡದ ಹಾರ್ಮೋನ್ ಅನ್ನು ಕಡಿಮೆ ಮಾಡುತ್ತದೆ. ಈ ಮೂಲಕ ನಿದ್ದೆ ಬರುವಂತೆ ಮಾಡುತ್ತದೆ.

2. ಗಸಗಸೆಯ ಪಾನೀಯವನ್ನು ಸೇವಿಸುವುದರಿಂದ ಸ್ನಾಯು ಸೆಳೆತ ನಿವಾರಿಸಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ಕಾಲಜನ್ ಉತ್ಪಾದನೆಗೆ ಸಹಾಯ ಮಾಡಿ, ವಯಸ್ಸಾದವರಲ್ಲಿ ಮೂಳೆಗಳ ಸಾಂದ್ರತೆಯನ್ನು ಕಾಪಾಡಿಕೊಳ್ಳುತ್ತದೆ. ಇದರಲ್ಲಿರುವ ಅಪರ್ಯಾಪ್ತ ಕೊಬ್ಬಿನಾಮ್ಲಗಳು ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತವೆ.

3. ಇದು ರೋಗ ನಿರೋಧಕ ವ್ಯವಸ್ಥೆಗೆ ಮುಖ್ಯವಾಗಿರುವ ಸತುವಿನ ಸಮೃದ್ಧ ಮೂಲವಾಗಿದೆ. ಇದು ಸಂಕೀರ್ಣ ಕಾರ್ಬೋಹೈಡ್ರೇಟ್ಗಳನ್ನು ಒದಗಿಸಿ, ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಯಾಸವನ್ನು ದೂರ ಮಾಡುತ್ತದೆ. ಇದು ನಾರಿನ ಸಮೃದ್ಧ ಮೂಲವಾಗಿದ್ದು, ಇದು ಮಲಬದ್ಧತೆ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡಿ, ಮಲಬದ್ಧತೆಯನ್ನ ತಡೆಯುತ್ತದೆ.

4. ಮೂಳೆಗಳ ಖನಿಜ ಸಾಂದ್ರತೆಯನ್ನು ಹೆಚ್ಚಿಸಲು ಮತ್ತು ಮೂಳೆಗಳಿಗೆ ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ. ಬಂಜೆತನ ನಿವಾರಿಸಿ, ಫಲವತ್ತತೆ ಅಥವಾ ಸಂತಾನೋತ್ಪತ್ತಿ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಗಸಗಸೆಯಲ್ಲಿರುವ ಸತುವಿನಂತಹ ಖನಿಜಗಳು ದೃಷ್ಟಿ ಸುಧಾರಣೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ನಮ್ಮ ಕಣ್ಣುಗಳಿಗೆ ಪ್ರಯೋಜನಕಾರಿ.


ವಿಶೇಷ ಸೂಚನೆ : ಗಸಗಸೆಯ ಅತಿಯಾದ ಬಳಕೆಯು ಸಮಸ್ಯೆಗಳನ್ನು ಉಂಟು ಮಾಡಬಹುದು. ಆದ್ದರಿಂದ ದಿನಕ್ಕೆ 250 ಗ್ರಾಂ ಗಿಂತ ಹೆಚ್ಚು ಸೇವಿಸಬೇಡಿ. ಇದರಿಂದ ವಾಂತಿ, ಕಣ್ಣು ಮತ್ತು ಬಾಯಿ ಊತ, ಉಸಿರಾಟದ ತೊಂದರೆಯಂತ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು. ಗಸಗಸೆ ಬೀಜಗಳನ್ನು ಗರ್ಭಿಣಿಯರು ಸೇವಿಸಬಾರದು. ಇದು ಹುಟ್ಟಲಿರುವ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ.

Exit mobile version