ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

Ghee

ತುಪ್ಪ(Ghee) ಆರೋಗ್ಯಕರವಲ್ಲ ಎಂಬ ತಪ್ಪು ಕಲ್ಪನೆ ಅನೇಕರ ಮನಸ್ಸಿನಲ್ಲಿದೆ. ಆದರೆ ಇದು ಶುದ್ದ ಸುಳ್ಳು. ತುಪ್ಪ ತಿನ್ನುವುದರಿಂದ ಅನೇಕ ಆರೋಗ್ಯಕಾರಕ ಲಾಭಗಳನ್ನು ಪಡೆದುಕೊಳ್ಳಬಹುದು. ತುಪ್ಪವು ನಮ್ಮ ಆಹಾರದಲ್ಲಿ ಇರಲೇಬೇಕಾದ ಅತ್ಯಗತ್ಯ ಪದಾರ್ಥಗಳಲ್ಲಿ ಒಂದಾಗಿದೆ. ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹೀಗೆ ತುಪ್ಪವು ಅನೇಕ ಲಾಭಗಳನ್ನು ನಮಗೆ ನೀಡುತ್ತದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕೂದಲಿನ ಸಮಸ್ಯೆಗಳಿಗೆ ಪರಿಹಾರ : ತುಪ್ಪವು ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ. ಇವೆಲ್ಲವೂ ಕೂದಲಿನ(Hair) ಜೀವಕೋಶದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ತುಪ್ಪದಲ್ಲಿ ಕಂಡುಬರುವ ಕೊಬ್ಬಿನಾಮ್ಲಗಳು ಕೂದಲನ್ನು ಪೋಷಿಸುತ್ತದೆ, ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಕೂದಲನ್ನು ಹೈಡ್ರೇಟ್ ಮಾಡುತ್ತದೆ, ತಲೆಹೊಟ್ಟು(Dandruff) ಮತ್ತು ತಲೆ ತುರಿಕೆ ಸಮಸ್ಯೆಯನ್ನು ನಿವಾರಿಸುತ್ತದೆ.

ಅಲರ್ಜಿಗಳಿಗೆ ರಾಮಬಾಣ : ತುಪ್ಪವು ಬ್ಯುಟೈರೇಟ್ನ ಸಮೃದ್ಧ ಮೂಲವಾಗಿದೆ. ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಿ, ದೀರ್ಘಕಾಲದ ಕಾಯಿಲೆಗಳು ಮತ್ತು ವಿವಿಧ ಅಲರ್ಜಿಗಳಿಗೆ ರಾಮಬಾಣವಾಗಿದೆ. ಅದೇ ರೀತಿ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲು ತುಪ್ಪವು ಉತ್ತಮ ಆಯ್ಕೆಯಾಗಿದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್(Bad Cholestral) ಕಡಿಮೆ ಮಾಡಲು, ಜೀರ್ಣಕ್ರಿಯೆಗೆ ಸಹಾಯ, ಮಲಬದ್ಧತೆಯನ್ನು ನಿವಾರಿಸಲು ತುಪ್ಪವು ಅತ್ಯುತ್ತಮ ಆಯ್ಕೆಯಾಗಿದೆ.

ಮೆದುಳಿನ ಶಕ್ತಿಯನ್ನು ಸುಧಾರಿಸುತ್ತದೆ : ತುಪ್ಪವು ಮೆದುಳು, ಮೂಳೆ, ಹೃದಯ ಮತ್ತು ನರಮಂಡಲದ ಆರೋಗ್ಯಕರ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದನ್ನು ಸೀಮಿತ ಪ್ರಮಾಣದಲ್ಲಿ ಪ್ರತಿದಿನ ಸೇವಿಸುವುದರಿಂದ ಮೆದುಳಿಗೆ ತುಂಬಾ ಪ್ರಯೋಜನಕಾರಿ. ಇದು ಮೆದುಳಿನ ಕಾರ್ಯವನ್ನು ಬಲಪಡಿಸುತ್ತದೆ. ದೇಶಿ ಹಸುವಿನ ತುಪ್ಪ ಸೇವನೆಯು ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

ಮುಟ್ಟಿನ ಸಮಸ್ಯೆಗಳಿಗೆ ಪರಿಹಾರ : ಅನಿಯಮಿತ ಮುಟ್ಟಿನ ತೊಂದರೆಗಳನ್ನು ಎದುರಿಸುತ್ತಿರುವ ಮಹಿಳೆಯರು ತುಪ್ಪವನ್ನು ಹೆಚ್ಚಾಗಿ ಸೇವಿಸಬೇಕು. ತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ಅನಿಯಮಿತ ಮುಟ್ಟಿನ ತೊಂದರೆಗಳನ್ನು ನಿವಾರಿಸುತ್ತದೆ. ಏಕೆಂದರೆ ತುಪ್ಪವು ದೇಹದಲ್ಲಿನ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ.

ಶೀತಕ್ಕೆ ಒಳ್ಳೆಯದು : ಶೀತ(Cold) ಬಂದಾಗ ಹದವಾಗಿ ಕಾಯಿಸಿದ ತುಪ್ಪವನ್ನು ಮೂಗಿನ ನಳಿಕೆಯಲ್ಲಿ ಹಾಕಿಕೊಳ್ಳುವುದರಿಂದ ಉಸಿರಾಟವು ಸರಾಗವಾಗುತ್ತದೆ. ಆಯುರ್ವೇದವು(Ayurveda) ಬೆಚ್ಚಗಿನ ಶುದ್ಧ ಹಸುವಿನ ತುಪ್ಪದ ಕೆಲವು ಹನಿಗಳನ್ನು ಶೀತ ನಿವಾರಣೆಗೆ ಶಿಫಾರಸು ಮಾಡುತ್ತದೆ. ಹೀಗೆ ಮಾಡುವುದರಿಂದ ತ್ವರಿತ ಪರಿಹಾರ ಸಿಗುತ್ತದೆ.

Exit mobile version