ಕೆಪಿಸಿಸಿ ಅಧ್ಯಕ್ಷ(KPCC President) ಡಿ.ಕೆ.ಶಿವಕುಮಾರ್(DK Shivkumar) ಅವರ ಸ್ವಾತಂತ್ರ್ಯದ ನಡಿಗೆಯ ಉದ್ದೇಶ ಏನಾಗಿತ್ತು? ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ? ಎಂದು ರಾಜ್ಯ ಬಿಜೆಪಿ(State BJP) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸ್ವಾತಂತ್ರ್ಯದ ನಡಿಗೆಯನ್ನು ಲೇವಡಿ ಮಾಡಿದೆ.

“ಕಾಂಗ್ರೆಸ್ ಕಲಹ” ಎಂಬ ಹ್ಯಾಷ್‌ಟ್ಯಾಗ್(Hashtag) ಬಳಸಿ ಸರಣಿ ಟ್ವೀಟ್(Tweet) ಮಾಡಿರುವ ಬಿಜೆಪಿ(BJP), ಪ್ರತಿ ತಿಂಗಳು ಒಂದು ಕಾರ್ಯಕ್ರಮದ ಮೂಲಕ ಸದಾ ಚಾಲ್ತಿಯಲ್ಲಿರಲು ಕಾಂಗ್ರೆಸ್ ಲೆಕ್ಕ ಹಾಕಿದೆ. ಆದರೆ ಒಂದೇ ತಿಂಗಳಲ್ಲಿ ಮೂವರು ನಾಯಕರು ಒಬ್ಬರ ಮೇಲೊಬ್ಬರು ಪೈಪೋಟಿಗೆ ಬಿದ್ದವರಂತೆ ಉತ್ಸವ, ನಡಿಗೆ ಹಾಗೂ ಪ್ರಚಾರ ಯಾತ್ರೆ ಆರಂಭಿಸಿದ್ದಾರೆ.
ಮೊದಲು ಮನೆಯ ಜಗಳ ಬಗೆಹರಿಸಿಕೊಳ್ಳಿ, ನಂತರ ಜಗತ್ತಿನ ಸಮಸ್ಯೆ ಬಗ್ಗೆ ಮಾತನಾಡಿ. ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಸ್ಥಿತಿ ಹೇಗಿದೆಯೆಂದರೆ ಪರಸ್ಪರ ಸಹಕಾರಿ ಎನ್ನುತ್ತಲ್ಲೇ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆದು ಹಾಕುತ್ತಿದ್ದಾರೆ. ಎಲ್ಲರಿಗೂ ಮುಖ್ಯಮಂತ್ರಿಯಾಗುವ ಹಂಬಲ, ಆದರೆ ಮುಖ್ಯಮಂತ್ರಿಯಾಗಲು ಯೋಗ್ಯತೆ ಬೇಡವೇ? ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಒಳಮನೆಯಲ್ಲಿ ನೂರಾರು ರಂದ್ರ. ಹೈಕಮಾಂಡ್ ವಿರುದ್ಧ G23 ಮುಖಂಡರು ಸದಾ ದಂಗೆ ಏಳುತ್ತಿದ್ದರೂ ಎದುರಿಸಲಾಗದ ಕಾಂಗ್ರೆಸ್ ಹಡಗು ರಾಷ್ಟ್ರಮಟ್ಟದಲ್ಲೇ ಮುಳುಗಿ ಹೋಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಒಳಜಗಳ ಮತ್ತೆ ಬೀದಿಗೆ ಬಿದ್ದಿದೆ. ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಕಾಶ್ಮೀರ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಆರೋಗ್ಯವೇ ಆಘಾತಕಾರಿಯಾಗಿದೆ ಎಂದು ವ್ಯಂಗ್ಯವಾಡಿದೆ.