ನಿಮ್ಮ ಮುಖ ಪಳ ಪಳ ಹೊಳೆಯಬೇಕಾ ? ಹಾಗಾದ್ರೆ ಈ ಟಿಪ್ಸ್ ಉಪಯೋಗಿಸಿ.!

ಸಾಮಾನ್ಯ ಜನರಿಂದ ಹಿಡಿದು ಸೆಲಬ್ರೆಟಿಗಳವರೆಗೂ ಎಲ್ಲರೂ ಮುಖದ ಕಾಂತಿ ಬಗ್ಗೆ ಕಾಳಜಿ ಹೊಂದಿರುತ್ತಾರೆ. ಹಾಗಾದ್ರೆ ಮನೆಯಲ್ಲೇ ಕುಳಿತು, ಮನೆಯಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸಿ ಮುಖದ ಕಾಂತಿಯನ್ನು ಹೆಚ್ಚಿಸುವ ಬಗ್ಗೆ ಇಲ್ಲಿದೆ ಟಿಪ್ಸ್.


ತೆಂಗಿನ ಎಣ್ಣೆ:

ತೆಂಗಿನ ಎಣ್ಣೆ ಮುಖದ ಆರೈಕೆಗೆ ಹೆಚ್ಚು ಸಹಕಾರಿಯಾಗಿದೆ. ಇದು ತೇವಾಂಶವನ್ನು ಉತ್ತಮ ರೀತಿಯಲ್ಲಿ ಒದಗಿಸುವುದಲ್ಲದೆ, ನಮ್ಮ ಚರ್ಮವನ್ನು ತಂಪಾಗಿರಿಸುತ್ತದೆ. ಮತ್ತು ಇದು ಅತ್ಯುತ್ತಮ ಆಂಟಿ-ಏಜಿಂಗ್ ಗುಣಗಳನ್ನು ಹೊಂದಿದೆ. ತೆಂಗಿನ ಎಣ್ಣೆ ನಮ್ಮ ಮುಖದ ಚರ್ಮವನ್ನು ವಯಸ್ಸಾದಂತೆ ಕಾಣುವುದನ್ನು ಕೂಡಾ ತಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜೊತೆಗೆ ಇದು ನಮ್ಮ ಮುಖದ ಕಾಂತಿ ಮತ್ತು ಹೊಳಪನ್ನು ಹೆಚ್ಚಿಸುತ್ತದೆ ಇದನ್ನು ನಾವು ಫೇಸ್ ಕ್ರೀಮ್ ಬಳಸುವಂತೆಯೇ ಬಳಕೆ ಮಾಡಬೇಕ. ತೆಂಗಿನ ಎಣ್ಣೆ ಮಾತ್ರವಲ್ಲದೆ ಎಳನೀರು ಕೂಡ ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದನ್ನು ಪ್ರತಿದಿನ ಸೇವಿಸುವುದರಿಂದ, ಕೆಲವೇ ದಿನಗಳಲ್ಲಿ ಮುಖ ಮತ್ತು ದೇಹದ ಇತರ ಭಾಗಗಳಲ್ಲಿ ವ್ಯತ್ಯಾಸವು ಗೋಚರಿಸುತ್ತದೆ.

ಅರಿಶಿನ :


ಚರ್ಮದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಅರಿಶಿನವು ಕೂಡಾ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ. ಮುಖದ ಕಾಂತಿ ಹೆಚ್ಚಿಸುವ ಮನೆ ಮದ್ದುಗಳಲ್ಲಿ, ಅರಿಶಿನವು ಫೋಟೊಜಿಂಗ್ ಮತ್ತು ಸೋರಿಯಾಸಿಸ್ ನಿಂದ ನಮ್ಮನ್ನು ರಕ್ಷಿಸುತ್ತದೆ. ಇದು ಆಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ, ಇದನ್ನು ಕಡಲೆ ಹಿಟ್ಟಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿದರೆ ಚರ್ಮಕ್ಕೆ ಜೀವ ತುಂಬುತ್ತದೆ.
ಅರಿಶಿನದೊಂದಿಗೆ ಕಡಲೆ ಹಿಟ್ಟು ಮತ್ತು ನೀರನ್ನು ಬೆರೆಸಿ, ನಂತರ ಈ ಸ್ಕ್ರಬ್ ಅನ್ನು ಮುಖದ ಮೇಲೆ ಹಚ್ಚಿ, ಮತ್ತು 10-15 ನಿಮಿಷಗಳ ನಂತರ ಅದು ಒಣಗಿದಾಗ ಅದನ್ನು ನಿಧಾನವಾಗಿ ಉಜ್ಜುವ ಮೂಲಕ ತೊಳೆಯಿರಿ ವಾರದಲ್ಲಿ ಒಂದು ದಿನ ಈ ರೀತಿ ಮಾಡುವುದರಿಂದ ಇದು ನಿಮ್ಮ ಚರ್ಮಕ್ಕೆ ತುಂಬಾ ಹೊಳಪನ್ನು ತರುತ್ತದೆ, ಮತ್ತು ಮುಖದ ಕಾಂತಿ ಹೆಚ್ಚಿಸುತ್ತದೆ

ಹಾಲು :

ನಿಮಗೆ ಒಣ ಚರ್ಮದ ಸಮಸ್ಯೆಇದ್ದರೆ, ಹಾಲಿಗಿಂತ ಉತ್ತಮವಾದ ಮಾಯಿಶ್ಚರೈಸರ್ ಬೇರೆ ಇಲ್ಲ. ಹಾಲಿನಲ್ಲಿರುವ ವಿಟಮಿನ್ ಎ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಮುಖದ ಸೌಂದರ್ಯ ಮತ್ತು ಕಾಂತಿಯನ್ನು ಹೆಚ್ಚಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಹಸಿ ಹಾಲು, ಕಡಲೆ ಹಿಟ್ಟು ಮತ್ತು ಜೇನುತುಪ್ಪವನ್ನು ಬೆರೆಸಿ ಪ್ಯಾಕ್ ತಯಾರಿಸಿ, ನಂತರ ಅದನ್ನು ಮುಖಕ್ಕೆ ಹಚ್ಚಿ, ಸುಮಾರು 15 ನಿಮಿಷಗಳ ನಂತರ ಅದನ್ನು ತೊಳೆಯಿರಿ, ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ.

Exit mobile version